ಜೈಪುರ (ಪಿಟಿಐ): ಜಯದ ಉತ್ಸಾಹದೊಂದಿಗೆ ಹಿಂದಿರುಗಿ ಬಂದಿರುವ ರಾಜಸ್ತಾನ್ ರಾಯಲ್ಸ್ ತಂಡವು ತನ್ನ ನೆಲದಲ್ಲಿ ಡೆಕ್ಕನ್ ಚಾರ್ಜರ್ಸ್ ಎದುರು ಕೂಡ ಗೆಲ್ಲುವ ನೆಚ್ಚಿನ ತಂಡವಾಗಿ ಹೊಳೆಯುತ್ತಿದೆ.

ಮಂಗಳವಾರ ಇಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಟೂರ್ನಿಯ ಐದನೇ ಅವತರಣಿಕೆಯ ಇಪ್ಪತ್ತನೇ ಲೀಗ್ ಪಂದ್ಯದಲ್ಲಿ ಚಾರ್ಜರ್ಸ್ ಎದುರು ರಾಹುಲ್ ದ್ರಾವಿಡ್ ನೇತೃತ್ವದ ರಾಜಸ್ತಾನ್ ರಾಯಲ್ಸ್ ಬಲಾಢ್ಯವಾಗಿ ಕಾಣಿಸುವುದು ಸಹಜ.

ಆಡಿದ ಐದು ಪಂದ್ಯಗಳಲ್ಲಿ ಮೂರರಲ್ಲಿ ವಿಜಯ ಸಾಧಿಸಿರುವ ರಾಯಲ್ಸ್ ಸಾಮರ್ಥ್ಯದ ಬಗ್ಗೆ ಅನುಮಾನ ಪಡುವುದಕ್ಕೆ ಅವಕಾಶವಿಲ್ಲ. ಆದರೆ ಡೆಕ್ಕನ್ ಚಾರ್ಜರ್ಸ್ ಅಂಥ ವಿಶ್ವಾಸ ಮೂಡುವಂತೆ ತನ್ನ ಮೊದಲ ಎರಡು ಪಂದ್ಯಗಳಲ್ಲಿ ಆಡಿಲ್ಲ. ಚೆನ್ನೈ ಸೂಪರ್ ಕಿಂಗ್ಸ್ ಎದುರು 74 ರನ್ಗಳ ಅಂತರದಿಂದ ಸೋಲಿನ ಕಹಿಯುಂಡ ಅದು ನಂತರ ಮುಂಬೈ ಇಂಡಿಯನ್ಸ್ ವಿರುದ್ಧ ಐದು ವಿಕೆಟ್ಗಳಿಂದ ನಿರಾಸೆ ಹೊಂದಿತು. ಕುಮಾರ ಸಂಗಕ್ಕಾರ ನಾಯಕತ್ವದಲ್ಲಿ ಅದು ಐದನೇ ಅವತರಣಿಕೆಯಲ್ಲಿ ಇನ್ನೂ ಗೆಲುವಿನ ಸವಿ ಏನೆಂದು ಅರಿತಿಲ್ಲ.

ರಾಜಸ್ತಾನ್ ರಾಯಲ್ಸ್ ಮಾತ್ರ ಪ್ರಭಾವಿ ಆಟವಾಡಿ ಎದುರಾಳಿಗಳನ್ನು ಕಾಡುವ ಮಟ್ಟಕ್ಕೆ ಗಟ್ಟಿಯಾಗಿದೆ. ಮುಂಬೈ ಇಂಡಿಯನ್ಸ್ ಹಾಗೂ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧದ ಸೋಲು ಕೂಡ ಈ ತಂಡದ ಆಟಗಾರರ ವಿಶ್ವಾಸ ಕುಗ್ಗುವಂತೆ ಮಾಡಲಿಲ್ಲ.

ಸವಾಲು ಇರುವುದು ಡೆಕ್ಕನ್ ಚಾರ್ಜಸ್ ಮುಂದೆ. ಆದರೆ ಮೊದಲ ಎರಡು ಪಂದ್ಯಗಳ ನಂತರ ಅಭ್ಯಾಸ ಮಾಡುವುದಕ್ಕೆ ಸಾಕಷ್ಟು ಕಾಲಾವಕಾಶವಂತೂ ಅದಕ್ಕೆ ಸಿಕ್ಕಿದೆ. ಈ ಅವಧಿಯಲ್ಲಿ ಎಷ್ಟರ ಮಟ್ಟಿಗೆ ಅದು ತನ್ನ ಬ್ಯಾಟಿಂಗ್ ಶಕ್ತಿಯನ್ನು ಹೆಚ್ಚಿಸಿಕೊಂಡಿದೆ ಎಂದು ಕಾಯ್ದು ನೋಡಬೇಕು.

ಶೇನ್ ವಾರ್ನ್ ನಂತರ ರಾಜಸ್ತಾನ್ ರಾಯಲ್ಸ್ಗೆ ದ್ರಾವಿಡ್ ರೂಪದಲ್ಲಿ ಒಳ್ಳೆಯ ನಾಯಕ ಸಿಕ್ಕಿದ್ದಾರೆ. ಅವರ ನೇತೃತ್ವದಲ್ಲಿ ತಂಡವು ಪ್ರಬಲ ಹೋರಾಟ ನಡೆಸುತ್ತಾ ಸಾಗಿದೆ. ಅದರ ಫಲವಾಗಿ ಆರು ಪಾಯಿಂಟುಗಳನ್ನು ಹೊಂದಿ ಲೀಗ್ ಪಟ್ಟಿಯಲ್ಲಿ ಉತ್ತಮ ಸ್ಥಿತಿಯಲ್ಲಿದೆ.

ಬ್ಯಾಟಿಂಗ್ನಲ್ಲಿ ಕಾಡಿದ್ದ ಸಮಸ್ಯೆಗಳನ್ನು ತಿದ್ದಿಕೊಂಡಿರುವ ರಾಯಲ್ಸ್ ಕಳೆದ ಪಂದ್ಯದಲ್ಲಿ ಉತ್ತಮ ಮೊತ್ತ ಗಳಿಸಿದ್ದು ಗಮನ ಸೆಳೆಯುವಂಥ ಅಂಶ. ಭದ್ರ ಬುನಾದಿಯ ಮೇಲೆ ಇನಿಂಗ್ಸ್ ಕಟ್ಟುವಂಥ ಸತ್ವವುಳ್ಳ ಆಟವು ದ್ರಾವಿಡ್, ಅಜಿಂಕ್ಯಾ ರಹಾನೆ ಹಾಗೂ ಒವೈಸ್ ಷಾ ಅವರಿಂದ ಸಾಧ್ಯವಾಗಿದೆ. ಇಲ್ಲಿನ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿಯೂ ಅದೇ ಮಟ್ಟದಲ್ಲಿ ಬ್ಯಾಟ್ ಬೀಸಿದರೆ ಡೆಕ್ಕನ್ ಚಾರ್ಜರ್ಸ್ ಕುಗ್ಗಿ ಹೋಗುವುದು ಖಚಿತ.
ಪಂದ್ಯ ಆರಂಭ: ಸಂಜೆ 4.00ಕ್ಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.