ಗುರುವಾರ , ಮೇ 13, 2021
40 °C

ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಶರಣಾದ ಡೆಲ್ಲಿ ಡೇರ್ ಡೆವಿಲ್ಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು (ಪಿಟಿಐ) : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ ನ 5 ನೇ ಋತುವನ್ನು ಯಶಸ್ಸಿನೊಂದಿಗೆ ಆರಂಭಿಸಿದ್ದು, 20 ರನ್‌ಗಳಿಂದ ಡೆಲ್ಲಿ ಡೆವಿಲ್ಸ್ ತಂಡವನ್ನು ಶನಿವಾರ ಸಂಜೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಲಿಸಿತು.ಮೊದಲಿಗೆ ಬ್ಯಾಟಿಂಗ್ ಮಾಡಿದ ಡೇನಿಯಲ್ ವೆಟೋರಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ತಂಡವು ಗೆಲುವಿಗೆ  8 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿತು. ಎಬಿ ಡಿವಿಲಿಯರ್ಸ್ ಸಿಡಿಸಿದ ಆಕರ್ಷಕ ಅಜೇಯ 64 ರನ್‌ಗಳು ಪ್ರೇಕ್ಷಕರಿಗೆ ರಸದೌತಣವನ್ನೇ ನೀಡಿತು.ಸವಾಲನ್ನು ಸ್ವೀಕರಿಸಿ ಡೆಲ್ಲಿ ಡೇರ್ ಡೆವಿಲ್ಸ್ ತಂಡವು ಆರಂಭದಲ್ಲೇ ಎಡವಿತು. ನಾಯಕ ವೀರೇಂದ್ರ ಸೆಹ್ವಾಗ್ ಅವರ ಶೂನ್ಯ ಸಾಧನೆಯು ತಂಡವನ್ನು ಆತಂಕದಲ್ಲಿ ನೂಕಿತು. ಆ್ಯರನ್ ಫಿಂಚ್ 25 ಹಾಗೂ ನಮನ್ ಓಜಾ 33 ರನ್ ಗಳಿಸಿ ತಂಡಕ್ಕೆ ಚೇತರಿಕೆ ನೀಡಿದರು. ಕೊನೆಯಲ್ಲಿ ಇರ್ಫಾನ್ ಪಠಾಣ್ ಅವರು ಶರವೇಗದಲ್ಲಿ ರನ್ ಗಳಿಸುತ್ತಾ ಗೆಲುವಿನ ಆಶಾಭಾವನೆಯನ್ನು ಮೂಡಿಸಿದರಾದರೂ 24 ರನ್ ಗಳಿಸಿ ರನ್‌ಔಟ್ ಆದಾಗ ದೆಹಲಿ ಪಾಳೆಯದಲ್ಲಿ ಮಂಕು ಕವಿಯಿತು.ಅಂತಿಮವಾಗಿ ನಿಗದಿತ 20 ಓವರ್‌ಗಳಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡವು 7 ವಿಕೆಟ್ ಕಳೆದುಕೊಂಡು ಕೇವಲ 137 ರನ್ನುಗಳನ್ನಷ್ಟೆ ಗಳಿಸಲು ಶಕ್ತವಾಯಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 20 ರನ್‌ಗಳಿಂದ ವಿಜಯದ ನಗೆ ಬೀರಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.