ಬೆಂಗಳೂರು: ಕ್ರಿಸ್ ಗೇಲ್ ಅನುಪಸ್ಥಿತಿ, ವಿರಾಟ್ ಕೊಹ್ಲಿ ಬ್ಯಾಟಿಂಗ್ ವೈಫಲ್ಯದ ನಡುವೆಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಡೇನಿಯಲ್ ವೆಟೋರಿ ಬಳಗ 20 ರನ್ಗಳಿಂದ ಡೆಲ್ಲಿ ಡೇರ್ಡೆವಿಲ್ಸ್ ತಂಡವನ್ನು ಮಣಿಸಿತು.

ಕ್ರೀಡಾಂಗಣದ ಹಸಿರುಹಾಸಿನ ಮೇಲೆ ಚೆಲ್ಲಿದ್ದ ಹೊನಲು ಬೆಳಕಿನಡಿ ಮಿಂಚುವ ಮೂಲಕ ಆರ್ಸಿಬಿ ತಂಡದ ಹೀರೋಗಳಾಗಿ ಮೆರೆದದ್ದು ಎಬಿ ಡಿವಿಲಿಯರ್ಸ್ (ಅಜೇಯ 64, 42 ಎಸೆತ, 6 ಬೌಂ, 2 ಸಿಕ್ಸರ್) ಮತ್ತು ಮುತ್ತಯ್ಯ ಮುರಳೀಧರನ್ (25ಕ್ಕೆ 3). ಬ್ಯಾಟಿಂಗ್ ಕುಸಿತ ಕಂಡ ತಂಡಕ್ಕೆ ಡಿವಿಲಿಯರ್ಸ್ ಬೆನ್ನೆಲುಬಾಗಿ ನಿಂತರೆ, ಕೈಜಾರಿ ಹೋಗುತ್ತಿದ್ದ ಪಂದ್ಯವನ್ನು ತಮ್ಮ ಕೈಚಳಕದ ಮೂಲಕ ಆರ್ಸಿಬಿ ಹಿಡಿತಕ್ಕೆ ತರುವಲ್ಲಿ ಮುರಳಿ ಯಶಸ್ವಿಯಾದರು.

ಮೊದಲು ಬ್ಯಾಟ್ ಮಾಡಿದ ಬೆಂಗಳೂರಿನ ತಂಡ 20 ಓವರ್ಗಳಲ್ಲಿ 8 ವಿಕೆಟ್ಗೆ 157 ರನ್ ಗಳಿಸಿತು. ನಿಗದಿತ ಓವರ್ಗಳು ಕೊನೆಗೊಂಡಾಗ ಡೆಲ್ಲಿ ಏಳು ವಿಕೆಟ್ ಕಳೆದುಕೊಂಡು ಗಳಿಸಿದ್ದು 137 ರನ್ ಮಾತ್ರ. ತನ್ನಲ್ಲಿರುವ ಸಾಮರ್ಥ್ಯ ಇನ್ನೂ ಕುಗ್ಗಿಲ್ಲ ಎಂಬುದನ್ನು ಮುರಳಿ ಈ ಪಂದ್ಯದ ಮೂಲಕ ತೋರಿಸಿಕೊಟ್ಟರು.

ಬೌಲಿಂಗ್ ಆರಂಭಿಸಿದ ಜಹೀರ್ ಖಾನ್ ಅವರ ಓವರ್ನ ಮೊದಲ ಮೂರು ಎಸೆತಗಳನ್ನು ಬೌಂಡರಿಗಟ್ಟಿದ ಆ್ಯರನ್ ಫಿಂಚ್ ಡೆಲ್ಲಿ ತಂಡಕ್ಕೆ ಕನಸಿನ ಆರಂಭ ನೀಡಿದ್ದರು. ಆದರೆ ಅದೇ ಓವರ್ನ ಐದನೇ ಎಸೆತದಲ್ಲಿ ವೀರೇಂದ್ರ ಸೆಹ್ವಾಗ್ (0) ವಿಕೆಟ್ ಪಡೆದು ಜಹೀರ್ ತಿರುಗೇಟು ನೀಡಿದರು.

ಫಿಂಚ್ (25, 24 ಎಸೆತ, 3 ಬೌಂ) ಮತ್ತು ನಮನ್ ಓಜಾ (33, 26ಎಸೆತ, 4 ಬೌಂ, 1 ಸಿಕ್ಸರ್) ತಂಡವನ್ನು ಆರಂಭಿಕ ಕುಸಿತದಿಂದ ಪಾರು ಮಾಡುವ ಪ್ರಯತ್ನ ನಡೆಸಿದರು. ಈ ಹಂತದಲ್ಲಿ ಮುರಳಿ `ಜಾದೂ~ ತೋರಿದರು.

ಶ್ರೀಲಂಕಾದ ಈ ಬೌಲರ್ ತಮ್ಮ ಮೊದಲ ಮೂರು ಓವರ್ಗಳಲ್ಲಿ ಕ್ರಮವಾಗಿ ಓಜಾ, ಫಿಂಚ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ (3) ವಿಕೆಟ್ ಪಡೆದು ಡೆಲ್ಲಿ ತಂಡದ ಬ್ಯಾಟಿಂಗ್ನ ಬೆನ್ನೆಲುಬು ಮುರಿದರು.

ಮುರಳಿ ಮತ್ತು ವೆಟೋರಿ (28ಕ್ಕೆ 1) ಪ್ರಭಾವಿ ಬೌಲಿಂಗ್ ಕಾರಣ ಡೆಲ್ಲಿ ತಂಡಕ್ಕೆ 8.2 ರಿಂದ 14.3 ಓವರ್ಗಳ ನಡುವೆ ಯಾವುದೇ ಬೌಂಡರಿ ಮತ್ತು ಸಿಕ್ಸರ್ ಗಳಿಸಲು ಆಗಲಿಲ್ಲ. ಇರ್ಫಾನ್ ಪಠಾಣ್ (24, 15 ಎಸೆತ, 2 ಬೌಂ, 1 ಸಿಕ್ಸರ್) ಕೊನೆಯಲ್ಲಿ ಅಲ್ಪ ಹೋರಾಟ ತೋರಿದರಾದರೂ ಆಗಲೇ ಕಾಲ ಮಿಂಚಿಹೋಗಿತ್ತು.

ವಿಲಿಯರ್ಸ್ ಆಸರೆ: ಟಾಸ್ ಸೋತರೂ ಬ್ಯಾಟ್ ಮಾಡುವ ಅವಕಾಶ ಪಡೆದ ಆರ್ಸಿಬಿ ಪ್ರತಿ ರನ್ ಪೇರಿಸಲೂ ಬಹಳ ಪ್ರಯಾಸಪಟ್ಟಿತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆರೆದ ಅಭಿಮಾನಿಗಳಿಗೆ ಪಂದ್ಯದ ಆರಂಭಕ್ಕೆ ಮುನ್ನವೇ ನಿರಾಸೆ ಕಾದಿತ್ತು. ಕ್ರಿಸ್ ಗೇಲ್ ಆಡುವುದಿಲ್ಲ ಎಂಬ ಸುದ್ದಿ ತಿಳಿದದ್ದು ಇದಕ್ಕೆ ಕಾರಣ. ಫಿಟ್ನೆಸ್ ಸಮಸ್ಯೆಯಿಂದಾಗಿ ಅವರು ಕಣಕ್ಕಿಳಿಯಲಿಲ್ಲ.

ಆ್ಯಂಡ್ರ್ಯೂ ಮೆಕ್ಡೊನಾಲ್ಡ್ (30, 19 ಎಸೆತ, 4 ಬೌಂ, 2 ಸಿಕ್ಸರ್) ಹಾಗೂ ಚೇತೇಶ್ವರ ಪೂಜಾರ (11) ಮೊದಲ ವಿಕೆಟ್ಗೆ ನಾಲ್ಕು ಓವರ್ಗಳಲ್ಲಿ 37 ರನ್ ಕಲೆಹಾಕಿದರು. ಈ ವೇಳೆ ಆಘಾತ ನೀಡಿದ್ದು ಮಾರ್ನ್ ಮಾರ್ಕೆಲ್. ಅವರು ಅಲ್ಪ ಅಂತರದಲ್ಲಿ ಇಬ್ಬರನ್ನೂ ಪೆವಿಲಿಯನ್ಗೆ ಕಳುಹಿಸಿದರು.

ನಿರೀಕ್ಷೆಯ ಭಾರ ಹೊತ್ತುಕೊಂಡು ಕ್ರೀಸ್ಗೆ ಆಗಮಿಸಿದ ವಿರಾಟ್ ಕೊಹ್ಲಿ (8) ವೈಫಲ್ಯ ಅನುಭವಿಸಿದರು. ಗೇಲ್ ಅನುಪಸ್ಥಿತಿಯಲ್ಲಿ ಕೊಹ್ಲಿ ಮಿಂಚುವುದು ಅನಿವಾರ್ಯವಾಗಿತ್ತು. ಆದರೆ ಎದುರಾಳಿ ತಂಡ ಅದಕ್ಕೆ ಅವಕಾಶ ನೀಡಲಿಲ್ಲ. ಬಳಿಕ ಬಂದ ಸೌರಭ್ ತಿವಾರಿ (1) ಅಂಪೈರ್ ಕೆಟ್ಟ ತೀರ್ಪಿಗೆ ಔಟಾದರು. ಗ್ಲೆನ್ ಮ್ಯಾಕ್ಸ್ವೆಲ್ ಬೌಲಿಂಗ್ನಲ್ಲಿ ಚೆಂಡು ತಿವಾರಿ ಬ್ಯಾಟ್ನ ಅಂಚನ್ನು ಸವರಿ ಪ್ಯಾಡ್ಗೆ ಬಡಿದಿತ್ತು. ಆದರೆ ಅಂಪೈರ್ ಎಲ್ಬಿಡಬ್ಲ್ಯು ತೀರ್ಪಿತ್ತರು.

15ನೇ ಓವರ್ನಲ್ಲಿ ಆರನೇ ವಿಕೆಟ್ ರೂಪದಲ್ಲಿ ಡೇನಿಯಲ್ ವೆಟೋರಿ ಮರಳಿದಾಗ ತಂಡದ ಮೊತ್ತ 103. ಈ ವೇಳೆ ಜೊತೆಯಾದ ವಿಲಿಯರ್ಸ್ ಮತ್ತು ಆರ್. ವಿನಯ್ ಕುಮಾರ್ (16 ಎಸೆತಗಳಲ್ಲಿ 18) ಏಳನೇ ವಿಕೆಟ್ಗೆ 54 ರನ್ಗಳನ್ನು ಸೇರಿಸಿದರು. ತಂಡದ ಪರ ದಾಖಲಾದ ಅತ್ಯುತ್ತಮ ಜೊತೆಯಾಟ ಇದು.

ಆರ್ಸಿಬಿ ಐದು ಓವರ್ಗಳ ಕೊನೆಯಲ್ಲಿ ಒಂದು ವಿಕೆಟ್ಗೆ 41 ರನ್ ಗಳಿಸಿತ್ತು. ಮುಂದಿನ ಐದು ಓವರ್ಗಳಲ್ಲಿ ಕೇವಲ 28 ರನ್ ಗಳಿಸಿ ಮೂರು ಪ್ರಮುಖ ವಿಕೆಟ್ಗಳನ್ನು ಕಳೆದುಕೊಂಡಿತು. ತಂಡದ ರನ್ರೇಟ್ ಕುಗ್ಗಲು ಇದು ಕಾರಣ. ಆದರೆ ಕೊನೆಯಲ್ಲಿ ಡಿವಿಲಿಯರ್ಸ್ ಭರ್ಜರಿ ಬ್ಯಾಟಿಂಗ್ ಮೂಲಕ ಅದನ್ನು ಸರಿದೂಗಿಸಿದರು.

ಈ ವಿಕೆಟ್ಕೀಪರ್ ಬ್ಯಾಟ್ಸ್ಮನ್ 17 ರನ್ ಗಳಿಸಿದ್ದ ಸಂದರ್ಭ ಐಪಿಎಲ್ನಲ್ಲಿ ಒಂದು ಸಾವಿರ ರನ್ ಪೂರೈಸಿದ ಸಾಧನೆ ಮಾಡಿದರು. ಇರ್ಫಾನ್ ಪಠಾಣ್ ಎಸೆದ 19ನೇ ಓವರ್ನ ಮೊದಲ ಎಸೆತದಲ್ಲಿ ಚೆಂಡನ್ನು ಅವರು `ರಿವರ್ಸ್ ಸ್ವೀಪ್~ ಮೂಲಕ ಸಿಕ್ಸರ್ಗೆ ಅಟ್ಟಿದ್ದು ಚೇತೋಹಾರಿಯಾಗಿತ್ತು. ಇತರ ಬ್ಯಾಟ್ಸ್ಮನ್ಗಳು ವಿಫಲರಾದರೂ ದಕ್ಷಿಣ ಆಫ್ರಿಕಾದ ಈ ಆಟಗಾರ ಒತ್ತಡಕ್ಕೆ ಒಳಗಾಗದೆ ಇನಿಂಗ್ಸ್ ಕಟ್ಟಿದರು.

ಸ್ಕೋರು ವಿವರ
ರಾಯಲ್ ಚಾಲೆಂಜರ್ಸ್ ಬೆಂಗಳೂರು: 20 ಓವರ್ಗಳಲ್ಲಿ
8 ವಿಕೆಟ್ಗೆ 157
ಮೆಕ್ಡೊನಾಲ್ಡ್ ಸಿ ಬ್ರೇಸ್ವೆಲ್ ಬಿ ಮಾರ್ನ್ ಮಾರ್ಕೆಲ್ 30
ಚೇತೇಶ್ವರ ಪೂಜಾರ ಸಿ ಪಠಾಣ್ ಬಿ ಮಾರ್ನ್ ಮಾರ್ಕೆಲ್ 11
ವಿರಾಟ್ ಕೊಹ್ಲಿ ಸಿ ಯೋಗೇಶ್ ಬಿ ಡಗ್ ಬ್ರೇಸ್ವೆಲ್ 08
ಎಬಿ ಡಿವಿಲಿಯರ್ಸ್ ಔಟಾಗದೆ 64
ಸೌರಭ್ ತಿವಾರಿ ಎಲ್ಬಿಡಬ್ಲ್ಯು ಬಿ ಗ್ಲೆನ್ ಮ್ಯಾಕ್ಸ್ವೆಲ್ 01
ಮಾಯಂಕ್ ಅಗರ್ವಾಲ್ ಸಿ ಯೋಗೇಶ್ ಬಿ ನದೀಮ್ 16
ಡೇನಿಯಲ್ ವೆಟೋರಿ ರನೌಟ್ 03
ಆರ್. ವಿನಯ್ ಕುಮಾರ್ ಸಿ ಮಾರ್ಕೆಲ್ ಬಿ ಬ್ರೇಸ್ವೆಲ್ 18
ಹರ್ಷಲ್ ಪಟೇಲ್ ಬಿ ಡಗ್ ಬ್ರೇಸ್ವೆಲ್ 00
ಇತರೆ: (ವೈಡ್-2, ಲೆಗ್ಬೈ-4) 06
ವಿಕೆಟ್ ಪತನ: 1-37 (ಪೂಜಾರ; 3.6), 2-46 (ಮೆಕ್ಡೊನಾಲ್ಡ್; 5.6), 3-56 (ಕೊಹ್ಲಿ; 7.2), 4-59 (ತಿವಾರಿ; 8.1), 5-85 (ಮಾಯಂಕ್; 12.2), 6-103 (ವೆಟೋರಿ; 14.2), 7-157 (ವಿನಯ್; 19.5), 8-157 (ಹರ್ಷಲ್; 19.6)
ಬೌಲಿಂಗ್: ಇರ್ಫಾನ್ ಪಠಾಣ್ 4-0-47-0, ಡಗ್ ಬ್ರೇಸ್ವೆಲ್ 4-0-32-3, ಮಾರ್ನ್ ಮಾರ್ಕೆಲ್ 4-0-30-2, ಉಮೇಶ್ ಯಾದವ್ 2-0-8-0, ಶಾದಾಬ್ ನದೀಮ್ 4-0-26-1, ಗ್ಲೆನ್ ಮ್ಯಾಕ್ಸ್ವೆಲ್ 2-0-10-1

ಡೆಲ್ಲಿ ಡೇರ್ಡೆವಿಲ್ಸ್: 20 ಓವರ್ಗಳಲ್ಲಿ 7 ವಿಕೆಟ್ಗೆ 137
ಆ್ಯರನ್ ಫಿಂಚ್ ಎಲ್ಬಿಡಬ್ಲ್ಯು ಬಿ ಮುರಳೀಧರನ್ 25
ವೀರೇಂದ್ರ ಸೆಹ್ವಾಗ್ ಸಿ ಪೂಜಾರ ಬಿ ಜಹೀರ್ ಖಾನ್ 00
ನಮನ್ ಓಜಾ ಸಿ ಕೊಹ್ಲಿ ಬಿ ಮುತ್ತಯ್ಯ ಮುರಳೀಧರನ್ 33
ವೇಣುಗೋಪಾಲ ಸಿ ಮಾಯಂಕ್ ಬಿ ಮೆಕ್ಡೊನಾಲ್ಡ್ 18
ಗ್ಲೆನ್ ಮ್ಯಾಕ್ಸ್ವೆಲ್ ಸಿ ಜಹೀರ್ ಬಿ ಮುರಳೀಧರನ್ 03
ಯೋಗೇಶ್ ನಗರ್ ಸಿ ಹರ್ಷಲ್ ಬಿ ಡೇನಿಯಲ್ ವೆಟೋರಿ 16
ಇರ್ಫಾನ್ ಪಠಾಣ್ ರನೌಟ್ 24
ಡಗ್ ಬ್ರೇಸ್ವೆಲ್ ಔಟಾಗದೆ 12
ಮಾರ್ನ್ ಮಾರ್ಕೆಲ್ ಔಟಾಗದೆ 02
ಇತರೆ: (ವೈಡ್-2, ಲೆಗ್ಬೈ-2) 04
ವಿಕೆಟ್ ಪತನ: 1-13 (ಸೆಹ್ವಾಗ್; 0.5), 2-55 (ಓಜಾ; 7.3), 3-68 (ಫಿಂಚ್; 9.5), 4-76 (ಮ್ಯಾಕ್ಸ್ವೆಲ್; 11.4), 5-83 (ರಾವ್; 13.4), 6-115 (ಯೋಗೇಶ್; 16.6), 7-131 (ಪಠಾಣ್; 18.6)
ಬೌಲಿಂಗ್: ಜಹೀರ್ ಖಾನ್ 4-0-36-1, ಆರ್. ವಿನಯ್ ಕುಮಾರ್ 4-0-25-0, ಆ್ಯಂಡ್ರ್ಯೂ ಮೆಕ್ಡೊನಾಲ್ಡ್ 2-0-11-1, ಡೇನಿಯಲ್ ವೆಟೋರಿ 4-0-28-1, ಮುತ್ತಯ್ಯ ಮುರಳೀಧರನ್ 4-0-25-3, ಹರ್ಷಲ್ ಪಟೇಲ್ 2-0-10-0
ಫಲಿತಾಂಶ: ಆರ್ಸಿಬಿಗೆ 20 ರನ್ ಗೆಲುವು
ಪಂದ್ಯಶ್ರೇಷ್ಠ: ಎಬಿ ಡಿವಿಲಿಯರ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.