ಕಾರ್ಕಳ: `ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ~ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿ.ಸುನಿಲ್ ಕುಮಾರ್ ಇಲ್ಲಿ ತಿಳಿಸಿದರು.

ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಗುರುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ಜನರ ಬಳಿಗೆ ಹೋಗುವಾಗ ಇದನ್ನೇ ಪ್ರಮುಖವಾಗಿ ಪ್ರಸ್ತಾಪಿಸಲಿದ್ದೇನೆ~ ಎಂದರು.

`ಕೇಂದ್ರ ಸರ್ಕಾರದ ಭಯೋತ್ಪಾದನಾ ಚಟುವಟಿಕೆ ಹತ್ತಿಕ್ಕುವಲ್ಲಿ ವಿಫಲವಾಗಿದೆ. ಇದೀಗ ಚೀನಾವೂ ಭಾರತದ ಮೇಲೆ ಜಗಳಕ್ಕೆ ಕಾಲ್ಕೆರೆಯುತ್ತಿದೆ. ದೇಶದ ರಕ್ಷಣೆ ವಿಷಯದಲ್ಲೂ ಕೇಂದ್ರ ಸರ್ಕಾರ ನಿರಾಸಕ್ತಿ ತೊರಿಸುತ್ತಿದೆ~ ಎಂದರು.

`ಕರ್ನಾಟಕಕ್ಕೆ ಕೊಡುವ ಪಾಲಿನಲ್ಲಿ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ. ಅದಕ್ಕೆ ಬದ್ಧತೆಯಿಲ್ಲ. ಕೆಲವು ದಿನಗಳಿಂದೀಚೆ ಗ್ಯಾಸ್ ಟ್ಯಾಂಕರ್ ಮಾಲಕರು ಪ್ರತಿಭಟನೆಗೆ ಮುಂದಾಗಿದ್ದು, ಸಮಪರ್ಕಕ ಗ್ಯಾಸ್ ಪೂರೈಕೆಯ್ಲ್ಲಲಿ ಗೊಂದಲ ಉಂಟಾಗಿದೆ. ಕೇಂದ್ರ ಸರ್ಕಾರದ ಕೋಟ್ಯಂತರ ರೂ.ಹಗರಣ ಜೊತೆಗೆ ಬೆಲೆಯೇರಿಕೆಯಿಂದ ಜನತೆ ತತ್ತರಿಸಿದ್ದಾರೆ. ಸಾರ್ವಜನಿಕ ಜನಜೀವನ ದುಸ್ತರವಾಗಿದೆ. ಇದು ಕಾಂಗ್ರೆಸ್ನ ವಿರುದ್ಧ ಜನಾಭಿಪ್ರಾಯಕ್ಕೆ ಕಾರಣವಾಗಿದೆ~ ~ ಎಂದು ದೂರಿದರು

`ಕಾರ್ಕಳ ನನಗೆ ರಾಜಕೀಯವಾಗಿ ಜನ್ಮ ನೀಡಿದ ಕ್ಷೇತ್ರ. 2004ರಲ್ಲಿ ಈ ಕ್ಷೇತ್ರದ ಜನತೆ ನನ್ನನ್ನು ಶಾಸಕನಾಗಿ ಆರಿಸಿದ್ದರು. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದೇನೆ. ಇದೀಗ ನಾನು ಲೋಕಸಭಾ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದು ಈ ಕ್ಷೇತ್ರದಿಂದ ಅತೀ ಹೆಚ್ಚು ಅಂತರವನ್ನು ನಿರೀಕ್ಷಿಸಿದ್ದೇನೆ~ ಎಂದರು.

ಹಿರಿಯ ಬಿಜೆಪಿ ನಾಯಕ ಬೋಳ ಪ್ರಭಾಕರ ಕಾಮತ್, ಕ್ಷೇತ್ರ ಘಟಕದ ಅಧ್ಯಕ್ಷ ಮಣಿರಾಜ ಶೆಟ್ಟಿ, ತಾ.ಪಂ ಅಧ್ಯಕ್ಷ ಬೋಳ ಜಯರಾಮ ಸಾಲ್ಯಾನ್, ಉಪಾಧ್ಯಕ್ಷ ರವೀಂದ್ರ ಕುಮಾರ್, ಉದಯ ಎಸ್. ಕೋಟ್ಯಾನ್, ಸವಿತಾ ಶಿವಾನಂದ ಕೋಟ್ಯಾನ್, ಅಂತೋನಿ ಡಿಸೋಜ, ಸುವೃತ್ ಕುಮಾರ್, ಆನಂದ ಬಂಡೀಮಠ, ಪ್ರದೀಪ್ ಕೋಟ್ಯಾನ್, ಸಾಣೂರು ನರಸಿಂಹ ಕಾಮತ್, ಪುರುಷೋತ್ತಮ ರಾವ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.