ಗುರುವಾರ , ಜನವರಿ 23, 2020
23 °C

ರಾಷ್ಟ್ರೀಯ ಟ್ರ್ಯಾಕ್‌ ಸೈಕ್ಲಿಂಗ್ ಚಾಂಪಿಯನ್‌ಷಿಪ್‌: ಸೀಮಾ ಕಂಚಿನ ಸಾಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ವಿಜಾಪುರ ಕ್ರೀಡಾ ನಿಲಯದ ಸೈಕ್ಲಿಸ್ಟ್‌ ಸೀಮಾ ಆಡಗಲ್‌ ಬುಧವಾರ ಮಣಿಪುರದ ಇಂಫಾಲ್‌ನಲ್ಲಿ ಆರಂಭಗೊಂಡ ರಾಷ್ಟ್ರೀಯ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಸಾಧನೆ ಮಾಡಿದರು. ಈ ಮೂಲಕ ಕೂಟದಲ್ಲಿ ಕರ್ನಾಟಕ ಪದಕಗಳ ಖಾತೆ ತೆರೆಯಿತು.16 ವರ್ಷದ ಒಳಗಿನ ಬಾಲಕಿಯರ 4 ಕಿ.ಮೀ. ಸ್ಕ್ರ್ಯಾಚ್ ರೇಸ್‌ನಲ್ಲಿ ಸೀಮಾ 7 ನಿಮಿಷ, 25.006 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಕಂಚಿನ ಪಡೆದ ಪಡೆದರು. ಬಾಗಲಕೋಟೆ ಜಿಲ್ಲೆಯ ತುಳಸಿಗೆರೆ ನಿವಾಸಿಯಾಗಿರುವ ಸೀಮಾ ವಿಜಾಪುರದಲ್ಲಿ ಪ್ರಥಮ ಪಿಯು ಓದುತ್ತಿದ್ದಾರೆ. ಅರ್ಹತೆ: ಬಾಲಕರ 18 ವರ್ಷದ ಒಳಗಿನವರ ವಿಭಾಗದ 1000 ಮೀಟರ್‌ ಸ್ಪ್ರಿಂಟ್‌ ರೇಸ್‌ನಲ್ಲಿ ಮಾಳಪ್ಪ ಮುರ್ತೆನ್ನವರ  ಮುಂದಿನ ಸುತ್ತಿಗೆ ಅರ್ಹತೆ ಹೊಂದಿದರು. ಟೂರ್ನಿಯು ಇದೇ 8ರವರೆಗೆ ನಡೆಯಲಿದ್ದು, ರಾಜ್ಯದಿಂದ 24 ಸ್ಪರ್ಧಿಗಳು ಪಾಲ್ಗೊಂಡಿದ್ದಾರೆ.

ಪ್ರತಿಕ್ರಿಯಿಸಿ (+)