ನವದೆಹಲಿ (ಪಿಟಿಐ/ಐಎಎನ್ಎಸ್): ಭಾರತದ ಸೈಕ್ಸಿಂಗ್ ಕ್ರೀಡಾಪಟುಗಳು ಕುತೂಹಲದಿಂದ ಎದುರು ನೋಡುತ್ತಿದ್ದ ಮಹತ್ವಾಕಾಂಕ್ಷೆಯ ಯೋಜನೆ ರಾಷ್ಟ್ರೀಯ ಸೈಕ್ಲಿಂಗ್ ಅಕಾಡೆಮಿಗೆ ಚಾಲನೆ ಲಭಿಸಿದೆ.

ಇಂದಿರಾ ಗಾಂಧಿ ಕ್ರೀಡಾ ಸಂಕೀರ್ಣದಲ್ಲಿ ನಿರ್ಮಿಸಲಾಗಿ ರುವ ಈ ಅಕಾಡೆಮಿಯನ್ನು ಬುಧವಾರ ಕೇಂದ್ರ ಕ್ರೀಡಾ ಸಚಿವ ಜಿತೇಂದ್ರ ಸಿಂಗ್ ಉದ್ಘಾಟಿಸಿದರು. ಯುವ ಪ್ರತಿಭೆಗಳಿಗೆ ತರಬೇತಿ ನೀಡಲು ನಿರ್ಮಿಸಲಾಗಿರುವ ರಾಷ್ಟ್ರೀಯ ಸೈಕ್ಲಿಂಗ್ ಅಕಾಡೆಮಿಯು ಏಪ್ರಿಲ್ 1ರಿಂದ ಕಾರ್ಯನಿರ್ವಹಿಸಲಿದೆ.

ಈ ಅಕಾಡೆಮಿಯು ಭಾರತ ಕ್ರೀಡಾ ಪ್ರಾಧಿಕಾರ (ಎಸ್ಎಐ) ಅಧೀನದಲ್ಲಿ ಕಾರ್ಯನಿರ್ವಹಿಸಲಿದೆ. ಭಾರತ ಸೈಕ್ಲಿಂಗ್ ಫೆಡರೇಷನ್ ಸಹಯೋಗದೊಂದಿಗೆ ವಿವಿಧ ರಾಜ್ಯಗಳ 40 ಮಂದಿ ಪ್ರತಿಭಾವಂತ ಸೈಕ್ಲಿಸ್ಟ್ಗಳನ್ನು ಶೋಧಿಸಿ ಇಲ್ಲಿ ತರಬೇತಿ ನೀಡಲಾಗುತ್ತದೆ. ಈ ಕ್ರೀಡಾಪಟುಗಳ ವಾಸ್ತವ್ಯ ಹಾಗೂ ಶಿಕ್ಷಣ ವ್ಯವಸ್ಥೆಯನ್ನೂ ಈ ಅಕಾಡೆಮಿ ನೋಡಿಕೊಳ್ಳಲಿದೆ.

ಇಲ್ಲಿ ಒಳಾಂಗಣ ಟ್ರ್ಯಾಕ್ ನಿರ್ಮಿಸಲಾಗಿದೆ. ಏಷ್ಯಾದಲ್ಲಿ ಇಂಥ ಯೋಜನೆ ಇರುವುದು ಜಪಾನ್ ಮತ್ತು ಕೊರಿಯಾದಲ್ಲಿ ಮಾತ್ರ. ಮಲೇಷ್ಯಾ ಹಾಗೂ ಇರಾನ್ನ ಸೈಕ್ಲಿಸ್ಟ್ಗಳು ಕೂಡ ಇಲ್ಲಿಗೆ ಬಂದು ತರಬೇತಿಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.

‘ದೇಶದಲ್ಲಿ ಪ್ರತಿಭಾವಂತ ಸೈಕ್ಲಿಸ್ಟ್ಗಳಿದ್ದಾರೆ. ಅದಕ್ಕಾಗಿಯೇ ನಾವು ಇಂಥ ಯೋಜನೆ ರೂಪಿಸಿದ್ದೇವೆ. ಏಷ್ಯಾದ ಉಳಿದ ದೇಶಗಳು ಕೂಡ ಇಲ್ಲಿಗೆ ಬಂದು ತರಬೇತಿ ಪಡೆಯಬಹುದು’ ಎಂದು ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.

ಭಾರತದ ಬಾಕ್ಸಿಂಗ್ ಫೆಡರೇಷನ್ನ (ಐಬಿಎಫ್) ಮಾನ್ಯತೆಯನ್ನು ಅಂತರರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆಯು ರದ್ದುಗೊಳಿಸಿರುವುದು ಬಾಕ್ಸರ್ಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ’ ಎಂದು ಅವರು ನುಡಿದಿದ್ದಾರೆ.
‘ಬಾಕ್ಸರ್ಗಳಿಗೆ ಸರ್ಕಾರದಿಂದ ಅಗತ್ಯ ನೆರವು ಹಾಗೂ ಸೌಲಭ್ಯ ನೀಡಲಾಗುವುದು. ಮಾನ್ಯತೆ ರದ್ದಾಗಿರುವುದರಿಂದ ಬಾಕ್ಸರ್ಗಳಿಗೆ ಯಾವುದೇ ತೊಂದರೆಯಾಗಬಾರದು’ ಎಂದು ಅವರು ಹೇಳಿದ್ದಾರೆ.

ಹಾಕಿ ಇಂಡಿಯಾಕ್ಕೆ ರಾಷ್ಟ್ರೀಯ ಕ್ರೀಡಾ ಫೆಡರೇಷನ್ (ಎನ್ಎಸ್ಎಫ್) ಮಾನ್ಯತೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಅಂತರರಾಷ್ಟ್ರೀಯ ಕ್ರೀಡಾ ಸಂಸ್ಥೆಯಿಂದ ಮಾನ್ಯತೆ ಪಡೆದ ಎಲ್ಲಾ ಕ್ರೀಡೆಗಳಿಗೆ ಎನ್ಎಸ್ಎಫ್ ಮಾನ್ಯತೆ ನೀಡಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.