ರಾಜ್ಯದಲ್ಲಿ ಅತ್ಯಂತ ಹಿಂದುಳಿದಿರುವ ಹೈದರಾಬಾದ್ ಕರ್ನಾಟಕದ ಜನತೆ ಸಂತಸದಿಂದ ಬೀಗಲು ಕೇಂದ್ರ ಸರ್ಕಾರದ ಅಧಿಸೂಚನೆಯೊಂದು ಕಾರಣವಾಗಿದೆ. ಹುಮ್ನಾಬಾದ್- ಬಿಜಾಪುರ (ಜೇವರ್ಗಿ ಮಾರ್ಗ)ನಡುವಿನ ರಸ್ತೆಯನ್ನು ‘ರಾಷ್ಟ್ರೀಯ ಹೆದ್ದಾರಿ 218(ಇ)’ ಎಂದು ಅಧಿಸೂಚನೆ ಹೊರಡಿಸಿ ಅದರ ನಿರ್ವಹಣೆಯ ಉಸ್ತುವಾರಿಯನ್ನು ಕೇಂದ್ರ ಸರ್ಕಾರ ವಹಿಸಿಕೊಂಡಿರುವುದೇ ಈ ಭಾಗದ ಜನ ಸಂತಸಪಡಲು ಕಾರಣ.

ಸ್ವಾತಂತ್ರ್ಯ ಲಭಿಸಿ 62 ವರ್ಷಗಳು ಗತಿಸಿದ್ದರೂ ಈ ಭಾಗದಲ್ಲಿ ಒಂದು ಕಿ.ಮೀ ಸಹ ರಾಷ್ಟ್ರೀಯ ಹೆದ್ದಾರಿ ಎಂದು ಘೋಷಣೆಯಾಗಿರಲಿಲ್ಲ. ಈಗಿನ ಕೊಪ್ಪಳ ಜಿಲ್ಲೆಯ ಕುಷ್ಟಗಿ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 13 (ಸೋಲಾಪುರದಿಂದ ಚಿತ್ರದುರ್ಗ) ಮತ್ತು ಬೀದರ್ ಜಿಲ್ಲೆಯ ಹುಮ್ನಾಬಾದ್ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 9 (ಪುಣೆಯಿಂದ ಹೈದರಾಬಾದ್)ಗಳು ಸ್ವಾತಂತ್ರ್ಯ ಪೂರ್ವದಲ್ಲಿಯೇ ನಿರ್ಮಾಣವಾದವುಗಳು.

ಯಾವುದೇ ಭಾಗದ ಸರ್ವತೋಮುಖ ಅಭಿವೃದ್ದಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಪಾತ್ರ ತುಂಬಾ ಮಹತ್ವದ್ದು. ಸರಕು ಸಾಗಣೆ ಸುಗಮವಾಗಲು ರಾಷ್ಟ್ರೀಯ ಹೆದ್ದಾರಿ ಅವಶ್ಯಕ. ಬೀದರ್ -ಶ್ರಿರಂಗಪಟ್ಟಣ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿಸುವ ರಾಜ್ಯ ಸರ್ಕಾರದ ಪ್ರಸ್ತಾವನೆ ಹಲವಾರು ವರ್ಷಗಳಿಂದ ಕೇಂದ್ರ ಸರ್ಕಾರದ ಮುಂದಿದೆ. ಸಾಕಷ್ಟು ಸಲ ಈ ಕುರಿತು ಸಂಸತ್ತಿನಲ್ಲಿ ಪ್ರಶ್ನಿಸಿದಾಗಲೆಲ್ಲ ಕೇಂದ್ರ ಸರ್ಕಾರದ ನಕಾರಾತ್ಮಕ ನಿಲುವು ಬಹಿರಂಗವಾಗಿದೆ.

ಈ ಎರಡು ಐತಿಹಾಸಿಕ ನಗರಗಳನ್ನು ಸಂಪರ್ಕಿಸುವ ಈ ರಸ್ತೆಗೆ ಕೇಂದ್ರದ ನಿರಾಸಕ್ತಿ ಮನವರಿಕೆಯಾಗುತ್ತಿಲ್ಲ. ರಾಜ್ಯ ಸರ್ಕಾರ ಈಗಾಗಲೇ ಬೀದರ್-ಶ್ರಿರಂಗಪಟ್ಟಣ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯ ಗುಣಮಟ್ಟದಲ್ಲಿ ನಿರ್ಮಿಸಿದೆ. ಈಗ ಆಗಬೇಕಾಗಿರುವುದು ಈ ಮಾರ್ಗವನ್ನು ರಾಷ್ಟ್ರೀಯ ಹೆದ್ದಾರಿ ಎಂದು ಔಪಚಾರಿಕ ಘೋಷಣೆ ಮಾಡುವುದು ಮಾತ್ರ.

ಕೊನೆಯ ಪಕ್ಷ ಬೀದರ್ನಿಂದ ಲಿಂಗಸಗೂರ್, ಸಿಂಧನೂರ್, ಬಳ್ಳಾರಿ, ಚಳ್ಳಕೆರೆ ಮೂಲಕ ರಾಷ್ಟ್ರೀಯ ಹೆದ್ದಾರಿ 4 ರ ಹಿರಿಯೂರುವರೆಗಾದರೂ ಅಧಿಸೂಚನೆ ಹೊರಡಿಸಲು ಯಾವ ಅಡ್ಡಿಯೂ ಇಲ್ಲ. ಕೇಂದ್ರದಲ್ಲಿರುವ ರಾಜ್ಯದ ಸಚಿವರು ಗಮನ ಹರಿಸಬೇಕಾಗಿದೆ. ಅಷ್ಟೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.