ಬುಧವಾರ, ಮೇ 12, 2021
24 °C

ರಿಷಿ ವಿರುದ್ಧ ಪ್ರಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಸೇನಾಪಡೆಗೆ ಟಟ್ರಾ ಟ್ರಕ್‌ಗಳ ಪೂರೈಕೆಗೆ ಸಂಬಂಧಿಸಿದಂತೆ ಟಟ್ರಾ ಸಿಪೋಕ್ಸ್ ಯುಕೆ ಹಾಗೂ ಬೆಮೆಲ್ ನಡುವೆ ಆದ ಒಪ್ಪಂದಲ್ಲಿ ಹಣಕಾಸು ಅವ್ಯವಹಾರ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ (ಇಡಿ) ವೆಕ್ಟ್ರಾ ಮುಖ್ಯಸ್ಥ ರವೀಂದರ್ ರಿಷಿ ವಿರುದ್ಧ ಅಕ್ರಮ ಹಣ ಚಲಾವಣೆಯ ಪ್ರಕರಣ ದಾಖಲಿಸಿದೆ.ಸಿಬಿಐ ಹಾಗೂ ಇತರ ಅಧಿಕೃತ ಮೂಲಗಳಿಂದ ಮಾಹಿತಿ ಪಡೆದಿರುವ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿದ್ದು, ರಿಷಿ ಹಾಗೂ ಇತರರನ್ನು ಈ ಸಂಬಂಧ ಪ್ರಶ್ನಿಸಲಿದೆ. ಅಗತ್ಯ ಬಿದ್ದಲ್ಲಿ ಬೆಮೆಲ್ ಹಾಗೂ ರಕ್ಷಣಾ ಸಚಿವಾಲಯದಿಂದಲೂ `ಇಡಿ~ ವಿವರಣೆ ಕೇಳಲಿದೆ ಎಂದು ಮೂಲಗಳು ತಿಳಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.