ಮಂಗಳವಾರ, ಜೂನ್ 15, 2021
21 °C

ರೂ 7 ಕೋಟಿ ಆಸ್ತಿ ಬಿಟ್ಟುಹೋದ ಭಿಕ್ಷುಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೆಡ್ಡಾ (ಪಿಟಿಐ): ನೂರು ವರ್ಷದ ಸೌದಿ ಅರೇಬಿಯಾದ ಭಿಕ್ಷುಕಿಯೊಬ್ಬಳು ಇದ್ದಕ್ಕಿದ್ದ ಹಾಗೆ ತನ್ನ ಮನೆಯಲ್ಲಿ ಮೃತಪಟ್ಟಿದ್ದಾಳೆ. ಬರಿ ಇಷ್ಟೇ ಆಗಿದ್ದರೆ ಅದರಲ್ಲಿ ವಿಶೇಷ ಏನಿಲ್ಲ, ಆದರೆ ಈಕೆ ತನ್ನ ಜೀವಿತಾವಧಿಯಲ್ಲಿ ಭಿಕ್ಷೆ ಬೇಡಿ ಸಂಪಾದಿಸಿದ ಆಸ್ತಿಪಾಸ್ತಿಯ ಮೊತ್ತ ಸುಮಾರು ಏಳು ಕೋಟಿ ರೂಪಾಯಿ ಎನ್ನುವುದು ಮಾತ್ರ ಕುತೂಹಲ ಸಂಗತಿ.ಎಷಾ ಹೆಸರಿನ ಈ ಅಂಧ ಮಹಿಳೆ  ಜೆಡ್ಡಾ ಬೀದಿಗಳಲ್ಲಿ  ಸುಮಾರು 50 ವರ್ಷಗಳ ಕಾಲ ಭಿಕ್ಷೆ ಎತ್ತಿ ಗಳಿಸಿದ ಆಸ್ತಿಯಲ್ಲಿ ನಗದು ಜತೆ ಚಿನ್ನದ ನಾಣ್ಯ, ಆಭರಣ, ನಾಲ್ಕು ಕಟ್ಟಡಗಳೂ ಸೇರಿವೆ.ಎಷಾ ಜತೆಯಲ್ಲೇ ಬೆಳೆದು ದೊಡ್ಡವನಾದ ಅಹ್ಮದ್‌ ಅಲ್‌ಸಯೀದಿ ಹೇಳುವಂತೆ, ‘ಎಷಾಗೆ ಆಕೆ ತಾಯಿ ಹಾಗೂ ತಂಗಿ ಬಿಟ್ಟು ಬೇರೆ ಯಾರೂ ಸಂಬಂಧಿಗಳು ಇರಲಿಲ್ಲ. ಇವರೂ ಸಹ  ಎಷಾ ಜತೆಯಲ್ಲೇ ಭಿಕ್ಷೆ ಬೇಡಿದವರು’ ಎಂದು ಹೇಳಿರುವುದಾಗಿ ‘ಸೌದಿ ಗೆಜೆಟ್‌’ ವರದಿಮಾಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.