ಮಂಗಳವಾರ, ಜೂನ್ 15, 2021
23 °C

ರೂ.863 ಕೋಟಿ ಮೊತ್ತದ ಜಗನ್‌ ಆಸ್ತಿ ಜಪ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಆಂಧ್ರಪ್ರದೇಶದಲ್ಲಿ ಕೈಗೊಳ್ಳಲಾದ ಮೂಲಸೌಕರ್ಯ ಯೋಜನೆಯಲ್ಲಿ ಅಕ್ರಮ ಹಣ ವರ್ಗಾವಣೆ ಆದ ಪ್ರಕರಣದಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ ನಾಯಕ ಜಗನ್‌ಮೋಹನ್‌ ರೆಡ್ಡಿ ಹಾಗೂ ಅವರ ಆಪ್ತರಿಗೆ ಸೇರಿದ ರೂ.863 ಕೋಟಿ ಮೊತ್ತದ ಆಸ್ತಿಗಳನ್ನು ತನಿಖೆ ನಡೆಸಿರುವ ಜಾರಿ ನಿರ್ದೇಶನಾಲಯ (ಇಡಿ) ಜಪ್ತಿ ಮಾಡಿಕೊಂಡಿದೆ.ಹಿಂದಿನ ಆಂಧ್ರ ಸರ್ಕಾರದಿಂದ (ಜಗನ್‌ ತಂದೆ ವೈ.ಎಸ್‌. ರಾಜಶೇಖರ ರೆಡ್ಡಿ ಮುಖ್ಯಮಂತ್ರಿ ಆಗಿದ್ದ ಅವಧಿ) ಜಗನ್‌ ಹಾಗೂ ಅವರ ಆಪ್ತ ನಿಮ್ಮಗಡ ಪ್ರಸಾದ್‌ ಅವರ ಕಂಪೆನಿಗಳು ನೆರವು ಪಡೆದಿವೆ ಎಂಬ ಆರೋಪದಡಿ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.ವಿವಿಧ ಜಿಲ್ಲೆಗಳ ನಡುವೆ ರಸ್ತೆ ನಿರ್ಮಿಸುವ ‘ವ್ಯಾನ್‌ಪಿಕ್‌’ ಕಂಪೆನಿಗೆ ಆಗಿನ ಸರ್ಕಾರ ಅಕ್ರಮವಾಗಿ ಹಲವು ರಿಯಾಯತಿಗಳನ್ನು ನೀಡಿತ್ತು.

ಜಗನ್‌ ಕಂಪೆನಿಗಳ ಅಕ್ರಮ ಹಣಕಾಸು  ವ್ಯವಹಾರಗಳ ಕುರಿತು ಸಿಬಿಐ ಸಲ್ಲಿಸಿದ ಎಫ್‌ಐಆರ್‌ ಆಧರಿಸಿ ನಿರ್ದೇಶನಾಲಯ 2012ರಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದೆ.ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ನಿರ್ದೇಶನಾಲಯ ಜಪ್ತಿ ಮಾಡಿಕೊಂಡ ಆಸ್ತಿಗಳ ಪೈಕಿ ಇದು ಗರಿಷ್ಠ ಪ್ರಮಾಣದ್ದು ಎನ್ನಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.