ರೆಡ್ಡಿಗಳ ಆಪ್ತ ಶ್ರೀನಿವಾಸ್ ಮನೆ ಮೇಲೆ ಸಿಬಿಐ ದಾಳಿ

7

ರೆಡ್ಡಿಗಳ ಆಪ್ತ ಶ್ರೀನಿವಾಸ್ ಮನೆ ಮೇಲೆ ಸಿಬಿಐ ದಾಳಿ

Published:
Updated:

ಬಳ್ಳಾರಿ: ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ, ಬಂಧಿತ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಅವರ ಆಪ್ತರಾಗಿದ್ದ ಶ್ರೀನಿವಾಸ್ ಎಂಬುವವರ ಮನೆಯ ಮೇಲೆ ಶನಿವಾರ ದಾಳಿ ನಡೆಸಿ, ಪರಿಶೀಲಿಸಿದೆ.ಸ್ಥಳೀಯ ಬಸವೇಶ್ವರ ನಗರದಲ್ಲಿರುವ ಶ್ರೀನಿವಾಸ್ ಅವರ ನಿವಾಸಕ್ಕೆ ಮಧ್ಯಾಹ್ನ  ತೆರಳಿದ ಸಿಬಿಐ ಸಿಬ್ಬಂದಿ, ಸಂಜೆಯವರೆಗೂ ಅಲ್ಲಿಯೇ ಇದ್ದು, ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡರು ಎಂದು ಮೂಲಗಳು ಹೇಳಿವೆ.

ಸದ್ಯ ಬಳ್ಳಾರಿಯಲ್ಲೇ ಬೀಡುಬಿ

ಟ್ಟಿರುವ ಸಿಬಿಐ ಸಿಬ್ಬಂದಿ ತನಿಖೆಯನ್ನು ತೀವ್ರಗೊಳಿಸಿದ್ದು, ಬಂಧಿತ ಜನಾರ್ದನರೆಡ್ಡಿ ಹಾಗೂ ಬಿ.ವಿ. ಶ್ರೀನಿವಾಸರೆಡ್ಡಿ ಅವರ ನಿಕಟವರ್ತಿಗಳ ಚಲನವಲನಗಳ ಮೇಲೆ ನಿಗಾ ಇರಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry