ನಿಪ್ಪಾಣಿ: ದೆಹಲಿಯ ರೆಡ್ ಆರ್ಮಿ ಹಾಗೂ ಮುಂಬೈಯ ಕೇಂದ್ರ ರೈಲ್ವೆ ತಂಡದವರು ಇಲ್ಲಿ ಭಾನುವಾರ ರಾತ್ರಿ ಮುಕ್ತಾಯಗೊಂಡ ಅಖಿಲ ಭಾರತ ‘ಎ’ ಗ್ರೇಡ್ ಹೊನಲು ಬೆಳಕಿನ ಕಬಡ್ಡಿ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದ ಪ್ರಶಸ್ತಿ ಗೆದ್ದುಕೊಂಡರು.

ಯಕ್ಸಂಬಾದ ಜೊಲ್ಲೆ ಉದ್ಯೋಗ ಸಮೂಹ ಹಾಗೂ ನಗರದ ಯುವಕ ಮಂಡಳ ಜಂಟಿಯಾಗಿ ಮುನ್ಸಿಪಲ್ ಪ್ರೌಢಶಾಲೆಯ ಮೈದಾನದಲ್ಲಿ ಹಮ್ಮಿಕೊಂಡಿದ್ದ ಟೂರ್ನಿಯ ಪುರುಷರ ಫೈನಲ್ನಲ್ಲಿ ರೆಡ್ ಆರ್ಮಿ ತಂಡವು ಮಹಾರಾಷ್ಟ್ರ ಪೊಲೀಸ್ ತಂಡವನ್ನು 19–2ರಿಂದ ಮಣಿಸಿತು. ದಕ್ಷಿಣ ಕನ್ನಡದ ಮೂಡಬಿದಿರೆಯ ಆಳ್ವಾಸ್ ತಂಡವನ್ನು 15–12ರಿಂದ ಸೋಲಿಸಿದ ಕೇಂದ್ರ ರೈಲ್ವೆ ತಂಡ ಮಹಿಳಾ ವಿಭಾಗದ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

ಪುರುಷರ ಸೆಮಿಫೈನಲ್ನಲ್ಲಿ ರೆಡ್ ಆರ್ಮಿ ತಂಡ ಪಂಜಾಬ್ ಪೊಲೀಸ್ ತಂಡವನ್ನು 35–25ರಿಂದ ಹಾಗೂ ಮಹಾರಾಷ್ಟ್ರ ಪೊಲೀಸ್ ತಂಡ ಬೆಂಗಳೂರಿನ ವಿಜಯಾ ಬ್ಯಾಂಕ್ ತಂಡವನ್ನು 17–14ರಿಂದ ಪರಾಭವಗೊಳಿಸಿತು.

ಆಳ್ವಾಸ್ ತಂಡ ದೆಹಲಿಯ ಪಾಲಂ ಸ್ಪೋರ್ಟ್ಸ್ ತಂಡವನ್ನು 20–8ರಿಂದ ಸೋಲಿಸಿ ಫೈನಲ್ ಪ್ರವೇಶಿಸಿದರೆ, ಕೇಂದ್ರ ರೈಲ್ವೆ ತಂಡಕ್ಕೆ ತಮಿಳುನಾಡಿನ ಶಕ್ತಿ ಟೈಲ್ಸ್ ವಿರುದ್ಧ ಗೋಲ್ಡನ್ ರೈಡ್ ಮೂಲಕ ಜಯ ದಕ್ಕಿತು. ರೋಚಕ ಪಂದ್ಯದ ಪೂರ್ಣಾವಧಿ ಮುಕ್ತಾಯಗೊಂಡಾಗ ಉಭಯ ತಂಡಗಳು ತಲಾ 9 ಪಾಯಿಂಟ್ ಗಳಿಸಿದ್ದವು. ಪ್ರತಿ ತಂಡಕ್ಕೆ ಐದು ರೈಡ್ ಅವಕಾಶ ನೀಡಿದ ನಂತರ ಪಂದ್ಯ 14–14ರಿಂದ ಸಮವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.