ಬುಧವಾರ, ಮೇ 12, 2021
18 °C

ರೆಪೊ ಇಳಿಕೆ:ಉದ್ಯಮ ವಲಯ ಸ್ವಾಗತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ದರ ತಗ್ಗಿಸಿರುವುದನ್ನು ಉದ್ಯಮ ವಲಯ ಸ್ವಾಗತಿಸಿದೆ. ಇದರಿಂದ ಹೂಡಿಕೆ ಹೆಚ್ಚಲಿದ್ದು, ದೇಶದ ಆರ್ಥಿಕ ವೃದ್ಧಿ ದರ (ಜಿಡಿಪಿ) ಚೇತರಿಸಿಕೊಳ್ಳಲಿದೆ ಎಂದು ವಾಣಿಜ್ಯೋದ್ಯಮ ಸಂಘಗಳು ಪ್ರತಿಕ್ರಿಯಿಸಿವೆ. ರೆಪೊ~ ದರ ತಗ್ಗಿರುವ ಹಿನ್ನೆಲೆಯಲ್ಲಿ ಬ್ಯಾಂಕುಗಳು ವಾಹನ ಸಾಲ ಬಡ್ಡಿ ದರ ಇಳಿಕೆಗೆ ಮುಂದಾಗಬಹುದು ಎಂದು ವಾಹನ ತಯಾರಿಕೆ ಕಂಪನಿಗಳು ಆಶಾವಾದ ವ್ಯಕ್ತಪಡಿಸಿವೆ. `ಬ್ಯಾಂಕುಗಳು ರೆಪೊ ದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುವುದನ್ನು ನಾವು ಕಾಯುತ್ತಿದ್ದೇವೆ~ ಎಂದು ಹೋಂಡಾ ಸಿಯಲ್ ಕಂಪನಿಯ ಉಪಾಧ್ಯಕ್ಷ ಜ್ಞಾನೇಶ್ವರ್ ಸೆನ್ ಹೇಳಿದ್ದಾರೆ.ಎಫ್‌ಕೆಸಿಸಿಐ ಸ್ವಾಗತ: `ಆರ್‌ಬಿಐ~ ಮಂಗಳವಾರ ಪ್ರಕಟಿಸಿದ ವಾರ್ಷಿಕ ಹಣಕಾಸು ನೀತಿಯನ್ನು ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘ (ಎಫ್‌ಕೆಸಿಸಿಐ) ಸ್ವಾಗತಿಸಿದೆ. ರೆಪೊ ದರ ತಗ್ಗಿಸಿರುವುದು ಆರ್ಥಿಕ ಪ್ರಗತಿಗೆ ಸಹಕಾರಿ ಎಂದು `ಎಫ್‌ಕೆಸಿಸಿಐ~ ಅಧ್ಯಕ್ಷ ಜೆ.ಆರ್ ಬಂಗೇರಾ ಹೇಳಿದ್ದಾರೆ. ರೆಪೊ ದರ ತಗ್ಗಿರುವುದರಿಂದ ವಿವಿಧ ಸಾಲದ ಮೇಲಿನ ಬಡ್ಡಿ ದರಗಳನ್ನು ಶೀಘ್ರದಲ್ಲೇ ತಗ್ಗಿಸಲಾಗುವುದು ಎಂದು `ಎಸ್‌ಬಿಐ~ ಹೇಳಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.