ಮೂಡಿಗೆರೆ: ಗೋಣಿಬೀಡು ಹೋಬಳಿ ರೆವಿನ್ಯೂ ಇನ್ಸ್ಪೆಕ್ಟರ್ ಪೂರ್ಣೇಶ್ಮೂರ್ತಿ ರೂ 1.50ಲಕ್ಷ ಲಂಚ ಪಡೆದುಕೊಳ್ಳುತ್ತಿರುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ತಾಲ್ಲೂಕಿನ ಗೋಣಿಬೀಡು ಹೋಬಳಿ ಹಿರೇಶಿಗರ ಬಳಿಯ ಬಾಸೂರು ಚಂದ್ರೇಗೌಡ ಎಂಬವವರಿಗೆ ಅಕ್ರಮ-ಸಕ್ರಮ ಯೋಜನೆ ನಮೂನೆ 53ರಲ್ಲಿ ಐದು ಎಕರೆ ಜಮೀನು ಮಂಜೂರಾತಿಗಾಗಿ ಬುಧವಾರ ಬೆಳಿಗ್ಗೆ ರೂ 1.50ಲಕ್ಷ ಹಣ ಪಡೆಯುವಾಗ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಡಿವೈಎಸ್ಪಿ ರಾಮಾನಾಯಕ್, ಸಿಬ್ಬಂದಿ ಬಂಧಿಸಿದರು.

ಸುದ್ದಿಗಾರರಿಗೆ ಮಾಹಿತಿ ನೀಡಿದ ಡಿವೈಎಸ್ಪಿ ರಾಮಾನಾಯಕ್, ಹಿರೀಶಿಗರ ಗ್ರಾಮದ ಸರ್ವೆ ನಂ 55 ರಲ್ಲಿ ಐದು ಎಕರೆ ಭೂಮಿ ಮಂಜೂರುಗೊಳಿಸಲು ಹಣಪಡೆಯುತ್ತ್ದ್ದಿದ ಮಾಹಿತಿ ಆಧಾರದಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ ಎಂದರು.

ಕಾರ್ಯಚರಣೆ ಸಂದರ್ಭ ಹಾಸನ ಲೋಕಾಯುಕ್ತ ಪ್ರಭಾರಿ ಎಸ್.ಪಿ. ಡಿ.ಸೋಜ ಭೇಟಿ ನೀಡಿ ಪರಿಶೀಲಿಸಿದರು. ಕಾರ್ಯಾಚರಣೆಯಲ್ಲಿ ಚಿಕ್ಕಮಗಳೂರು ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ಗಳಾದ ಗುರುರಾಜ್, ವಿನಯ್, ಸಿಬ್ಬಂದಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.