ಗುರುವಾರ , ಜೂನ್ 24, 2021
27 °C

ರೈತರಿಗೆ ಕೃಷಿ ಸಲಕರಣೆ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ವರ್ಗದ ರೈತರಿಗೆ ಶುಕ್ರವಾರ ಕೃಷಿ ಇಲಾಖೆವತಿಯಿಂದ ಹನಿ ನೀರಾವರಿಗೆ ಸಂಬಂಧಿಸಿದಂತೆ ಸಾಧನ ಸಲಕರಣೆಗಳನ್ನು ವಿತರಿಸಲಾಯಿತು.ನಗರದ ಕೃಷಿ ಇಲಾಖೆ ಎದುರು ನಡೆದ ಕಾರ್ಯಕ್ರಮದಲ್ಲಿ ಸಲಕರಣೆ ಗಳನ್ನು ವಿತರಿಸಿ ಮಾತನಾಡಿದ ಇಲಾಖೆ ಯ ಸಹಾಯಕ ನಿರ್ದೇಶಕಿ ವಿನೋ ದಮ್ಮ, `ವಿಶೇಷ ಘಟಕ ಯೋಜನೆಯಡಿ ಒಟ್ಟು 40 ಮಂದಿ ರೈತರನ್ನು ಆಯ್ಕೆ ಮಾಡಲಾಗಿದೆ.ಅವರಿಗೆ ಹನಿ ನೀರಾವರಿ ಸಾಧನ ಸಲಕರಣೆ ವಿತರಿಸಲಾಗಿದೆ~ ಎಂದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ವೆಂಕಟರಾಮಯ್ಯ ಮಾತನಾಡಿ, `ಹನಿ ನೀರಾವರಿ ಸಾಧನ ಸಲಕರಣೆಗಳನ್ನು ಪರಿಶಿಷ್ಟ ಜಾತಿ ಮತ್ತು ವರ್ಗದ ರೈತರಿಗೆ ವಿತರಿಸಲಾಗುತ್ತಿದ್ದು, ಆಸಕ್ತ ರೈತರು ಅರ್ಜಿ ಸಲ್ಲಿಸಲು ಮಾರ್ಚ್ 15 ಕೊನೆಯ ದಿನ~ ಎಂದರು.ಸಾಕ್ಷರರಾಗಿ; ದೌರ್ಜನ್ಯದಿಂದ ಮುಕ್ತರಾಗಿ- ನ್ಯಾಯಾಧೀಶೆ

ಮುಳಬಾಗಲು: ಮಹಿಳೆಯರು ಸಾಕ್ಷರ ರಾಗದ ಹೊರತು ಕೌಟುಂಬಿಕ ದೌರ್ಜನ್ಯಗಳಿಂದ ಮುಕ್ತರಾಗಲು ಸಾಧ್ಯ ವಾಗದು ಎಂದು ಪಟ್ಟಣದ ಜೆಎಂಎಫ್‌ಸಿ ಅಪರ ಸಿವಿಲ್ ನ್ಯಾಯಾಧೀಶೆ ರೂಪಶ್ರೀ ಅಭಿಪ್ರಾಯಪಟ್ಟರು.ತಾಲ್ಲೂಕಿನ ಕುರುಡುಮಲೆ ಗ್ರಾಮದ ಸಮುದಾಯ ಭವನದಲ್ಲಿ ಗುರುವಾರ ವಿಶ್ವಮಹಿಳಾ ದಿನಾಚರಣೆ ಅಂಗವಾಗಿ ನಡೆದ ಕಾನೂನು ಸಾಕ್ಷರತಾ ಕಾರ್ಯ ಕ್ರಮ ಉದ್ಫಾಟಿಸಿ ಅವರು ಮಾತನಾಡಿದರು.

ಗ್ರಾಮೀಣರು ತಮ್ಮ ಹೆಣ್ಣು ಮಕ್ಕಳನ್ನು ಶಾಲೆಗೆ ತಪ್ಪದೆ ಕಳುಹಿ ಸುವಂತೆ ಅವರು ಪಾಲಕರಿಗೆ ಮನವಿ ಮಾಡಿದರು.ಜೆಎಂಎಫ್‌ಸಿ ಪ್ರಧಾನ ಸಿವಿಲ್ ನ್ಯಾಯಾಧೀಶ ಡಿ.ನಾಗರಾಜೇಗೌಡ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ವಕೀಲ ಎಸ್.ಎನ್.ಮಲ್ಲಿಕಾರ್ಜುನ ಸ್ವಾಮಿ, ಕುರುಡುಮಲೆ ಮಂಜುನಾಥ್, ಜಯಪ್ಪ, ನಟರಾಜ್, ಎಂ.ಎಸ್.ಶ್ರೀನಿವಾಸರೆಡ್ಡಿ ಇತರರು ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.