ಪ್ರಜಾವಾಣಿ ವಾರ್ತೆ
ಕೋಲಾರ: ರೈತರು ಮತ್ತು ಕೃಷಿ ಕೂಲಿಕಾರರ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ತಾಲ್ಲೂಕಿನ ನಾಲ್ಕು ಸ್ಥಳಗಳಲ್ಲಿ ರಸ್ತೆ ತಡೆ ಮಾಡಿ ಪ್ರತಿಭಟಿಸಿದರು.

ಬಗರ್ ಹುಕುಂ ಸಾಗುವಳಿದಾರರಿಗೆ, ನಿವೇಶನ ರಹಿತರಿಗೆ ಮನೆ ಹಂಚಿಕೆ, ಉದ್ಯೋಗ ಖಾತ್ರಿ ಯೋಜನೆ ಸಮರ್ಪಕ ಜಾರಿ, ಬ್ಯಾಂಕ್ಗಳಲ್ಲಿ ಕೃಷಿ ಸಾಲ ನೀಡಿಕೆ, ಕಾಲುಬಾಯಿ ಜ್ವರ ರೋಗಕ್ಕೆ ಸಾವನ್ನಪ್ಪಿದ ಜಾನುವಾರು ಮಾಲೀಕರಿಗೆ ಶೀಘ್ರ ಪರಿಹಾರ ವಿತರಣೆ ಉತ್ತಮ ಪಡಿಸಬೇಕು ಎಂದು ಆಗ್ರಹಿಸಿದರು.

ನರಸಾಪುರ ರಾಷ್ಟ್ರೀಯ ಹೆದ್ದಾರಿ ತಡೆ ಮಾಡಿದ ಕಾರ್ಯಕರ್ತರು ನರಸಾಪುರ –ಮಾಲೂರು ರಸ್ತೆಯಲ್ಲಿ ಮೇಲ್ಸೇತುವೆ ನಿರ್ಮಿಸಬೇಕು. ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಟಿ.ಎಂ.ವೆಂಕಟೇಶ್, ದೇವರಾಜ್, ಆಂಜನೇಯಲು, ಕೆ.ವಿ.ಶ್ರೀನಿವಾಸರೆಡ್ಡಿ, ಕೆ.ಎಂ.ನಾಗರಾಜ್, ಜಯರಾಮ್, ವೆಂಕಟೇಶ್, ರಮೇಶ್, ಕೃಷ್ಣಪ್ಪ, ನಾರಾಯಣಪ್ಪ, ಆಂಜನಪ್ಪ, ಶ್ರೀಧರಮೂರ್ತಿ, ಸಿ.ಎಂ.ಮಂಜುನಾಥ್, ನಾಗರಾಜ್, ಶಾಂತಕುಮಾರ್, ಗಣೇಶಗೌಡ, ಆರ್.ಕುಮಾರ್, ಮೋಟಪ್ಪ, ಮುನಿಯಪ್ಪ, ಶ್ರೀನಿವಾಸ್ ಪುಟ್ಟಪ್ಪ, ಎಂ.ಟಿ.ಬಿ. ಕೃಷ್ಣಪ್ಪ, ಕರಿಲಕ್ಷ್ಮಮ್ಮ ಭಾಗವಹಿಸಿದ್ದರು.

ಕೋಲಾರ –- ಚಿಂತಾಮಣಿ ರಸ್ತೆಯ ಸುಗಟೂರು ಬೆಸ್ಕಾಂ ಸ್ಟೇಷನ್ ಎದುರು ನಡೆದ ಪ್ರತಿಭಟನೆಯಲ್ಲಿ ವಿ.ನಾರಾಯಣರೆಡ್ಡಿ, ಗಂಗಮ್ಮ, ಟಿ.ಕೃಷ್ಣೇಗೌಡ ಮಂಜಮ್ಮ, ಕೆ.ಎಂ.ವೆಂಕಟೇಶ್, ಮುನಿಸ್ವಾಮಿ, ಮುನಿರಾಜು, ರಾಮಾಂಜಿ, ವೆಂಕಟರಾಮ್, ಶ್ರೀನಿವಾಸ್, ಸುಗಟೂರು ವಿಶ್ವನಾಥ್, ಶ್ರೀಧರ್, ಗೌಡಹಳ್ಳಿ ರಾಮಕೃಷ್ಣೇಗೌಡ, ಚಿಟ್ನಹಳ್ಳಿ ನಾಗರಾಜ್, ರಮೇಶ್ ಭಾಗವಹಿಸಿದ್ದರು. ಬೆಸ್ಕಾಂನ ಕಾರ್ಯಪಾಲಕ ಎಂಜಿನಿಯರ್ ಶಿವರಾಂ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರ ಅಹವಾಲು ಆಲಿಸಿದರು.

ಕೋಲಾರ –- ಬೇತಮಂಗಲ ರಸ್ತೆಯ ಭಟ್ರಹಳ್ಳಿ ಗೇಟ್ ಬಳಿ ನಡೆದ ಪ್ರತಿಭಟನೆಯಲ್ಲಿ ಹೊಲ್ಲಂಬಳ್ಳಿ ವಿ.ವೆಂಕಟೇಶಪ್ಪ, ಅಪ್ಪಯ್ಯಣ್ಣ, ವಿ.ಗೀತಾ, ಎಂ.ವಿಜಯಕೃಷ್ಣ, ಎ.ವಿ.ರಮೇಶ್, ಸುಬ್ರಮಣಿ, ಕೆ.ವಿ.ರಾಜೇಂದ್ರ, ಡಿ.ಪಿ.ನಾಗರಾಜ್, ಡಿಎಸ್.ವೆಂಕಟರಮಣಪ್ಪ ಭಾಗವಹಿಸಿದ್ದರು. ಕೋಲಾರ -–ಶ್ರೀನಿವಾಸಪುರ ರಸ್ತೆ ವೀರಾಪುರ್ ಗೇಟ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮುಖಂಡರಾದ ಎನ್.ಎನ್.ಶ್ರೀರಾಮ್, ಎಸ್.ರಮೇಶ್, ಯಲ್ಲಪ್ಪ, ತೊರದೇವಂಡಹಳ್ಳಿ ರಾಜಪ್ಪ, ವೀರಾಪುರ ಜಗದೀಶ್, ಬೀರಮಾನಹಳ್ಳಿ ಜಯರಾಮರೆಡ್ಡಿ, ವಿಜಯಕುಮಾರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.