ರೈತ ಮತ್ತು ವಿಷ

7

ರೈತ ಮತ್ತು ವಿಷ

Published:
Updated:

ಬೆಲೆಯೂ ಇಲ್ಲದೆ

ಬೆಂಬಲವೂ ಇಲ್ಲದೆ

ಒಲವು ಛಲವೂ ಇಲ್ಲದೆ

ಬದುಕಲು ಬಲವೂ ಇಲ್ಲದೆ

ಸೋತು ಸುಣ್ಣವಾಗಿ

ಕುಸಿದು ಕಂಗಾಲಾಗಿ

‘ವಿಷ’ವನ್ನೆ ಉಣ್ಣುತ್ತಿಹರು

ನೇಗಿಲಯೋಗಿ ಎಂಬ ರೈತರು

ಓ ರೈತ ಬಂಧು, ಅನ್ನದಾತ

ಬೇಡ ಇಷ್ಟೊಂದು ಅಸಹನೆ

ಇರಲಿ ಇನ್ನೂ ಒಂದಷ್ಟು ಸಹನೆ

ನಿನ್ನಗಲಿಕೆಯಿಂದ ಸ್ಮಾರಕವಾಗುತ್ತದೆ

ಅಷ್ಟೆ, ನಿನ್ನಕ್ಕರೆಯ ಅರಮನೆ

‘ಸಾವು’ ಸಮಸ್ಯೆಗೆ ಪರಿಹಾರವಲ್ಲ

ಈಸಬೇಕು ಈಸಿ ಜೈಸಬೇಕು

ಜೈಸಿ ಬಾಳ ಬೆಳಗಬೇಕು!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry