ಶುಕ್ರವಾರ, ಮೇ 27, 2022
31 °C

ರೈಲಿನ ಸಮಯ ಬದಲಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ನಾಂದೇಡ್- ಬೀದರ್ ರೈಲು ಗಾಡಿಯ ಸಮಯ ಬದಲಿಸುವುದು ಸೇರಿದಂತೆ ಜಿಲ್ಲೆಯ ಜನರ ಅನುಕೂಲಕ್ಕಾಗಿ ವಿವಿಧ ರೈಲ್ವೆ ಯೋಜನೆಗಳನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಸಂಸದ ಎನ್. ಧರ್ಮಸಿಂಗ್ ನೇತೃತ್ವದ ನಿಯೋಗವು ರೈಲ್ವೆ ಸಚಿವ ದಿನೇಶ ತ್ರಿವೇದಿ ಅವರನ್ನು ಬೆಂಗಳೂರಿನಲ್ಲಿ ಗುರುವಾರ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿತು.ಆಂಧ್ರ ಮತ್ತು ಮಹಾರಾಷ್ಟ್ರ ಗಡಿಯಲ್ಲಿರುವ ಬೀದರ್ ಹಿಂದುಳಿದ ಜಿಲ್ಲೆ ಆಗಿದೆ. ನೆರೆಯ ಹೈದರಾಬಾದ್ ಜೊತೆಗೆ ವ್ಯಾವಹಾರಿಕ ಸಂಬಂಧ ಹೊಂದಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ರೈಲ್ವೆ ಯೋಜನೆಗಳನ್ನು ಜಾರಿಗೊಳಿಸುವುದರಿಂದ ಜಿಲ್ಲೆಯಲ್ಲಿರುವ ಬಡತನ, ನಿರುದ್ಯೋಗ ಹಾಗೂ ಮೂಲಸೌಕರ್ಯಗಳ ಕೊರತೆಯನ್ನು ನೀಗಿಸಬಹುದಾಗಿದೆ ಎಂದು ಹೇಳಿದ್ದಾರೆ.ಮೈಸೂರು- ಬೆಂಗಳೂರು- ಬೀದರ್- ಔರಂಗಾಬಾದ್ ವಾಯಾ ಶಿರಡಿ ಸೂಪರ್‌ಫಾಸ್ಟ್ ರೈಲು ಗಾಡಿಯನ್ನು ಆರಂಭಿಸಬೇಕು. ಈ ಮಾರ್ಗದಲ್ಲಿ ಸಾಕಷ್ಟು ಐತಿಹಾಸಿಕ ಸ್ಥಳ ಹಾಗೂ ಪ್ರವಾಸಿ ಕೇಂದ್ರಗಳಿದ್ದು, ಸೂಪರ್‌ಫಾಸ್ಟ್ ರೈಲು ಸಂಚಾರದಿಂದ ಪ್ರಯಾಣಿಕರಿಗೆ ಅನುಕೂಲ ಆಗಲಿದೆ ಎಂದು ತಿಳಿಸಿದ್ದಾರೆ.ಬೀದರ್- ಗುಲ್ಬರ್ಗ ರೈಲು ಮಾರ್ಗದ ಕಾಮಗಾರಿಯನ್ನು ತ್ವರಿತಗೊಳಿಸಬೇಕು. ಬೀದರ್- ನಾಂದೇಡ್ ವಾಯಾ ದೇಗಲೂರು ಹೊಸ ರೈಲು ಮಾರ್ಗ ನಿರ್ಮಿಸಬೇಕು. ಹೈದರಾಬಾದ್- ಬೀದರ್ ನಡುವೆ ಇಂಟರ್‌ಸಿಟಿ ರೈಲು ಸಂಚಾರ ಆರಂಭಿಸಬೇಕು. ಔರಾದ್ ತಾಲ್ಲೂಕಿನ ಕಮಲನಗರದಲ್ಲಿ ಕಾಕಿನಾಡ ರೈಲು ನಿಲುಗಡೆ ಮಾಡಬೇಕು.ಹಾಗೂ ಸೋಲಾಪುರ- ಹುಮನಾಬಾದ್ ಮಧ್ಯೆ ಹೊಸ ರೈಲು ಮಾರ್ಗ ನಿರ್ಮಿಸಲು ಸಮೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಈಶ್ವರ ಖಂಡ್ರೆ, ಪ್ರಧಾನ ಕಾರ್ಯದರ್ಶಿ ಅರವಿಂದಕುಮಾರ ಅರಳಿ ನಿಯೋಗದಲ್ಲಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.