ನವದೆಹಲಿ: ಜುಲೈ 1ರಿಂದ ರೈಲ್ವೆ ಟಿಕೆಟ್ಗಳನ್ನು ಎಸ್ಎಂಎಸ್ ಮೂಲಕ ಪಡೆಯುವ ವ್ಯವಸ್ಥೆ ಜಾರಿಗೊಳಿಸಲು ಭಾರತೀಯ ರೈಲ್ವೆ ಆಹಾರ ಪೂರೈಕೆ ಮತ್ತು ಪ್ರವಾಸೋದ್ಯಮ ನಿಗಮವು (ಇಂಡಿಯನ್ ರೈಲ್ವೆ ಕೇಟರಿಂಗ್ ಅಂಡ್ ಟೂರಿಸಮ್ ಕಾರ್ಪೊರೇಷನ್- ಐಆರ್ಸಿಟಿಸಿ) ತಯಾರಿ ಮಾಡಿಕೊಂಡಿದೆ.

ಈ ಸೌಲಭ್ಯಕ್ಕೆ ಚಾಲನೆ ನೀಡುವ ಮುನ್ನ ಐಆರ್ಸಿಟಿಸಿ ಅದಕ್ಕೆಂದೇ ನಿಗದಿಯಾದ ಪ್ರತ್ಯೇಕ ಸಂಖ್ಯೆ ಪ್ರಕಟಿಸಲಿದೆ. ಇದರ ಮೂಲಕ ಟಿಕೆಟ್ ಪಡೆಯಲು ಇಚ್ಛಿಸುವವರು ತಮ್ಮ ಮೊಬೈಲ್ ಸಂಖ್ಯೆಗಳನ್ನು ಬ್ಯಾಂಕಿನಲ್ಲಿ ನೋಂದಣಿ ಮಾಡಿಸಬೇಕಾಗುತ್ತದೆ. ಇದಾದ ನಂತರ ಬ್ಯಾಂಕುಗಳು ಪ್ರತಿಯೊಬ್ಬ ನೋಂದಣಿದಾರರಿಗೂ `ಮೊಬೈಲ್ ಮನಿ ಐಡೆಂಟಿಫಯರ್' (ಎಂಎಂಐಡಿ) ಮತ್ತು `ಗುಪ್ತಪದ'ವನ್ನು (ಒನ್ಟೈಮ್ ಪಾಸ್ವರ್ಡ್) ನೀಡುತ್ತವೆ.

ಟಿಕೆಟ್ ಬೇಕಾದವರು ತಮ್ಮ ಪ್ರಯಾಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಐಆರ್ಸಿಟಿಸಿ ಪ್ರಕಟಿಸುವ ಸಂಖ್ಯೆಗೆ ಎಸ್ಎಂಎಸ್ ಮಾಡಬೇಕು. ತಾವು ಪ್ರಯಾಣಿಸಲಿರುವ ರೈಲಿನ ಸಂಖ್ಯೆ, ಪ್ರಯಾಣ ದಿನಾಂಕ, ಹತ್ತುವ ನಿಲ್ದಾಣದ ಹೆಸರು, ಇಳಿಯುವ ನಿಲ್ದಾಣದ ಹೆಸರು, ಪ್ರಯಾಣಿಸಲಿರುವ ದರ್ಜೆ, ಹೆಸರು, ವಯಸ್ಸು, ಲಿಂಗ- ಈ ಮಾಹಿತಿಗಳನ್ನು ಎಸ್ಎಂಎಸ್ ಒಳಗೊಂಡಿರಬೇಕು.

ಇದನ್ನು ಐಆರ್ಸಿಟಿಸಿ ಪ್ರಕಟಿಸುವ ಸಂಖ್ಯೆಗೆ ಕಳುಹಿಸುತ್ತಿದ್ದಂತೆ, ಅತ್ತ ಕಡೆಯಿಂದ ಎಸ್ಎಂಎಸ್ ಕಳಿಸಿದವರ ಮೊಬೈಲ್ಗೆ ಟಾನ್ಸಾಕ್ಷನ್ ಐಡಿ ಬರುತ್ತದೆ. ಇದಾದ ಮೇಲೆ ಟಿಕೆಟ್ ಬೇಕಾದವರು ಈ ಟ್ರಾನ್ಸಾಕ್ಷನ್ ಐಡಿ ಯ ಜತೆಗೆ `ಎಂಎಂಐಡಿ' ಮತ್ತು `ಒಟಿಪಿ' ಯನ್ನು ಮುದ್ರಿಸಿ ಮತ್ತೆ ಎಸ್ಎಂಎಸ್ ಕಳುಹಿಸಬೇಕು. ಹೀಗೆ ಮಾಡಿದಾಗ ಸಂಬಂಧಿಸಿದವರ ಬ್ಯಾಂಕ್ ಖಾತೆಯಿಂದ ಟಿಕೆಟ್ ಮೊತ್ತ ಕಡಿತವಾಗುತ್ತದೆ. ಇದಾದ ಮೇಲೆ ಪ್ರಯಾಣಿಸಲಿರುವವರ ಮೊಬೈಲ್ಗೆ ಒಂದು ಎಸ್ಎಂಎಸ್ ಬರುತ್ತದೆ. ಇದನ್ನೇ ಟಿಕೆಟ್ ಆಗಿ ಬಳಸಬಹುದು.

ಈ ಪ್ರತಿ ಎಸ್ಎಂಎಸ್ ಗೆ 3 ರೂಪಾಯಿ ಕಡಿತವಾಗುತ್ತದೆ. ಜತೆಗೆ, 5000 ರೂಪಾಯಿವರೆಗಿನ ಬುಕಿಂಗ್ಗೆ 5 ರೂಪಾಯಿ ಹಾಗೂ ಅದಕ್ಕಿಂತ ಹೆಚ್ಚಿನ ಮೊತ್ತದ ಬುಕಿಂಗ್ಗೆ 10 ರೂಪಾಯಿಯನ್ನು ಐಆರ್ಸಿಟಿಸಿ ಶುಲ್ಕವಾಗಿ ಪಡೆಯುತ್ತದೆ.

ಟಿಕೆಟ್ ರದ್ದತಿ ಶುಲ್ಕ ಹೆಚ್ಚಳ
ನವದೆಹಲಿ: ಕಾಯ್ದಿರಿಸಿದ ಟಿಕೆಟ್ ರದ್ದತಿ ಹಾಗೂ ಹಣ ಮರುಪಾವತಿಗೆ ರೈಲ್ವೆ ಇಲಾಖೆ ಕೆಲವು ಕಠಿಣ ನಿಯಮ ರೂಪಿಸಿದ್ದು, ಜುಲೈ 1ರಿಂದ ಜಾರಿಗೆ ಬರಲಿವೆ.

ಆಸನ ಕಾಯ್ದಿರಿಸಿ ಖಾತರಿ (ಕನ್ಫರ್ಮಡ್) ಟಿಕೆಟ್ ಅನ್ನು ರೈಲು ಹೊರಟ ಎರಡು ಗಂಟೆ ಅವಧಿ ಬಳಿಕ ರದ್ದುಗೊಳಿಸಲು ಅವಕಾಶವಿಲ್ಲ. ಕಾಯ್ದಿರಿಸಿದ (ವೇಟ್ಲಿಸ್ಟ್) ಅಥವಾ ಆರ್ಎಸಿ ಟಿಕೆಟ್ಗಳನ್ನು ರೈಲು ಹೊರಟ ಮೂರು ಗಂಟಗಳ ನಂತರವಷ್ಟೇ ರದ್ದುಗೊಳಿಸಲು ಅವಕಾಶ ನೀಡಲಾಗುವುದು.

ಪ್ರಯಾಣಿಕನೊಬ್ಬ ಖಾತರಿ (ಕನ್ಫರ್ಮಡ್) ಟಿಕೆಟ್ ಅನ್ನು ಪ್ರಯಾಣಕ್ಕೆ 48 ಗಂಟೆ ಮುಂಚಿತವಾಗಿ ರದ್ದುಪಡಿಸಿದರೆ, ರದ್ದತಿ ಶುಲ್ಕವನ್ನಷ್ಟೇ ಕಡಿತ ಮಾಡಿ, ಉಳಿದ ಸಂಪೂರ್ಣ ಪ್ರಯಾಣ ದರ ಮರುಪಾವತಿಸಲಾಗುವುದು.

ಟಿಕೆಟ್ ರದ್ದುಗೊಳಿಸಿದರೆ ಕಡಿತ ಮಾಡಲಾಗುವ ಶುಲ್ಕವನ್ನು ಈ ಕೆಳಗಿನಂತೆ ಏರಿಸಲಾಗಿದೆ:
ಎಸಿ ಮೊದಲ ದರ್ಜೆ ಹಾಗೂ ಎಕ್ಸಿಕ್ಯುಟಿವ್: 70ರಿಂದ 120 ರೂ.
ದ್ವಿತೀಯ ಎಸಿ: 60ರಿಂದ 100 ರೂ.
ತೃತೀಯ ಎಸಿ, ಚೇರ್ ಕಾರ್ ಹಾಗೂ ಎಕಾನಮಿ ದರ್ಜೆ: 60ರಿಂದ 90 ರೂ.
ಸ್ಲೀಪರ್ ದರ್ಜೆ: 40ರಿಂದ 60 ರೂ.
ದ್ವಿತೀಯ ದರ್ಜೆ: 20ರಿಂದ 30 ರೂ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.