ಗುರುವಾರ , ಮೇ 19, 2022
24 °C
ರಾಷ್ಟ್ರೀಯ ಸಂಕ್ಷಿಪ್ತ ಸುದ್ದಿಗಳು

ರೈಲು ಪ್ರಯಾಣಿಕರ ದರೋಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಖನೌ (ಐಎಎನ್‌ಎಸ್): ಚೆನ್ನೈನಿಂದ ಹೊರಟಿದ್ದ ದೆಹಲಿ ಗ್ರ್ಯಾಂಡ್ ಟ್ರಂಕ್ (ಜಿಟಿ) ಎಕ್ಸ್‌ಪ್ರೆಸ್ ರೈಲಿಗೆ ಶಸ್ತ್ರಸಜ್ಜಿತ ಡಕಾಯಿತರ ಗುಂಪೊಂದು ನುಗ್ಗಿ ಪ್ರಯಾಣಿಕರನ್ನು ಬೆದರಿಸಿ ದರೋಡೆ ಮಾಡಿದ ಘಟನೆ ಶನಿವಾರ ಆಗ್ರಾ ಸಮೀಪ ನಡೆದಿದೆ.ರೈಲಿನ ಹವಾನಿಯಂತ್ರಿತ ಬೋಗಿ ನುಗ್ಗಿದ್ದ ಏಳು ಮಂದಿ ಡಕಾಯಿತರು ಬಂದೂಕಿನಿಂದ ಪ್ರಯಾಣಿಕರನ್ನು ಬೆದರಿಸಿ ನಗನಾಣ್ಯಗಳನ್ನು ದೋಚಿದ್ದಾರೆ.ಪತ್ನಿ ಕೊಲೆ: ಜಡ್ಜ್ ವಿರುದ್ಧ ದೂರು

ಗುಡಗಾಂವ್ (ಐಎಎನ್‌ಎಸ್):
ಹೆಂಡತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಸಿಜೆಎಂ ನ್ಯಾಯಾಧೀಶ ರವ್‌ನೀತ್ ಗರ್ಗ್ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.ರವ್‌ನೀತ್ ಅವರ ಪತ್ನಿ 24 ವರ್ಷದ ಗೀತಾಂಜಲಿ ಎರಡು ದಿನಗಳ ಹಿಂದೆ ಗುಂಡೇಟಿನಿಂದ ಕೊಲೆಯಾಗಿದ್ದರು. ಈ ಸಂಬಂಧ ಗೀತಾಂಜಲಿ ಅವರ ಸಹೋದರ ಪ್ರದೀಪ್ ಅಗರ್‌ವಾಲ್ ಅವರು ರವ್‌ನೀತ್ ಮತ್ತು ರವ್‌ನೀತ್ ಪೋಷಕರ ವಿರುದ್ಧ ಕೊಲೆ ದೂರು ನೀಡಿದ್ದರು.ಗೀತಾಂಜಲಿ ಅವರ ಶವ ಗುರುವಾರ ಸಂಜೆ ಪತ್ತೆಯಾದ ಸಂದರ್ಭದಲ್ಲಿ ಹತ್ತಿರದಲ್ಲೇ ರವ್‌ನೀತ್ ಅವರ ಅಧಿಕೃತ ರಿವಾಲ್ವರ್ ಕೂಡ ಪತ್ತೆಯಾಗಿತ್ತು.ಆಂಧ್ರಪ್ರದೇಶ ಮಾಜಿ ಸಚಿವ ನಿಧನ

ಹೈದರಾಬಾದ್ (ಐಎಎನ್‌ಎಸ್):
ಆಂಧ್ರ ಪ್ರದೇಶದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಕೆ. ವಿದ್ಯಾಧರ್ ರಾವ್ (65) ಶನಿವಾರ ಬೆಳಿಗ್ಗೆ ಗೋದಾವರಿ ಜಿಲ್ಲೆಯ ತಮ್ಮ ಎಲೂರು ನಿವಾಸದಲ್ಲಿ ಹೃದಯಾಘಾತದಿಂದ ಮೃತಪಟ್ಟರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.