ಮೈಸೂರು: ಮೈಸೂರು ರೈಲ್ವೆ ನಿಲ್ದಾಣದಲ್ಲಿ ಕಾಮಗಾರಿ ನಡೆಯುತ್ತಿರು ವುದರಿಂದ ರೈಲು ಸಂಚಾರದಲ್ಲಿ ನೈಋತ್ಯ ರೈಲ್ವೆ ಸೆ.15ರ ಮಧ್ಯರಾತ್ರಿಯಿಂದ 18 ರ ಬೆಳಿಗ್ಗೆ 4 ಗಂಟೆವರೆಗೆ ಬದಲಾವಣೆ ಮಾಡಿದೆ.

ರೈಲು ನಂಬರ್ 5632 ಬೆಂಗಳೂರು-ಮೈಸೂರು ಪ್ಯಾಸೆಂಜರ್ (ಆಗಮನ ಮಧ್ಯಾಹ್ನ 1.35 )-ರೈಲು ನಂಬರ್ 56237 ಮೈಸೂರು ನಿರ್ಗಮನ ಮಧ್ಯಾಹ್ನ 2.25. ಈ ರೈಲುಗಳನ್ನು ಮೈಸೂರು ಮತ್ತು ನಾಗನಹಳ್ಳಿ ನಡುವೆ ಭಾಗಶಃ ರದ್ದು ಪಡಿಸಲಾಗಿದೆ,

ರೈಲು ನಂಬರ್ 16558 ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ (ಆಗಮನ ಬೆಳಿಗ್ಗೆ 11.15 - ರೈಲು ನಂಬರ್ 1659 ಮೈಸೂರು- ಯಶವಂತಪುರ ಎಕ್ಸ್ಪ್ರೆಸ್ (ಮೈಸೂರು ನಿರ್ಗಮನ ಮಧ್ಯಾಹ್ನ 1.30) ಈ ಗಾಡಿಗಳನ್ನು ಮೈಸೂರು ಮತ್ತು ಪಾಂಡವಪುರ ಮಧ್ಯೆ ಭಾಗಶಃ ರದ್ದು ಪಡಿಸಲಾಗಿದೆ.

ರೈಲು ನಂಬರ್ 16560 ಯಶವಂತಪುರ-ಮೈಸೂರು ಎಕ್ಸ್ಪ್ರೆಸ್ (ಮೈಸೂರು ಆಗಮನ ಮಧ್ಯಾಹ್ನ 1.50-ರೈಲು ನಂಬರ್ 16557 ಮೈಸೂರು-ಬೆಂಗಳೂರು ಎಕ್ಸೆಪ್ರೆಸ್ (ಮೈಸೂರು ನಿರ್ಗಮನ ಸಂಜೆ 4.15) ಈ ಗಾಡಿಗಳನ್ನು ಮೈಸೂರು ಮತ್ತು ನಾಗನಹಳ್ಳಿ ಮಧ್ಯೆ ಭಾಗಶಃ ರದ್ದುಪಡಿಸಲಾಗಿದೆ.

ಅರಸೀಕೆರೆಯಿಂದ ಮೈಸೂರಿಗೆ ಬರುವ ಮೈಸೂರು ಮತ್ತು ಶಿವಮೊಗ್ಗ ಪಟ್ಟಣ ಪ್ಯಾಸೆಂಜರ್ ಗಾಡಿಗಳನ್ನು ಮೈಸೂರು ಮತ್ತು ಬೆಳಗೊಳ ಮಧ್ಯೆ ಹಾಗೂ ಶಿವಮೊಗ್ಗ -ಮೈಸೂರು ಪ್ಯಾಸೆಂಜರ್ ಹಾಗೂ ಮೈಸೂರು -ಅರಸೀಕೆರೆ ಪ್ಯಾಸೆಂಜರ್ ಗಾಡಿಗಳನ್ನು ಮೈಸೂರು ಮತ್ತು ಬೆಳಗೊಳ ನಡುವೆ ಭಾಗಶಃ ರದ್ದು ಪಡಿಸಲಾಗಿದೆ.

ಚಾಮರಾಜನಗರ -ತಿರುಪತಿ ಪ್ಯಾಸೆಂಜರ್ ಗಾಡಿಯನ್ನು ಚಾಮರಾಜನಗರ ಮತ್ತು ಮೈಸೂರು ನಡುವೆ ಭಾಗಶಃ ರದ್ದುಪಡಿಸಲಾಗಿದೆ. ಚಾಮರಾಜನಗರ-ಮೈಸೂರು ಪ್ಯಾಸೆಂಜರ್ ಗಾಡಿಯನ್ನು ಅಶೋಕ ಪುರಂ ಮತ್ತು ಮೈಸೂರು ನಡುವೆ ಹಾಗೂ ಮೈಸೂರು -ನಂಜನಗೂಡು ಪ್ಯಾಸೆಂಜರ್ ಗಾಡಿಯನ್ನು ಮೈಸೂರು ಮತ್ತು ಅಶೋಕಪುರಂ ನಡುವೆ ಭಾಗಶಃ ರದ್ದುಪಡಿಸಲಾಗಿದೆ.

ಚಾಮರಾಜನಗರ -ಮೈಸೂರು ಪ್ಯಾಸೆಂಜರ್ ಗಾಡಿಯನ್ನು ಅಶೋಕಪುರಂ ಮತ್ತು ಮೈಸೂರು ನಡುವೆ ಭಾಗಶಃ ರದ್ದು ಪಡಿಸಲಾಗಿದೆ.

ರೈಲು ನಂಬರ್ 56210 ಮೈಸೂರು-ಚಾಮರಾಜನಗರ ಪ್ಯಾಸೆಂಜರ್ ಗಾಡಿಯನ್ನು ಸಂಪೂರ್ಣ ರದ್ದುಗೊಳಿಸಲಾಗಿದೆ ಎಂದು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಡಾ.ಅನುಪ್ ದಯಾನಂದ ಸಾಧು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.