ರೈಲ್ವೇಸ್ ತಂಡಕ್ಕೆ ಬಿಲ್ಲೆ ಆಯ್ಕೆ

ಭಾನುವಾರ, ಮೇ 26, 2019
25 °C

ರೈಲ್ವೇಸ್ ತಂಡಕ್ಕೆ ಬಿಲ್ಲೆ ಆಯ್ಕೆ

Published:
Updated:

ಧಾರವಾಡ: ನಗರದ ಎಸ್‌ಡಿಎಂ ಕ್ರಿಕೆಟ್ ಅಕಾಡೆಮಿಯ ಆರಂಭಿಕ ಆಟಗಾರರೂ ಆಗಿರುವ ವಿಕೆಟ್ ಕೀಪರ್ ನಿತಿನ್ ಬಿಲ್ಲೆ ರೈಲ್ವೇಸ್ ತಂಡಕ್ಕೆ ಆಯ್ಕೆಯಾಗಿದ್ದು, ಪ್ರಸಕ್ತ ಋತುವಿನಲ್ಲಿ ರಣಜಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲಿದ್ದಾರೆ. ವಾರಣಾಸಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲೂ ಅವರು ರೈಲ್ವೇಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ.ಎಸ್‌ಡಿಎಂ ಕ್ರಿಕೆಟ್ ಅಕಾಡೆಮಿಯ ಮೊದಲ ರಣಜಿ ಆಟಗಾರ ಎಂಬ ಹಿರಿಮೆಗೂ ಅವರು ಒಳಗಾಗಿದ್ದಾರೆ. ಬಿಲ್ಲೆ ಅವರ ಆಯ್ಕೆಗೆ ಅಕಾಡೆಮಿ ಕಾರ್ಯದರ್ಶಿ ನೀಧಜ್‌ಕುಮಾರ್, ಕೆ.ಜಿನೇಂದ್ರಪ್ರಸಾದ್, ಕೋಚ್‌ಗಳಾದ ಭಗವಾನ್, ಮೊಹಮ್ಮದ್ ಅತ್ತಾರ್ ಹಾಗೂ ಮಂಜು ನರಸಿಂಗನವರ ಹರ್ಷ ವ್ಯಕ್ತಪಡಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry