ಮಂಗಳವಾರ, ಜನವರಿ 21, 2020
23 °C

ರೊಟ್ಟಿಯ ಆತಿಥ್ಯದ ಜಾತ್ರೆ

ವಿಶಾಲ ಶಿವಪ್ಪಯ್ಯನಮಠ Updated:

ಅಕ್ಷರ ಗಾತ್ರ : | |

ಬಾಗಲಕೋಟೆ ಎಂದಾಕ್ಷಣ ನೆನೆಪಾಗುವುದು ಸುಪ್ರಸಿದ್ಧ ಬಾದಾಮಿ ಕ್ಷೇತ್ರ. ಇದೇ 16ರ ಬನದ ಹುಣ್ಣಿಮೆ­ಯಂದು ಈ ಬನಶಂಕರಿದೇವಿಯ ಜಾತ್ರಾ ಸಂಭ್ರಮ.

ದಿವ್ಯ ಭವ್ಯ ಜಾತ್ರೆಯ ವೈಭವದ ಜೊತೆ ರೊಟ್ಟಿಯ ಆತಿಥ್ಯ ಇಲ್ಲಿಯ ವಿಶೇಷ.ದೇಗುಲದ ಎದುರಿಗೆ ಕಾಣುವ ಹರಿದ್ರ ತೀರ್ಥದ ಪುಷ್ಕರಣಿಯ ಸುತ್ತಮುತ್ತ ರೊಟ್ಟಿ ಮಾರುವ ಹೆಂಗಸರು ಭಕ್ತಾದಿಗಳ ಹೊಟ್ಟೆ ತುಂಬಿಸುವ ಅನ್ನಪೂರ್ಣೆಯರು. ‘ಸಾಹೇಬ್ರ ದೇವಿ ದರ್ಶನಾ ಮಾಡಿಕ್ಕೊಂಡು ನಮ್ಮ ಹತ್ರನೇ ಬರ್ರೀ... ಮೊಸರು, ರೊಟ್ಟಿ, ಕಾಳ ಪಲ್ಲೆ ಐತಿ, ಹೊಂಡಾ ಕಟ್ಟಿಮ್ಯಾಗ ಕುಂತು ಹೊಟ್ಟೆ ತುಂಬಾ ಊಟಾ ಮಾಡಿರಂತ’ ಎಂದು ಎಲ್ಲರನ್ನೂ ಸ್ವಾಗತಿಸುತ್ತಾರೆ. ಬನ್ನಿ ಜಾತ್ರೆಗೆ ಬಂದು ರೊಟ್ಟಿ ಸವಿಯಿರಿ.

 

ಪ್ರತಿಕ್ರಿಯಿಸಿ (+)