ಮಂಗಳವಾರ, ಜನವರಿ 28, 2020
19 °C

ರೊಮ್ನಿಗೆ ಹಿನ್ನಡೆ: ಅಚ್ಚರಿ ಫಲಿತಾಂಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ): ಈ ವರ್ಷದ ಅಂತ್ಯದಲ್ಲಿ ನಡೆಯಲಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯ ಆಯ್ಕೆಗಾಗಿ ದಕ್ಷಿಣ ಕರೋಲಿನಾ ರಾಜ್ಯದಲ್ಲಿ ನಡೆದ ಪ್ರಾಥಮಿಕ ಸುತ್ತಿನ ಮತದಾನದಲ್ಲಿ ಅಚ್ಚರಿಯ ಫಲಿತಾಂಶ ಹೊರಹೊಮ್ಮಿದೆ.ಈ ರಾಜ್ಯದಲ್ಲಿ ರಿಪಬ್ಲಿಕನ್ ಪಕ್ಷದ ಜನಪ್ರಿಯ ಅಭ್ಯರ್ಥಿಯೆಂದು ಬಿಂಬಿತವಾಗಿರುವ ಮಿಟ್ ರೊಮ್ನಿ ಅವರನ್ನು ಹಿಂದಿಕ್ಕಿ ದುರ್ಬಲ ಅಭ್ಯರ್ಥಿಯೆಂದು ಪರಿಗಣಿಸಲಾಗಿದ್ದ ನ್ಯೂಟ್ ಜಿಂಜ್ರಿಚ್ ಮೊದಲ ಸ್ಥಾನ ಪಡೆದಿದ್ದಾರೆ. ಹಲವು ದಶಕಗಳಿಂದ ದಕ್ಷಿಣ ಕರೋಲಿನಾದಲ್ಲಿ ಪ್ರಾಥಮಿಕ ಸುತ್ತಿನಲ್ಲಿ ಜಯ ಗಳಿಸಿದವರೇ ರಿಪಬ್ಲಿಕನ್  ಅಧ್ಯಕ್ಷೀಯ ಅಭ್ಯರ್ಥಿಯಾಗಿ ಆಯ್ಕೆಯಾಗುತ್ತಿರುವುದರಿಂದ ಜಿಂಜ್ರಿಚ್ ಜಯ ರೊಮ್ನಿ ಪ್ರಭಾವಳಿಯನ್ನು ಮಂಕಾಗಿಸಿದೆ.

ಪ್ರತಿಕ್ರಿಯಿಸಿ (+)