ಬುಧವಾರ, ಮೇ 25, 2022
29 °C

ರೋಣ: ಅಭಿವೃದ್ಧಿಗೆ 15 ಕೋಟಿ: ಬಂಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೋಣ: ಪಟ್ಟಣದ ವಿವಿಧ ಕಾಮಗಾರಿಗಳ ಅಭಿವದ್ಧಿಗಾಗಿ ರೂ 15 ಕೋಟಿ ಬಿಡುಗಡೆ ಮಾಡಲಾಗಿದ್ದು ಅದರಲ್ಲಿ 10 ಕೋಟಿಗೂ ಹೆಚ್ಚು ಹಣವನ್ನು ಬಳಕೆ ಮಾಡಲಾಗಿದೆ. ಬಾಕಿ ಉಳಿದಿರುವ ಎಲ್ಲಾ ಕಾಮಗಾರಿಗಳನ್ನು ಕೂಡಲೇ ಮುಗಿಸಲು ಇನ್ನುಳಿದಿರುವ 5 ಕೋಟಿಯನ್ನು ಶೀಘ್ರದಲ್ಲೆೀ ಬಿಡುಗಡೆಯಾಗಲಿದೆ ಎಂದು ಶಾಸಕ ಕಳಕಪ್ಪ ಬಂಡಿ ಭರವಸೆ ನೀಡಿದರು.ಇಲ್ಲಿಯ ಹುಡೇದ ಲಕ್ಷ್ಮಿದೇವಿ ಗುಡಿಯ ಸಮುದಾಯ ಭವನಕ್ಕೆ ಗುರುವಾರ ಭೂಮಿ ಪೂಜೆ ನೇರವೇರಿಸಿ ಅವರು ಮಾತನಾಡಿದರು.ಹಿಂದೆ ಗುಡಿಗುಂಡಾರಗಳ ಅಭಿವದ್ಧಿಗೆ ಗ್ರಾಮದ ಹಿರಿಯ ನಾಗರಿಕರ ಅನುದಾನದಿಂದ ಕಾಮಗಾರಿ ನಡೆಯುತ್ತಿತ್ತು. ಆದರೆ ಈಗ ಸರ್ಕಾರದ ಅನುದಾನದ ಜೊತೆಗೆ ನಡೆಯುತ್ತಿದೆ. ಈ ಸಮುದಾಯ ಭವನದ ಕೆಲಸ ನಗರದಲ್ಲಿ ಮಾದರಿಯ ಕೆಲಸವಾಗಬೇಕು ಮತ್ತು ಪಟ್ಟಣದ ಎಲ್ಲ ಬೀದಿಗಳಲ್ಲಿಯೂ ಸಿಮೆಂಟ್ ರಸ್ತೆ, ಚರಂಡಿ ನಿರ್ಮಾಣದ ಜೊತೆಗೆ ಪಟ್ಟಣದ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.ಸಮುದಾಯ ಭವನದ ನಿರ್ಮಾಣದಿಂದ ಎಲ್ಲರಿಗೂ ಅನುಕೂಲವಾಗುವಂತಹ ಕೆಲಸಗಳು ನಡೆಯಬೇಕು. ಶಾಸಕರ ಅನುದಾನದಿಂದ ರೂ 3 ಲಕ್ಷ ನೀಡಲಾಗಿದೆ ಅದರ ಸದ್ಬಳಕೆಯನ್ನು ಮಾಡಿಕೊಳ್ಳಬೇಕು. ಹಣದ ಬಳಕೆಯು ಉತ್ತಮವಾಗಿ ನಡೆಯಬೇಕು. ಇಲ್ಲಿ ಎಲ್ಲ ರೀತಿಯ ಸಾಂಸ್ಕೃತಿಕ ಮತ್ತು ಸಾಮಾಜಿಕ ಚಟುವಟಿಕೆಗಳು ನಿರಂತರವಾಗಿ ನಡೆಯುವಂತಾಗಲಿ ಎಂದು ಆಶಿಸಿದರು. ಅಶೋಕ ನವಲಗುಂದ, ಯಲ್ಲಪ್ಪ ಗದಗಿನ ಮಾತನಾಡಿದರು.ಸಮಾರಂಭದಲ್ಲಿ  ಡಾ. ಆನಂದ ಇನಾಮದಾರ, ಈಶ್ವರಪ್ಪ ಜಕ್ಕಲಿ, ಭೀಮಪ್ಪ ನವಲಗುಂದ, ದೇವೇಂದ್ರಗೌಡ ಮಾಳಗೌಡ, ಶರಣಪ್ಪ ಸಜ್ಜನರ, ಬಸನಗೌಡ ಪಾಟೀಲ, ಸಿದ್ಧಪ್ಪ ಗದುಗಿನ, ಈಶ್ವರ ಲಕ್ಷ್ಮೇಶ್ವರ, ಮುತ್ತಣ್ಣ ಹವಳಪ್ಪನವರ, ಶಿವಪ್ಪ ಮಾಮನಿ, ಬಸನಗೌಡ ಯಲಬುರ್ಗಿ, ಅಂದಪ್ಪ ಬನ್ನಿಗೋಳ, ಅರ್ಜುನ ಕೊಪ್ಪಳ ಬಸಪ್ಪ ಗದಗಿನ, ರುದ್ರಗೌಡ ಮಾಳಗೌಡ್ರ, ಶಿವಾನಂದ ಜಿಡ್ಡಿಬಾಗಿಲ, ಧಲಂಬಜನ ಮುಂತಾದವರು ಹಾಜರಿದ್ದರು. ಮುತ್ತಣ್ಣ ಲಿಂಗನಗೌಡರ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.