ಧಾರವಾಡ: ಕೊನೆಯ ಸುತ್ತಿನ ಪಂದ್ಯದಲ್ಲಿ ಶಿವಮೊಗ್ಗದ ಅರ್ಜುನ ಪ್ರಭು ಅವರನ್ನು ಪರಾಭವಗೊಳಿಸಿದ ಮೈಸೂರಿನ ವೈ.ಜಿ. ವಿಜೇಂದ್ರ ಒಟ್ಟಾರೆ 9.5 ಪಾಯಿಂಟ್ ಸಂಗ್ರಹಿಸುವ ಮೂಲಕ ಇಲ್ಲಿಯ ಕಿಟೆಲ್ ಕಾಲೇಜಿನಲ್ಲಿ ನಡೆದ ರಾಜ್ಯ ರ್ಯಾಪಿಡ್ ಚೆಸ್ ಟೂರ್ನಿಯಲ್ಲಿ ಭಾನುವಾರ ಚಾಂಪಿಯನ್ ಆಗಿ ಹೊರಹೊಮ್ಮಿದರು.

ಟೂರ್ನಿಯುದ್ದಕ್ಕೂ ಅಜೇಯ ದಾಖಲೆಯನ್ನು ಉಳಿಸಿಕೊಂಡ ವಿಜೇಂದ್ರ, ಒಂಬತ್ತನೇ ಸುತ್ತಿನ ಪಂದ್ಯದಲ್ಲಿ ತುಮಕೂರಿನ ಪ್ರಜ್ವಲ್ ಶೇಟ್ ಅವರನ್ನು ಸೋಲಿಸಿದ್ದರು. ಬೆಂಗಳೂರಿನ ಎಚ್.ಜಿ. ಸಂತೋಷಕಶ್ಯಪ್ ಒಂಬತ್ತು ಪಾಯಿಂಟ್ಗಳೊಂದಿಗೆ ಎರಡನೇ ಸ್ಥಾನ ಪಡೆದರೆ, ತಲಾ ಎಂಟು ಪಾಯಿಂಟ್ ಗಳಿಸಿದ ಶಿವಮೊಗ್ಗದ ಎಸ್. ಶ್ರೀಶನ್ ಮತ್ತು ಡಾ. ವಿಶ್ವನಾಥ ಬಳಿಗಾರ ತೃತೀಯ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.

16 ವರ್ಷದೊಳಗಿನವರ ವಿಭಾಗದಲ್ಲಿ ಧಾರವಾಡದ ಪ್ರಜ್ವಲ್ ಕಶ್ಯಪ್, 14 ವರ್ಷದೊಳಗಿನವರ ವಿಭಾಗದಲ್ಲಿ ಹುಬ್ಬಳ್ಳಿಯ ವಾಣಿ ಇಂದ್ರಾಲಿ, 12 ವರ್ಷದೊಳಗಿನವರ ವಿಭಾಗದಲ್ಲಿ ನಾಗಶ್ರವಣ ಹೇಮಾದ್ರಿ, 10 ವರ್ಷದೊಳಗಿನವರ ವಿಭಾಗದಲ್ಲಿ ಆದಿತ್ಯ ಕಲ್ಯಾಣಿ, ಎಂಟು ವರ್ಷದೊಳಗಿನವರ ವಿಭಾಗದಲ್ಲಿ ಪ್ರಜ್ವಲ್ ಜೋಶಿ ಪ್ರಶಸ್ತಿ ಗೆದ್ದುಕೊಂಡರು. ಮೇಯರ್ ಪೂರ್ಣಾ ಪಾಟೀಲ ಪ್ರಶಸ್ತಿ ವಿತರಿಸಿದರು.

ಫಲಿತಾಂಶ: ವೈ.ಜಿ. ವಿಜೇಂದ್ರ (ಮೈಸೂರು, 9.5 ಪಾಯಿಂಟ್), ಎಚ್.ಜಿ. ಸಂತೋಷಕಶ್ಯಪ (ಬೆಂಗಳೂರು, 9), ಎಸ್.ಶ್ರೀಶನ್ (ಶಿವಮೊಗ್ಗ, 8), ಡಾ. ವಿಶ್ವನಾಥ ಬಳಿಗಾರ (ಶಿವಮೊಗ್ಗ, 8), ಆರ್. ಹನುಮಂತ (ಎಲ್ಐಸಿ, 7.5), ಚಿದಂಬರ ಕುಲಕರ್ಣಿ (ಧಾರವಾಡ, 7.5), ಪ್ರಜ್ವಲ್ ಪಿ. ಶೇಟ್ (ತುಮಕೂರು, 7.5).

16 ವರ್ಷದೊಳಗಿನವರು: ಪ್ರಜ್ವಲ್ ಕಶ್ಯಪ್ (ಧಾರವಾಡ, 6.5), ಅನಿಲಕುಮಾರ್ ಅಣ್ಣಿಗೇರಿ (ಹುಬ್ಬಳ್ಳಿ, 6), 14 ವರ್ಷದೊಳಗಿನವರು: ವಾಣಿ ಎಸ್. ಇಂದ್ರಾಲಿ, ಸಮರ್ಥ ಶಿವಾನಂದ ಸಂಗಮ (ಇಬ್ಬರೂ ಹುಬ್ಬಳ್ಳಿ, 6.5), 10 ವರ್ಷದೊಳಗಿನವರು: ಆದಿತ್ಯ ಕಲ್ಯಾಣಿ (ಹುಬ್ಬಳ್ಳಿ, 6), ಧ್ರುವ (ಹೊನ್ನಾವರ, 6), 8 ವರ್ಷದೊಳಗಿನವರು: ಪ್ರಜ್ವಲ್ ಜೋಶಿ, ಶಶಾಂಕ ಜೆ. (ಇಬ್ಬರೂ ಹುಬ್ಬಳ್ಳಿ, 4), ಹಿರಿಯ ವಿಭಾಗ: ಎಚ್. ಶ್ರೀನಿವಾಸಮೂರ್ತಿ (ಹುಬ್ಬಳ್ಳಿ, 7).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.