ಬುಧವಾರ, ಜೂನ್ 23, 2021
28 °C

ಲಂಕೇಶ್ ಸಾರ್ವಕಾಲಿಕ ಕೃತಿಕಾರ: ಪ್ರೊ.ಚಂಪಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಲಂಕೇಶ್ ತಮ್ಮ ಕೃತಿಗಳಲ್ಲಿ ಸಾರ್ವಕಾಲಿಕ ಮಹತ್ವದ ವಿಷಯಗಳನ್ನು ಚರ್ಚೆ ಮಾಡಿದ್ದರಿಂದ ಅವರು ಸಾರ್ವಕಾಲಿಕ ಕೃತಿಕಾರನಾಗಿ ಕಾಣಿಸಿಕೊಂಡಿದ್ದಾರೆ ಎಂದು ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಅಭಿಪ್ರಾಯಪಟ್ಟರು.ನಗರದ ಕುವೆಂಪು ರಂಗಮಂದಿರದಲ್ಲಿ ಶಿವಮೊಗ್ಗ ರಂಗಾಯಣ ಹಮ್ಮಿಕೊಂಡಿರುವ ಮೂರು ದಿನಗಳ `ಪಿ. ಲಂಕೇಶ್ ನಾಟಕೋತ್ಸವ~ದ ಉದ್ಘಾಟನಾ ಸಮಾರಂಭದಲ್ಲಿ ಮಂಗಳವಾರ ಅವರು ಮಾತನಾಡಿದರು.

ಅವರ `ಗುಣಮುಖ~, `ಸಂಕ್ರಾಂತಿ~, `ಕಲ್ಲು ಕರಗುವ ಸಮಯ~ ನಾಟಕಗಳು ಇಂದಿನ ಸಮಾಜಕ್ಕೆ ಹೆಚ್ಚು ಪ್ರಸ್ತುತವಾಗಿವೆ ಎಂದು ವಿಶ್ಲೇಷಿಸಿದರು.ಈ ಜಿಲ್ಲೆಯ ಮಣ್ಣಿನ ಗುಣ ವಿಶಿಷ್ಟವಾದದ್ದು, ಹಲವು ಪ್ರಬುದ್ಧ ಹೋರಾಟಗಾರರನ್ನು, ದಾರ್ಶನಿಕರನ್ನು ನೀಡಿದ ಈ ನೆಲದಲ್ಲಿ ಲಂಕೇಶ್ ಕೂಡ ತಮ್ಮ ಅಸ್ತಿತ್ವವನ್ನು ಕಂಡುಕೊಂಡು ಹೋರಾಟದ ಮೂಲಕ ಸಾಂಸ್ಕೃತಿಕ ಚೌಕಟ್ಟನ್ನು ತಂದುಕೊಟ್ಟರು ಎಂದು ಸ್ಮರಿಸಿದರು.ಕುವೆಂಪು ಕನ್ನಡ ಸಾಹಿತ್ಯದ ಮಟ್ಟಿಗೆ ಹೊಸ ಕೊಡುಗೆ ನೀಡಿದರೆ, ಲಂಕೇಶ್ ಅದೇ ಮಾದರಿಯಲ್ಲಿ ಕನ್ನಡಕ್ಕೆ ಹೊಸ ಪರಂಪರೆ ಹುಟ್ಟು ಹಾಕಿದರು. ತಮ್ಮ ಸೈದ್ಧಾಂತಿಕ, ಸಾಂಸ್ಕೃತಿಕ ನಿಲುವುಗಳಿಂದ ಎಲ್ಲರಿಗಿಂತ ವಿಭಿನ್ನವಾಗಿ ನಿಂತರು ಎಂದರು.ನಾಟಕೋತ್ಸವ ಉದ್ಘಾಟಿಸಿದ ಪತ್ರಕರ್ತೆ ಗೌರಿ ಲಂಕೇಶ್ ಮಾತನಾಡಿ, ಇಂದು ನಡೆಯುತ್ತಿರುವ ಮರ‌್ಯಾದಾ ಹತ್ಯೆಗಳನ್ನು ಲಂಕೇಶ್ ಆ ಕಾಲದಲ್ಲೇ ಗುರುತಿಸಿದ್ದರು. `ಸಂಕ್ರಾಂತಿ~, `ಕಲ್ಲು ಕರಗುವ ಸಮಯ~ ನಾಟಕಗಳು ಸಮಾಜದಲ್ಲಿ ಹೊಸ ಅರಿವು ಮೂಡಿಸಲು ಸಹಾಯಕವಾಗಲಿವೆ ಎಂದರು.ರಂಗಾಯಣ ನಿರ್ದೇಶಕ ಹೊ.ನ. ಸತ್ಯ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎನ್. ಹರಿಕುಮಾರ್ ವಂದಿಸಿದರು. ಕಾರ್ಯಕ್ರಮದ ನಂತರ ಶಿವಮೊಗ್ಗದ `ನಮ್ ಟೀಮ್!?~ ತಂಡ ನಟರಾಜ್ ಹೊನ್ನವಳ್ಳಿ ನಿರ್ದೇಶನದಲ್ಲಿ `ಗುಣಮುಖ~ ನಾಟಕ ಪ್ರದರ್ಶಿಸಿತು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.