ಲಕ್ಷ್ಮೀ ವರಿಸಿದ ರೋಹನ್

7

ಲಕ್ಷ್ಮೀ ವರಿಸಿದ ರೋಹನ್

Published:
Updated:
ಲಕ್ಷ್ಮೀ ವರಿಸಿದ ರೋಹನ್

ಚೆನ್ನೈ (ಪಿಟಿಐ): `ಇನ್ಫೋಸಿಸ್~ ಮುಖ್ಯಸ್ಥ ನಾರಾಯಣ ಮೂರ್ತಿ ಅವರ ಪುತ್ರ ರೋಹನ್ ಮೂರ್ತಿ ಮತ್ತು `ಟಿವಿಎಸ್~ ಮೋಟಾರ್ ಕಂಪೆನಿಯ ಅಧ್ಯಕ್ಷ ವೇಣು ಶ್ರೀನಿವಾಸನ್ ಅವರ ಪುತ್ರಿ ಲಕ್ಷ್ಮೀ  ವೇಣು ಅವರ ವಿವಾಹ ಭಾನುವಾರ ಇಲ್ಲಿ ನಡೆಯಿತು.ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ `ಪಿಎಚ್‌ಡಿ~ ಪಡೆದಿರುವ ರೋಹನ್ ಮೂರ್ತಿ (28) ಸದ್ಯ ಮೈಕ್ರೊಸಾಫ್ಟ್‌ನಲ್ಲಿ ವೃತ್ತಿನಿರತರಾಗಿದ್ದಾರೆ.  ಈ ವಿವಾಹವು ದೇಶದ ಎರಡು ಪ್ರಮುಖ ಉದ್ದಿಮೆ ಕುಟುಂಬಗಳನ್ನು ಇನ್ನಷ್ಟು ಹತ್ತಿರ ತಂದಿದೆ.ಬಿಜೆಪಿ ಮುಖಂಡ ಎಲ್.ಕೆ ಅಡ್ವಾಣಿ, ಕೇಂದ್ರ ಸಚಿವರಾದ ಪಿ.ಚಿದಂಬರಂ, ಕಮಲ್‌ನಾಥ್, ಆನಂದ್ ಶರ್ಮಾ ಮತ್ತು ಜಿ.ಕೆ ವಾಸನ್ ಸೇರಿದಂತೆ ಅನೇಕ ಗಣ್ಯರು ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದರು. ಇನ್ಫೋಸಿಸ್‌ನ ಮಾಜಿ ಅಧ್ಯಕ್ಷ ಹಾಗೂ ರಾಷ್ಟ್ರೀಯ ವಿಶಿಷ್ಠ ಗುರುತಿನ ಸಂಖ್ಯೆ ಪ್ರಾಧಿಕಾರದ ಅಧ್ಯಕ್ಷ ನಂದನ್ ನಿಲೇಕಣಿ, ಏರ್‌ಡೆಕ್ಕನ್ ಸ್ಥಾಪಕ ಅಧ್ಯಕ್ಷ ಕ್ಯಾಪ್ಟನ್ ಜಿ.ಆರ್ ಗೋಪಿನಾಥ್ ಮತ್ತು ಗೋದ್ರೆಜ್ ಸಮೂಹದ ಅಧ್ಯಕ್ಷ ಆದಿ ಗೋದ್ರೇಜ್ ಮತ್ತಿತರರೂ ನೂತನ ವಧು ವರರನ್ನು ಆಶೀರ್ವದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry