ಸೋಮವಾರ, ಮೇ 23, 2022
30 °C

ಲವಲವಿಕೆಯಿಂದ ಇದ್ದ ಸಂಪಂಗಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಲಂಚ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಶಾಸಕ ವೈ.ಸಂಪಂಗಿ ಅವರು ಸೋಮವಾರ ಇಡೀ ದಿನ ಲವಲವಿಕೆಯಿಂದಿದ್ದರು ಎಂದು ಜೈಲಿನ ಅಧಿಕಾರಿಗಳು ಹೇಳಿದ್ದಾರೆ.ಬೆಳಿಗ್ಗೆ ಬೇಗನೆ ಎಚ್ಚರಗೊಂಡ ಅವರು ಕಾರಾಗೃಹದ ಆವರಣದಲ್ಲಿ ಕೆಲ ಕಾಲ ವಾಯುವಿಹಾರ ಮಾಡಿದರು. ಬಳಿಕ ಉಪಾಹಾರ ಸೇವಿಸಿ ಹಲವು ದಿನಪತ್ರಿಕೆಗಳನ್ನು ಓದಿದರು. ಅಲ್ಲದೇ, ಸಹ ಕೈದಿಗಳು ಹಾಗೂ ಜೈಲಿನ ಸಿಬ್ಬಂದಿ ಜತೆ ಮಾತುಕತೆ ನಡೆಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

ಸಂಪಂಗಿ ಅವರ ಪತ್ನಿ ರೇಣುಕಾ, ಪುತ್ರ ಪ್ರವೀಣ್ ಮತ್ತು ಕಾನೂನು ಸಲಹೆಗಾರರು ಅವರನ್ನು ಭೇಟಿ ಮಾಡಿದ್ದರು ಎಂದು ಅಧಿಕಾರಿಗಳು ಮಾಹಿತಿ  ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.