ಲಂಡನ್ (ಐಎಎನ್ಎಸ್): ವಿಶ್ವ ಚಾಂಪಿಯನ್ ಬ್ರಿಟ್ನಿ ರೀಸ್ ಲಂಡನ್ ಒಲಿಂಪಿಕ್ಸ್ನ ಮಹಿಳೆಯರ ಲಾಂಗ್ಜಂಪ್ನಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.

ಬುಧವಾರ ರಾತ್ರಿ ನಡೆದ ಈ ವಿಭಾಗದ ಸ್ಪರ್ಧೆಯಲ್ಲಿ ಅಮೆರಿಕದ ರೀಸ್ 7.12 ಮೀಟರ್ಸ್ ದೂರ ಜಿಗಿದರು. ಮೊದಲ ಯತ್ನದಲ್ಲಿ ಫೌಲ್ ಮಾಡಿದ್ದರು. ಆದರೆ ಎರಡನೇ ಯತ್ನದಲ್ಲಿ ಅವರು ಚಿನ್ನದ ಸಾಧನೆ ಮಾಡಿದರು. ರೀಸ್ ಈ ಪದಕವನ್ನು ತನ್ನ ತವರೂರಾದ ಮಿಸಿಸ್ಸಿಪಿ ಜನರಿಗೆ ಅರ್ಪಿಸಿದರು. `ಇಲ್ಲಿನ ಜನರು ಕತ್ರಿನಾ ಚಂಡಮಾರುತಕ್ಕೆ ಸಿಲುಕಿ ತಮ್ಮ ಆಸ್ತಿಯನ್ನೆಲ್ಲಾ ಕಳೆದುಕೊಂಡಿದ್ದಾರೆ. ಈ ಪದಕ ಅವರಿಗೆ ಕೊಂಚ ಸಾಂತ್ವನ ನೀಡಬಹುದು~ ಎಂದು ಅವರು ನುಡಿದಿದ್ದಾರೆ.

ರಷ್ಯಾದ ಎಲೆನಾ ಸೊಕೊಲೊವಾ (7.07 ಮೀ.) ಬೆಳ್ಳಿ ಪದಕ ಗೆದ್ದರು. ಈ ಹಾದಿಯಲ್ಲಿ ಅವರು ತಮ್ಮ ವೈಯಕ್ತಿಕ ದಾಖಲೆಯನ್ನು ಉತ್ತಮಪಡಿಸಿಕೊಂಡರು. ಕಂಚಿನ ಪದಕ ಕೂಡ ಅಮೆರಿಕದ ಜನಯ್ ಡೆಲೋಚ್ ಅವರ ಪಾಲಾಯಿತು.

ಈ ವರ್ಷ 7.11 ಮೀಟರ್ಸ್ ದೂರ ಜಿಗಿದಿದ್ದ ಅನಾ ನಜರೋವಾ ಐದನೇ ಸ್ಥಾನಕ್ಕೆ ಸಮಾಧಾನಪಡಬೇಕಾಯಿತು. ಅವರು ಇಲ್ಲಿ ಕೇವಲ 6.77 ಮೀ. ದೂರ ಜಿಗಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.