ವಾಷಿಂಗ್ಟನ್ (ಪಿಟಿಐ): ಅಲ್ ಖೈದಾ ಸಂಘಟನೆಯ ಮುಖ್ಯಸ್ಥ ಒಸಾಮ ಬಿನ್ಲಾಡೆನ್ ವಿರುದ್ಧ ಕಳೆದ ವರ್ಷ ಪಾಕಿಸ್ತಾನದ ಅಬೋಟಾಬಾದ್ನಲ್ಲಿ ನಡೆದ ಕಾರ್ಯಾಚರಣೆ ಕುರಿತಾಗಿ ಹೊಸ ಹೊಸ ಮಾಹಿತಿಗಳು ಬಹಿರಂಗಗೊಳ್ಳುತ್ತಲೇ ಇವೆ.

ಅಮೆರಿಕದ ಉನ್ನತ ಅಧಿಕಾರಿಯೊಬ್ಬರು ಈಗ ಮತ್ತೊಂದು ವಿಷಯವನ್ನು ಬಹಿರಂಗಪಡಿಸಿದ್ದಾರೆ.
ಕಾರ್ಯಾಚರಣೆಯ ಸಂದರ್ಭದಲ್ಲಿ ಅಮೆರಿಕದ ವಿಶೇಷ ಪಡೆಗಳ ಸಿಬ್ಬಂದಿ ಲಾಡೆನ್ ಅಡಗುದಾಣದಿಂದ ದೂರವಾಣಿಯೊಂದನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಮೆರಿಕದ ಹಣಕಾಸು ಇಲಾಖೆಯ ಆರ್ಥಿಕ ಅಪರಾಧಗಳ ಕಾನೂನು ಜಾರಿ ಜಾಲದ ನಿರ್ದೇಶಕರಾದ ಜೆನಿಫರ್ ಶಾಸ್ಕಿ ಕಲ್ವೆರಿ ಹೇಳಿದ್ದಾರೆ.

ಅಕ್ರಮ ಹಣ ವರ್ಗಾವಣೆ ಕುರಿತಂತೆ ನಡೆದ ಪತ್ರಿಕಾಗೋಷ್ಠಿಯಲ್ಲಿ, ಭಯೋತ್ಪಾದನೆ ವಿರುದ್ಧದ ಹೋರಾಡಲು ಎಫ್ಬಿಐ ಜಾರಿ ಗೊಳಿಸಿರುವ `ಸಂಶಯದ ಚಟುವಟಿಕೆ ವರದಿ~ಯ (ಎಸ್ಎಆರ್) ಮಹತ್ವವನ್ನು ವಿವರಿಸುವ ಸಂದರ್ಭದಲ್ಲಿ ಅವರು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಕಳೆದ ವರ್ಷದ ಮೇ 2ರಂದು ರಾತ್ರಿ ಅಮೆರಿಕದ ಕಮಾಂಡೊಗಳು ಅಬೋಟಾಬಾದ್ನಲ್ಲಿ ನಡೆಸಿದ್ದ ಕಾರ್ಯಾಚರಣೆಯಲ್ಲಿ ಒಸಾಮ ಬಿನ್ ಲಾಡೆನ್ ಅಸುನೀಗಿದ್ದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.