ಭಾನುವಾರ, ಸೆಪ್ಟೆಂಬರ್ 15, 2019
23 °C

ಲಾಡೆನ್ ಹತ್ಯೆಯಿಂದ ನ್ಯಾಯ: ಒಬಾಮ

Published:
Updated:

ವಾಷಿಂಗ್ಟನ್ (ಪಿಟಿಐ): 9/11ರ ದಾಳಿಯ ರೂವಾರಿಯಾದ ಅಲ್‌ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್‌ನನ್ನು ಕಳೆದ ಮೇ 2ರಂದು ಪಾಕಿಸ್ತಾನದಲ್ಲಿ ಹತ್ಯೆ ನಡೆಸುವ ಮೂಲಕ ನ್ಯಾಯ ದೊರಕಿಸಿರುವುದಾಗಿ ತಿಳಿಸಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ಇದಕ್ಕೆ ಪ್ರತಿಯಾಗಿ ಸೇಡು ತೀರಿಸಿಕೊಳ್ಳುವ ಹಾದಿಯಲ್ಲಿ ಈಗ ಉಗ್ರರು ಜಾಲ ಹರಡಿರುವುದಾಗಿ ಘೋಷಿಸಿದ್ದಾರೆ.ಉಗ್ರರ ದಾಳಿಯ 10ನೇ ವರ್ಷಾಚರಣೆಗೂ ಪೂರ್ವಭಾವಿಯಾಗಿ ಅವರು ಗುರುವಾರ ಆನ್‌ಲೈನ್ ಪತ್ರಿಕೆ `ಒಪೆಡ್~ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. `9/11ರ ತಪ್ಪಿತಸ್ಥರು ಅಮೆರಿಕವನ್ನು ಸತತವಾಗಿ ದಾಳಿಗಳ ಮೂಲಕ ಭಯೋತ್ಪಾದನೆಗೆ ಗುರಿಪಡಿಸಲು ಬಯಸಿದ್ದಾರೆ. ಆದರೆ ನಮ್ಮ ತಾಳ್ಮೆ ಇದನ್ನು ಮೀರಿ ನಿಂತಿದೆ. ಇಂದು ನಮ್ಮ ದೇಶ ಅತ್ಯಂತ ಸುರಕ್ಷಿತವಾಗಿದ್ದು, ಶತ್ರುಗಳು ದುರ್ಬಲವಾಗಿದ್ದಾರೆ~ ಎಂದೂ ಅವರು ಹೇಳಿದ್ದಾರೆ. 

Post Comments (+)