ಬುಧವಾರ, ಆಗಸ್ಟ್ 4, 2021
21 °C

ಲಾಡೆನ್ ಹತ್ಯೆ: ಆದೇಶಕ್ಕೆ ಏ.29ರಂದು ಅಂತಿಮ ಸಹಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್, (ಪಿಟಿಐ): ಹಲವು ತಿಂಗಳುಗಳ ತಯಾರಿ, ಗಹನ ಚರ್ಚೆ ಮತ್ತು ಸೂಕ್ಷ್ಮ ಪರಿಶೀಲನೆಯ ಬಳಿಕ  ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಲಾಡೆನ್ ಹತ್ಯೆಗೆ ಏ. 29ರಂದು ಅಂತಿಮ ಸಹಿ ಹಾಕಿದ್ದರು.



ಲಾಡೆನ್ ಹತ್ಯೆ ಕಾರ್ಯಾಚರಣೆಯನ್ನು ಒಬಾಮ ಖುದ್ದಾಗಿ ಪರಿಶೀಲನೆ ನಡೆಸಿದ್ದರು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಅಲಬಾಮಗೆ ತೆರಳುವ ಮುನ್ನ ಅಧ್ಯಕ್ಷರೇ ಸ್ವತಃ ಏ. 29ರ ಬೆಳಿಗ್ಗೆ 8.20 ರ ವೇಳೆಗೆ ಈ ರಹಸ್ಯ ಕಾರ್ಯಾಚರಣೆಗೆ ರಾಜತಾಂತ್ರಿಕ ಕೊಠಡಿಯಲ್ಲಿ  ಅಂತಿಮ ಅನುಮತಿ ನೀಡಿದ್ದರು ಎಂದು ಅವರು ತಿಳಿಸಿದ್ದಾರೆ.



ಇದೇ ವೇಳೆ ಶ್ವೇತಭವನದ ರಾಜತಾಂತ್ರಿಕ ಕೊಠಡಿಯಲ್ಲಿ ಉಪಸ್ಥಿತರಿದ್ದ ಅಧ್ಯಕ್ಷರ ರಾಷ್ಟ್ರೀಯ ಭದ್ರತಾ ಸಲಹೆಗಾರ ಟಾಮ್ ಡಾನಿಲನ್ ಅವರು ಕಾರ್ಯಾಚರಣೆಯ ಅಧಿಕೃತ ಆದೇಶಗಳನ್ನು ಸಿದ್ಧಪಡಿಸಿದರಲ್ಲದೆ ಮಧ್ಯಾಹ್ನ 3 ರ ವೇಳೆ ಸಭೆ ಕರೆದು ಯೋಜನೆಯನ್ನು ಪೂರ್ಣಗೊಳಿಸಿದರು.



ಆರಂಭದ ದಿನಗಳಲ್ಲೇ ಯೋಜನೆ:


ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಆರಂಭದ ದಿನಗಳಲ್ಲೇ ಬರಾಕ್ ಒಬಾಮ ಅವರು ಲಾಡೆನ್ ಹತ್ಯೆಗೆ ಮೊದಲ ಆದ್ಯತೆ ನೀಡುವಂತೆ ತಮ್ಮ ಬೇಹುಗಾರಿಕಾ ದಳದವರಿಗೆ ಅನೌಪಚಾರಿಕವಾಗಿ ತಿಳಿಸಿದ್ದರು.

 

ಮಾತ್ರವಲ್ಲ, ಈ ಕಾರ್ಯಾಚರಣೆಯ ಅಂತಿಮ ರೂಪುರೇಷೆಗೆ ಮುನ್ನ ಒಬಾಮಾ ಅವರು ತಮ್ಮ ಭದ್ರತಾ ಸಲಹಾ ತಂಡದೊಂದಿಗೆ ಕನಿಷ್ಠ ಒಂಬತ್ತು ಬಾರಿ ಸಭೆ ಕರೆದು ಸಮಾಲೋಚನೆ ನಡೆಸಿದ್ದರು.



ಹುತಾತ್ಮರ ಸ್ಮರಣೆಯ ಕಾಲ-ಕ್ಯಾಮರೂನ್


ಲಂಡನ್ (ಪಿಟಿಐ):  ಲಾಡೆನ್ ಹತ್ಯೆಯನ್ನು ಸ್ವಾಗತಿಸಿರುವ ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಉಗ್ರರಿಂದ ಹತ್ಯೆಗೀಡಾದ ಜನರನ್ನು ಸ್ಮರಿಸಲು ಇದು ಸೂಕ್ತ ಸಮಯ ಎಂದು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.