ಚಂಡೀಗಡ (ಪಿಟಿಐ): ಬಾಂಗ್ಲಾದೇಶದ ಅಭಿಮಾನಿಗಳು ವೆಸ್ಟ್ಇಂಡೀಸ್ ಆಟಗಾರರಿದ್ದ ಬಸ್ಸಿನ ಮೇಲೆ ಕಲ್ಲು ಎಸೆದ ಘಟನೆಯನ್ನು ‘ಸಣ್ಣ ಘಟನೆ’ ಎಂದಿರುವ ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಹರೂನ್ ಲಾರ್ಗಟ್ ಹೇಳಿಕೆ ‘ಹಾಸ್ಯಾಸ್ಪದ’ ಎಂದು ವೆಸ್ಟ್ಇಂಡೀಸ್ ತಂಡದ ಕೋಚ್ ಆಟಿಸ್ ಗಿಬ್ಸನ್ ಟೀಕಿಸಿದ್ದಾರೆ.

‘ನಮ್ಮ ತಂಡದ ಆಟಗಾರರಿದ್ದ ಬಸ್ಸಿಗೆ ಢಾಕಾದಲ್ಲಿ ಕಲ್ಲು ಬಿದ್ದಿತು. ಚೆನ್ನೈನಲ್ಲಿ ತಣ್ಣನೆಯ ಕೊಠಡಿಯಲ್ಲಿ ಕುಳಿತು ಲಾರ್ಗಟ್ ‘ಸಣ್ಣ ಘಟನೆ’ ಎಂದು ಹೇಳುವುದು ಸುಲಭ. ಆಟಗಾರರಿಗೆ ತೊಂದರೆಯಾದರೆ ಲಾರ್ಗಟ್ ಜವಾಬ್ದಾರರು. ಇದನ್ನು ಅರಿತುಕೊಳ್ಳಬೇಕು. ಅವರು ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿ. ಇಂಥ ಘಟನೆಗಳು ನಡೆದಾಗ ಎಚ್ಚರಿಕೆಯಿಂದ ಪ್ರತಿಕ್ರಿಯಿಸಬೇಕು’ ಎಂದು ಗಿಬ್ಸನ್ ಹೇಳಿದ್ದಾರೆ.

ಶುಕ್ರವಾರ ನಡೆದ ಪಂದ್ಯದಲ್ಲಿ ಕೆರಿಬಿಯನ್ ಆಟಗಾರರು ಬಾಂಗ್ಲಾ ತಂಡವನ್ನು ಕೇವಲ 58 ರನ್ಗಳಿಗೆ ಮಣಿಸಿ ಭರ್ಜರಿ ಗೆಲುವು ಪಡೆದಿದ್ದರು. ಇದರಿಂದ ಹತಾಶೆಗೊಂಡ ಕೆಲ ಅಭಿಮಾನಿಗಳು ಡರೆನ್ ಸಾಮಿ ಪಡೆಯವರಿದ್ದ ಬಸ್ಸಿನತ್ತ ಕಲ್ಲು ಎಸೆದರು. ಆದರೆ ಅದೃಷ್ಟವಶಾತ್ ಯಾರಿಗೂ ಕಲ್ಲು ತಾಗಿರಲಿಲ್ಲ. ಬಾಂಗ್ಲಾ ನಾಯಕ ಶಕೀಬ್-ಅಲ್-ಹಸನ್ ಅವರ ಮನೆಯ ಮೇಲೂ ಕ್ರಿಕೆಟ್ ಪ್ರೇಮಿಗಳು ಕಲ್ಲು ಎಸೆದು ಆಕ್ರೋಶ ವ್ಯಕ್ತಪಡಿಸಿದ್ದರು.

‘ಬಾಂಗ್ಲಾದೇಶದ ಆಟಗಾರರ ಬಸ್ಸು ಎಂದು ತಿಳಿದ ಕೆಲ ಅಭಿಮಾನಿಗಳು ತಪ್ಪು ತಿಳಿವಳಿಕೆಯಿಂದ ವೆಸ್ಟ್ಇಂಡೀಸ್ ತಂಡದ ಬಸ್ಸಿನ ಮೇಲೆ ಕಲ್ಲು ಎಸೆದರು ಎಂದು ಮಾಧ್ಯಮಳು ವರದಿ ಮಾಡಿವೆ. ಆದರೆ ಯಾವ ಆಟಗಾರರರಾದರೇನು ಸುರಕ್ಷತೆ ಮುಖ್ಯ’ ಎಂದು ಗಿಬ್ಸನ್ ಹೇಳಿದ್ದಾರೆ.

ಈ ಘಟನೆಯ ನಂತರ ಚೆನ್ನೈಯಲ್ಲಿ ಹರೂನ್ ಲಾರ್ಗಟ್ ‘ಇದೊಂದು ಸಣ್ಣ ಘಟನೆ’ ಎಂದು ಹೇಳಿಕೆ ನೀಡಿದ್ದರು.ಈ ಘಟನೆಯ ಬಳಿಕ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಅಧ್ಯಕ್ಷರಿಗೆ ಸಂದೇಶ ರವಾನಿಸಿರುವ ಗಿಬ್ಸನ್ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯ ಕ್ಷಮೆ ಕೋರುವಂತೆ ತಿಳಿಸಿದ್ದಾರೆ.ಗತಿಸಿ ಹೋದ ಘಟನೆಯ ಬಗ್ಗೆ ಧೃತಿಗೆಡದೆ ಮಾ. ಮುಂದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರುವ ಬಗ್ಗೆ ಗಮನ ಹರಿಸುತ್ತೇವೆ ಎಂದು ಕೋಚ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.