ಲಾಲ್ಗುಡಿ ಜಯರಾಮನ್ ಕರ್ನಾಟಕ ಸಂಗೀತದ ದಿಗ್ಗಜರಲ್ಲಿ ಒಬ್ಬರು. ಹಿರಿಯ ಪಿಟೀಲು ವಾದಕ ಮತ್ತು ಸಂಗೀತಗಾರರೂ ಹೌದು. ಸಂಗೀತ ಸಂಯೋಜನೆಯಲ್ಲೂ ತಮ್ಮನ್ನು ತೊಡಗಿಸಿಕೊಂಡವರು. ಕಳೆದ ವರ್ಷ ಅವರಿಗೆ 80 ವರ್ಷವಾದಾಗ ಸ್ಥಾಪನೆಯಾದ ‘ಲಾಲ್ಗುಡಿ 80’ ಟ್ರಸ್ಟ್ ಅವರ ಸಾಧನೆ, ಅವರ ಸಂಗೀತದ ವೈಶಿಷ್ಟ್ಯ, ಅವರ ಸಂಗೀತ ಸಂಯೋಜನೆಗಳನ್ನು ದಾಖಲಿಸುವ ಕೆಲಸ ಮಾಡುತ್ತಿದೆ.ವಿವಿಧ ಸಂಗೀತ ಕಾರ್ಯಕ್ರಮ ನಡೆಸಿ ಸಂಗ್ರಹವಾಗುವ ನಿಧಿಯನ್ನು ಬಡ ಹೃದ್ರೋಗಿ ಮಕ್ಕಳ ಶಸ್ತ್ರಕ್ರಿಯೆಗಾಗಿ ‘ಐಶ್ವರ್ಯ ಟ್ರಸ್ಟ್’ಗೆ ನೀಡುತ್ತಿದೆ.

‘ಲಾಲ್ಗುಡಿ 80’ ಉತ್ಸವದ ಮುಂದುವರಿದ ಭಾಗವಾಗಿ ಲಾಲ್ಗುಡಿಯವರ ಪುತ್ರಿ ಮತ್ತು ಶಿಷ್ಯೆ ಲಾಲ್ಗುಡಿ ವಿಜಯಲಕ್ಷ್ಮಿ ‘ಅರ್ಪಣಂ’ ಸಂಗೀತ ಸಂಜೆ ನಡೆಸಿಕೊಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಲಾಲ್ಗುಡಿ ಅವರ ವಿಶಿಷ್ಟ ತಿಲ್ಲಾನಗಳನ್ನು ಹೊಂದಿರುವ ‘ನಾದ ನಟನ - ಲಾಲ್ಗುಡಿ ತಿಲ್ಲಾನಗಳು’ ಸೀಡಿ ಬಿಡುಗಡೆ ಮಾಡಲಾಗುತ್ತಿದೆ. ಇದರಲ್ಲಿ ಸ್ವತಃ ಲಾಲ್ಗುಡಿ ವಿಜಯಲಕ್ಷ್ಮಿ ಹಾಡಿದ್ದಾರೆ. ಈ ತಿಲ್ಲಾನಗಳೆಲ್ಲ ಪ್ರೀತಿ, ಸಂಭ್ರಮ, ದ್ವೇಷ, ವಂಚನೆ ಇತ್ಯಾದಿ ಮನುಷ್ಯನ ಮೂಡ್ಗಳನ್ನು ಪ್ರತಿಬಿಂಬಿಸುತ್ತವೆ. ತಿಲ್ಲಾನಗಳಿಗೆ ಕಾನಡಾ, ಸೆಂಜುರುತ್ತಿ, ರಾಗೇಶ್ರೀ, ಪಹಾಡಿ ಮುಂತಾದ ಕರ್ನಾಟಕ ಮತ್ತು ಹಿಂದುಸ್ತಾನಿ ರಾಗಗಳನ್ನು ಆಯ್ದುಕೊಳ್ಳಲಾಗಿದೆ.

ಸಂಗೀತ ಸಂಜೆ
ಲಾಲ್ಗುಡಿ 80 ಟ್ರಸ್ಟ್: ಶನಿವಾರ ‘ಅರ್ಪಣಂ’. ಸಂಜೆ 6.15ಕ್ಕೆ ಲಾಲ್ಗುಡಿ ವಿಜಯಲಕ್ಷ್ಮಿ ಅವರಿಂದ ಪಿಟೀಲು ಮತ್ತು ಗಾಯನ, ಮುರಾದ್ ಅಲಿ (ಸಾರಂಗಿ), ಅನಿಲ್ ಶ್ರೀನಿವಾಸನ್ (ಪಿಯಾನೊ), ಕೆ. ಅರುಣ್ ಪ್ರಕಾಶ್ (ಮೃದಂಗ), ಪ್ರವೀಣ್ ಡಿ. ರಾವ್ (ತಬಲಾ), ಬಿ.ಎಸ್. ಪುರುಷೋತ್ತಮ (ಖಂಜಿರ). 7ಕ್ಕೆ ‘ನಾದ ನಟನ - ಲಾಲ್ಗುಡಿ ತಿಲ್ಲಾನಗಳು’ ಸೀಡಿ ಬಿಡುಗಡೆ, ವಿಜಯಲಕ್ಷ್ಮಿ ಅವರಿಂದ ಲಾಲ್ಗುಡಿ ಸಂಯೋಜನೆಗಳ ಗಾಯನ, 8.30ಕ್ಕೆ ಅಭಿನವ ಡಾನ್ಸ್ ಕಂಪೆನಿಯ ನಿರುಪಮಾ ಮತ್ತು ರಾಜೇಂದ್ರ ಅವರಿಂದ ನೃತ್ಯ ನಮನ.

ಅತಿಥಿಗಳು: ರಾಮಕೃಷ್ಣ ಮಠದ ಸ್ವಾಮಿ ಹರ್ಷಾನಂದಜಿ, ಟಿ.ವಿ. ಗೋಪಾಲಕೃಷ್ಣನ್ ಮತ್ತು ಡಾ. ಸುಮಾ ಸುಧೀಂದ್ರ.
ಸ್ಥಳ: ಚೌಡಯ್ಯ ಸ್ಮಾರಕ ಭವನ, ವೈಯಾಲಿ ಕಾವಲ್. ಪ್ರವೇಶ ಉಚಿತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.