ಬೆಂಗಳೂರು: `ಗ್ರಾಮೀಣ ನ್ಯಾಚುರಲ್ ಸಂಸ್ಥೆಯು ನೈಸರ್ಗಿಕ ಕೃಷಿ ಆಹಾರೋತ್ಪನ್ನಗಳ ಸಂತೆ `ಮಿಲೆಟ್ಸ್ ಮೇಳ~ ವನ್ನು ಏ.13 ರಿಂದ 15 ರವರೆಗೆ ಲಾಲ್ಬಾಗ್ನ ಡಾ.ಮರಿಗೌಡ ಸ್ಮಾರಕ ಭವನದಲ್ಲಿ ಏರ್ಪಡಿಸಿದೆ~ ಎಂದು ಸಂಸ್ಥೆಯ ಕಾರ್ಯದರ್ಶಿ ಎಂ.ಎಚ್.ಶ್ರೀಧರಮೂರ್ತಿ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಕೃಷಿಕರಲ್ಲಿ ಆಶಾಕಿರಣ ಮೂಡಿಸಲು ಈ ನೈಸರ್ಗಿಕ ಪದ್ಧತಿಯು ಅವಶ್ಯಕವಾಗಿದೆ. ರಾಸಾಯನಿಕಗಳನ್ನು ಬಳಸದೆ, ಮಾಡುವ ಕೃಷಿ ಒಂದರ್ಥದಲ್ಲಿ ಶೂನ್ಯ ಬಂಡವಾಳದ ಕೃಷಿ ಎಂದು ಹೆಸರಾಗಿದೆ. ರಾಸಾಯನಿಕ ಮುಕ್ತ, ಮಾಲಿನ್ಯ ಮುಕ್ತ ಆಹಾರ ಧಾನ್ಯಗಳನ್ನು ಬೆಳೆಯುವುದು ಸಾಧ್ಯವೆಂಬ ನಂಬಿಕೆಯನ್ನು ನೈಸರ್ಗಿಕ ಕೃಷಿ ಮೂಡಿಸಿದೆ~ ಎಂದರು.

`ಮಿಲೆಟ್ಸ್ ಮೇಳದಲ್ಲಿ ರತ್ನಚೂಡಿ, ಸಿದ್ಧಸಣ್ಣ, ಮಧುಮೇಹ ಅಕ್ಕಿ, ಕೆಂಪಕ್ಕಿ, ಗಂಧಸಾಲೆ, ಸೋನಮಸೂರಿ ಇನ್ನೂ ಮುಂತಾದ 25 ಬಗೆಯ ದೇಸಿ ತಳಿಯ ಹಾಗೂ ಔಷಧಿಯುಕ್ತ ಅಕ್ಕಿಗಳು ಲಭ್ಯವಿರುತ್ತವೆ. ನವಣೆ, ಸಾಮೆ, ಆರ್ಕಾ, ಊದಲು, ಸಜ್ಜೆ, ಜೋಳ, ಕೊರಲು ಇಂತಹ ಕಿರು ಧಾನ್ಯಗಳು ಹೀಗೆ ದೇಶೀಯ ನೈಸರ್ಗಿಕ ಉತ್ಪಾದನೆಯ ಆಹಾರೋತ್ಪನ್ನಗಳು ದೊರೆಯುತ್ತವೆ~ ಎಂದುರು.

`ಈ ತರಹದ ನೈಸರ್ಗಿಕ ಕೃಷಿ ಆಹಾರೋತ್ಪನ್ನಗಳ ಮಾರಾಟ ಸಂತೆಯಿಂದ ನೈಸರ್ಗಿಕವಾಗಿ ಬೆಳೆ ಬೆಳೆದ ಕೃಷಿಕರಿಗೆ ತಾವು ಬೆಳೆದ ಪದಾರ್ಥಗಳಿಗೆ ಸೂಕ್ತ ಬೆಲೆ ದೊರೆಯುತ್ತದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.