ಲಾಹೋರ್ (ಪಿಟಿಐ): ಶಾಲಾ ಪ್ರಶ್ನೆ ಪತ್ರಿಕೆಯಲ್ಲಿ ಧರ್ಮ ನಿಂದನೆಯ ಅಂಶಗಳಿವೆ ಎಂಬ ಕಾರಣಕ್ಕೆ ವಿವಿಧ ಧಾರ್ಮಿಕ ಗುಂಪುಗಳ ಕಾರ್ಯಕರ್ತರು ರೊಚ್ಚಿಗೆದ್ದು ಬಾಲಕಿಯರ, ಶಾಲೆಯೊಂದಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಗುರುವಾರ ಲಾಹೋರ್ನಲ್ಲಿ ನಡೆದಿದೆ.

ಐತಿಹಾಸಿಕ ದಾತಾ ದರ್ಬಾರ್ ಕಟ್ಟಡದ ಬಳಿಯ ಕರೀಂ ಪಾರ್ಕ್ ಹತ್ತಿರ ಇರುವ ಫಾರೂಕಿ ಬಾಲಕಿಯರ ಪ್ರೌಢಶಾಲೆ ಪ್ರತಿಭಟನಾಕಾರರ ಆಕ್ರೋಶಕ್ಕೆ ತುತ್ತಾಗಿದೆ.

ಖಾಸಗಿ ಶಾಲಾಮಂಡಳಿ ಸಿದ್ಧಪಡಿಸಿದ್ದ ಪ್ರಶ್ನೆ ಪತ್ರಿಕೆಯಲ್ಲಿ ಪ್ರವಾದಿ ಮಹಮ್ಮದ್ ಅವರನ್ನು ನಿಂದಿಸುವ ಅಂಶಗಳಿವೆ ಎಂಬ ಸುದ್ದಿ ಹರಡುತ್ತಿದ್ದಂತೆ, ಮಕ್ಕಳ ಪೋಷಕರು, ಜಮಾತ್-ಉದ್-ದವಾ ಮತ್ತು ಇಸ್ಲಾಮಿ ಜಮೈತ್ ತಲ್ಬಾ, ಜಮಾತ್-ಇ-ಇಸ್ಲಾಮಿ ಸೇರಿದಂತೆ ಹಲವು ಧಾರ್ಮಿಕ ಮತ್ತು ವಿದ್ಯಾರ್ಥಿ ಗುಂಪುಗಳು ಶಾಲೆಯನ್ನು ಸುತ್ತುವರಿದವು ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರನ್ನು ಲೆಕ್ಕಿಸದೇ ಶಾಲೆಯೊಳಗೆ ಪ್ರವೇಶಿದ ಪ್ರತಿಭಟನಾಕಾರರು ಶಾಲೆಯ ಮೂರು ಮಹಡಿಗಳನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದರು.

ಶಾಲಾ ವಾಹನಗಳನ್ನು ಜಖಂಗೊಳಿಸಿದರು. ಧರ್ಮನಿಂದನೆ ಎಸಗಿರುವ ಶಾಲೆಯ ಮಾಲೀಕ ಅಸಿಮ್ ಫಾರೂಕಿ ಮತ್ತು ಶಿಕ್ಷಕಿ ಅರೀಫಾ ಅವರನ್ನು ತಮ್ಮ ವಶಕ್ಕೆ ನೀಡಬೇಕೆಂದು ಆಗ್ರಹಿಸಿದರು ಎಂದು ಪ್ರತ್ಯಕ್ಷ ಸಾಕ್ಷಿಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.