ಕರಾಚಿ: ಪಾಕಿಸ್ತಾನ ಟಿ20 ಕ್ರಿಕೆಟ್ ತಂಡದ ನಾಯಕ ಸಲ್ಮಾನ್ ಅಲಿ ಆಘಾ ಅವರನ್ನು ನಾಯಕತ್ವದಿಂದ ಪದಚ್ಯುತಗೊಳಿಸುವ ಸಾಧ್ಯತೆ ದಟ್ಟವಾಗಿದೆ.

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡದ ಪ್ರದರ್ಶನದ ಬಗ್ಗೆ ಪಾಕ್ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರು ಅಸಮಾಧಾನಗೊಂಡಿದ್ದಾರೆ. ಹೀಗಾಗಿ, ಟೂರ್ನಿ ಮುಕ್ತಾಯದ ನಂತರ ಪಾಕ್ ಕ್ರಿಕೆಟ್ ತಂಡದಲ್ಲಿ ಪ್ರಮುಖ ಬದಲಾವಣೆಗಳು ಆಗಲಿವೆ ಎಂದು ತಿಳಿದುಬಂದಿದೆ.

ಆಘಾ, ಬಾಬರ್ ಆಜಂ, ಉಸ್ಮಾನ್ ಖಾನ್ ಸೇರಿ ಕೆಲ ಅನುಭವಿ ಆಟಗಾರರಿಗೆ ವಿಶ್ವಕಪ್ ಟೂರ್ನಿಯೇ ಕೊನೆಯ ಟೂರ್ನಿಯಾಗುವ ಸಾಧ್ಯತೆ ಇದೆ ಎಂದು ಪಿಸಿಬಿ ಮೂಲಗಳು ತಿಳಿಸಿವೆ.

ಆಲ್ರೌಂಡರ್ ಶಾದಾಬ್ ಖಾನ್ ಅಥವಾ ಏಕದಿನ ತಂಡದ ನಾಯಕ ಶಾಹೀನ್ ಶಾ ಅಫ್ರಿದಿ ಅವರಿಗೆ ಟಿ20 ತಂಡದ ನಾಯಕತ್ವ ವಹಿಸುವ ಸಾಧ್ಯತೆ ಇದೆ ಎಂದೂ ತಿಳಿದುಬಂದಿದೆ.

‘ಆಘಾ ನಾಯಕತ್ವದ ಪಾಕ್ ತಂಡವು ಟಿ20 ವಿಶ್ವಕಪ್ನಲ್ಲಿ ಉತ್ತಮ ಪ್ರದರ್ಶನ ತೋರಲಿದೆ ಎಂಬುದಾಗಿ ಆಯ್ಕೆಗಾರರು, ಆಡಳಿತ ಮಂಡಳಿ ಹಾಗೂ ಪಿಸಿಬಿಯಲ್ಲಿನ ಆಪ್ತರು ನಖ್ವಿ ಅವರಿಗೆ ಭರವಸೆ ನೀಡಿದ್ದರು. ಆದರೆ, ಪಾಕ್ ತಂಡವು ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದು, ನಖ್ವಿ ಅಸಮಾಧಾನಗೊಂಡಿದ್ದಾರೆ’ ಎಂದು ಪಿಸಿಬಿ ಮೂಲವೊಂದು ಶನಿವಾರ ತಿಳಿಸಿದೆ.

‘ಆಘಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಲು ಪಿಸಿಬಿ ಮುಖ್ಯಸ್ಥರು ನಿರ್ಧರಿಸಿದ್ದಾರೆ. ತಂಡದ ಇತರ ಆಟಗಾರರ ಭವಿಷ್ಯದ ಬಗ್ಗೆ ಮುಖ್ಯ ಕೋಚ್ ಮೈಕ್ ಹಸನ್ ಹಾಗೂ ಆಯ್ಕೆಗಾರರೊಂದಿಗೆ ಚರ್ಚಿಸಿ, ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.