ಬೆಂಗಳೂರು: ಸಲಿಂಗರತಿ ಶಿಕ್ಷಾರ್ಹ ಅಪರಾಧ ಎಂದು ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ವಿರೋಧಿಸಿ ಲೈಂಗಿಕ ಅಲ್ಪಸಂಖ್ಯಾತರ ಮತ್ತು ಲೈಂಗಿಕ ಕಾರ್ಮಿಕರ ಒಕ್ಕೂಟದ ಸದಸ್ಯರು ನಾಟಕಕಾರ ಗಿರೀಶ್ ಕಾರ್ನಾಡ್ ನೇತೃತ್ವದಲ್ಲಿ ನಗರದ ಪುರಭವನದ ಬಳಿ ಭಾನುವಾರ ಪ್ರತಿಭಟನೆ ನಡೆಸಿದರು.

ಮೈಸೂರು, ಮಂಗಳೂರು, ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ನಗರಕ್ಕೆ ಬಂದಿದ್ದ ಪ್ರತಿಭಟನಾಕಾರರು, ಮಧ್ಯಾಹ್ನ 3.30ರ ಸುಮಾರಿಗೆ ಪುರಭವನದ ಬಳಿ ಜಮಾಯಿಸಿ ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಘೋಷಣೆ ಕೂಗಿದರು. ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳನ್ನು ಕಸಿದುಕೊಳ್ಳುವ ಅಧಿಕಾರ ಯಾರಿಗೂ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಗಿರೀಶ್ ಕಾರ್ನಾಡ್, ‘ಪ್ರೀತಿ ವಿಚಾರದಲ್ಲಿ ಲಿಂಗ ತಾರತಮ್ಯ ಇರಬಾರದು. ಮನುಷ್ಯರನ್ನು ಪ್ರೀತಿಸಲು ಯಾವುದೇ ಕಾನೂನು ಅಡ್ಡಿಯಾಗಬಾರದು. ಈ ಬಗ್ಗೆ ‘ಸಲಿಂಗರತಿ ಅಪರಾಧವಲ್ಲ’ ಎಂದು ದೆಹಲಿ ಹೈಕೋರ್ಟ್ 2009ರಲ್ಲಿ ನೀಡಿದ್ದ ತೀರ್ಪು ನ್ಯಾಯಯುತವಾಗಿತ್ತು. ನಾಲ್ಕು ವರ್ಷಗಳ ಬಳಿಕ ಆ ತೀರ್ಪನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿ ಸಲಿಂಗರತಿ ‘ಶಿಕ್ಷಾರ್ಹ ಅಪರಾಧ’ ಎಂದು ತೀರ್ಪು ನೀಡಿರುವುದು ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳನ್ನು ಕಸಿದುಕೊಳ್ಳುವಂತಿದೆ’ ಎಂದರು.

ನಂತರ ಮಾತನಾಡಿದ ಪರ್ಯಾಯ ಕಾನೂನು ವೇದಿಕೆ ಸಂಘಟನೆಯ ಸದಸ್ಯ ವಿನಯ್ ಶ್ರೀನಿವಾಸ್, ‘ಸಲಿಂಗಿ ಅಥವಾ ಲೈಂಗಿಕ ಅಲ್ಪಸಂಖ್ಯಾತರಾಗಿ ಹುಟ್ಟುವುದು ಆ ಮಗುವಿನ ತಪ್ಪಲ್ಲ. ಅದೊಂದು ಸಹಜ ವಿದ್ಯಮಾನ. ಹೀಗಾಗಿ ಲೈಂಗಿಕ ಅಲ್ಪಸಂಖ್ಯಾತರನ್ನು ದೂಷಿಸುವುದು ಸರಿಯಲ್ಲ. ಆದರೆ, ಸುಪ್ರೀಂ ಕೋರ್ಟ್ ತನ್ನ ತೀರ್ಪಿನ ಮೂಲಕ ಆ ಸಮುದಾಯವನ್ನು ತಿರಸ್ಕಾರದಿಂದ ನೋಡಿದೆ. ಅಲ್ಲದೇ, ಮುಕ್ತವಾಗಿ ಬದುಕುವ, ಪ್ರೀತಿಸುವ, ಅಭಿವ್ಯಕ್ತಪಡಿಸುವ ಮತ್ತು ತಾರತಮ್ಯ ಮುಕ್ತ ಹಕ್ಕುಗಳನ್ನು ಆನಂದಿಸಲು ಲೈಂಗಿಕ ಅಲ್ಪಸಂಖ್ಯಾತರು ಅರ್ಹರಲ್ಲ ಎಂದು ಹೇಳಿದಂತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ತೀರ್ಪಿನ ಬಗ್ಗೆ ಸುಪ್ರೀಂಕೋರ್ಟ್ ಪುನರ್ಪರಿಶೀಲನೆ ನಡೆಸಬೇಕು. ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳನ್ನು ಕಾಯಲು ಸರ್ಕಾರ ಮುಂದಾಗಬೇಕು. ತೀರ್ಪಿನ ವಿರುದ್ಧ ರಾಜ್ಯದೆಲ್ಲೆಡೆ ಹಂತ ಹಂತವಾಗಿ ಹೋರಾಟ ನಡೆಸಲಾಗುವುದು’ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

‘ಮನುಸ್ಮೃತಿಯು ಈ ದೇಶದ ಜನರ ಮನಸ್ಸನ್ನು ಕೆಡಿಸಿ ಹಾಕಿದೆ. ಸಂವಿಧಾನಬದ್ಧವಾಗಿರುವ ದೇಶದ ಆಡಳಿತ ಕೂಡ ಮನುಸ್ಮೃತಿಯ ನೆರಳಿನಲ್ಲಿಯೇ ಇಂದಿಗೂ ಸಾಗಿ ಬಂದಿರುವುದು ದೊಡ್ಡ ದುರಂತ. ಜಾತಿ, ಧರ್ಮ, ಲಿಂಗ ತಾರತಮ್ಯಗಳಿಗೆ ಮನುಸ್ಮೃತಿಯೇ ಮೂಲ’ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಮನುಸ್ಮೃತಿ ಹಾಗೂ ಸಂವಿಧಾನದ ಕಲಂ 377 ಎಂದು ಬರೆದಿದ್ದ ಫಲಕಗಳನ್ನು ದಹನ ಮಾಡಿದರು.

ಗುಡ್ ಆಸ್ ಯು, ಸ್ವಭಾವ, ಸಾಧನಾ ಮಹಿಳಾ ಸಂಘ ಸೇರಿದಂತೆ ವಿವಿಧ ಸ್ವಯಂ ಸೇವಾ ಸಂಘಗಳ (ಎನ್ಜಿಒ) ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.