ಶನಿವಾರ, ಮೇ 28, 2022
26 °C

ಲೇಖಕರಿಗೆ ಅತ್ತಿಮಬ್ಬೆ ಪ್ರಶಸ್ತಿ: ಕಮಲಾ ಹಂಪನಾ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  `ದಾನಚಿಂತಾಮಣಿ ಅತ್ತಿಮಬ್ಬೆ ಹೆಸರಿನ ಪ್ರಶಸ್ತಿ'ಯನ್ನು ಲೇಖಕರಿಗೂ ನೀಡಬೇಕು ಎಂಬ ಸಚಿವೆ ಉಮಾಶ್ರೀ ಅವರ ಅಭಿಪ್ರಾಯಕ್ಕೆ ಲೇಖಕಿ ಪ್ರೊ.ಕಮಲಾ ಹಂಪನಾ ವಿರೋಧ ವ್ಯಕ್ತಪಡಿಸಿದ್ದಾರೆ.ನಗರದಲ್ಲಿ ಮಂಗಳವಾರ ಆಯೋಜಿಸಿದ್ದ `ಶ್ರೀ ವಿಜಯ ಸಾಹಿತ್ಯ ಪ್ರಶಸ್ತಿ' ಪ್ರದಾನ ಸಮಾರಂಭದಲ್ಲಿ ಉಮಾಶ್ರೀ ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕಮಲಾ ಹಂಪನಾ, `ಪಂಪ ಪ್ರಶಸ್ತಿ ಆರಂಭವಾದಂದಿನಿಂದ ಲೇಖಕನಿಗೇ ಸಲ್ಲುತ್ತಿದೆ. ಆದರೆ, ಈ ಪ್ರಶಸ್ತಿ ಲೇಖಕನಿಗಷ್ಟೇ ಸಲ್ಲಬೇಕು ಎಂಬ ನಿಯಮವಿಲ್ಲ.ಇದನ್ನು ಗಮನಿಸಿಯೇ `ದಾನಚಿಂತಾಮಣಿ ಅತ್ತಿಮಬ್ಬೆ ಹೆಸರಿನ ಪ್ರಶಸ್ತಿ'ಯನ್ನು ಪ್ರಾರಂಭಿಸಿ ಪ್ರತಿ ವರ್ಷ ಒಬ್ಬ ಲೇಖಕಿಗೆ ಕೊಡಬೇಕೆಂದು ಹೋರಾಟ ಮಾಡಿದೆ. ಈ ಪ್ರಯತ್ನಕ್ಕೆ ಸರ್ಕಾರ ಸ್ಪಂದಿಸಿ ಪ್ರಶಸ್ತಿಯನ್ನು ಆರಂಭಿಸಿತು. ಈಗ ಮೂಲ ನಿಯಮವನ್ನು ಬದಲಿಸಿ ಲಿಂಗಾತೀತ ಪ್ರಶಸ್ತಿಯಾಗಿಸುವುದು ಸರಿಯಲ್ಲ' ಎಂದು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.