ಶನಿವಾರ, ಫೆಬ್ರವರಿ 27, 2021
31 °C

ಲೈಲಾ ಬೇಕಿರಲಿಲ್ಲ..!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲೈಲಾ ಬೇಕಿರಲಿಲ್ಲ..!

ಪ್ರಿಯದರ್ಶನ್ ಅವರ ಚಿತ್ರ `ತೇಜ್~ಗೆ ಲೈಲಾ... ಲೈಲಾ ಹಾಡು ಬೇಕಿರಲಿಲ್ಲವಂತೆ! ಹಾಗಂತ ಖುದ್ದು ಪ್ರಿಯದರ್ಶನ್ ಅವರೇ ಹೇಳಿಕೊಂಡಿದ್ದಾರೆ.

ಅದು ಅನಗತ್ಯವಾದ ಐಟಂ ಹಾಡು. ನಾನು ಯಾವತ್ತೂ ಅನಗತ್ಯವಾಗಿ ಐಟಂ ಹಾಡುಗಳನ್ನು ಸೇರಿಸುವುದರ ವಿರುದ್ಧವೇ ಇದ್ದೇನೆ. ಆದರೆ ಐಟಂ ಹಾಡುಗಳ ವಿರೋಧಿಯಲ್ಲ. ಕೆಲ ಚಿತ್ರಗಳಲ್ಲಿ ಹಾಡು ಅಗತ್ಯವಿದ್ದಲ್ಲೆಲ್ಲ ಐಟಂಗಳನ್ನು ಬಳಸಿದ್ದೇನೆ. `ತೇಜ್~ ಹಾಲಿವುಡ್ ಚಿತ್ರಗಳನ್ನು ಹೋಲುವಂಥ ಆ್ಯಕ್ಷನ್ ಥ್ರಿಲ್ಲರ್. ಇಲ್ಲಿ ಚಿತ್ರದ ಓಘಕ್ಕೆ ಇದು ತಡೆಯಾಗುತ್ತದೆ. ಆದರೆ ಇದು ನಿರ್ಮಾಪಕರ ಆಯ್ಕೆಯಾಗಿದೆ.

ನಿರ್ಮಾಪಕ ತಮಗೆ ಬೇಕಿದ್ದಂತೆ, ನನ್ನನ್ನು ಹೊರತುಪಡಿಸಿ ಈ ಹಾಡನ್ನು ಚಿತ್ರೀಕರಿಸಿದ್ದಾರೆ. ನನಗೆ ತಿಳಿಸದೆಯೇ ಚಿತ್ರಕ್ಕೆ ಸೇರಿಸಿದ್ದಾರೆ. ಪ್ರೋಮೋಗಳಲ್ಲಿ ಈ ಹಾಡನ್ನು ತೋರಿಸುತ್ತಿದ್ದಾರೆ. ಇದೆಲ್ಲವೂ ಪ್ರಚಾರ ತಂತ್ರವೇ ಆಗಿದೆ ಎಂದೆಲ್ಲ ಪ್ರಿಯದರ್ಶನ್ ಹೇಳಿದ್ದಾರೆ.

ತಾಮ್ರ ವರ್ಣದ ತುಂಡುಡುಗೆಯಲ್ಲಿ ಮಲ್ಲಿಕಾ ಮಿಂಚುತ್ತಿದ್ದಾರೆ. ಮಲ್ಲಿಕಾ ಸೌಂದರ್ಯ, ಸುನಿಧಿ ಚೌಹಾಣ್ ಅವರ ಮಾದಕ ಧ್ವನಿ, ಗಣೇಶ್ ಆಚಾರ್ಯ ಅವರ ಮತ್ತೇರಿಸುವ ಹೆಜ್ಜೆ ಎಲ್ಲವೂ ಚೆನ್ನಾಗಿದೆ ಎಂದು ಹಾಡಿನ ಬಗ್ಗೆ ಮೆಚ್ಚುಗೆ ಸೂಸುತ್ತಲೇ ಈ ಚಿತ್ರಕ್ಕೆ ಮಾತ್ರ ಈ ಹಾಡು ಒಂಚೂರೂ ಹೊಂದುವುದಿಲ್ಲ ಎಂಬ ಅಸಮಾಧಾನವನ್ನೂ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.