ಶನಿವಾರ, ಜೂನ್ 19, 2021
27 °C

ಲೋಕದೊಳಲು ಬೆಟ್ಟಕ್ಕೆ ಕುಡಿಯುವ ನೀರಿನ ಸೌಲಭ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಳಲ್ಕೆರೆ: ತಾಲ್ಲೂಕಿನ ಲೋಕದೊಳಲಿನ ದೊಡ್ಡಹೊಟ್ಟೆ ರಂಗನಾಥಸ್ವಾಮಿ ಬೆಟ್ಟದಲ್ಲಿ ಶನಿವಾರ ಕುಡಿಯುವ ನೀರಿನ ಸೌಲಭ್ಯವನ್ನು ಮೈಸೂರಿನ ಎಂಜಿನಿಯರ್ ಹಾಗೂ ರಂಗನಾಥ ಸ್ವಾಮಿ ಭಕ್ತರಾದ ಬಿ.ಎಸ್. ರಂಗಸ್ವಾಮಿ ಉದ್ಘಾಟಿಸಿದರು.

ಇಲ್ಲಿನ ಬೆಟ್ಟದಲ್ಲಿರುವ ದೇವರ ದರ್ಶನಕ್ಕಾಗಿ ಪ್ರತಿ ಶನಿವಾರ ಮತ್ತು ಭಾನುವಾರ ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಭಕ್ತರು ಬರುತ್ತಾರೆ. ಎರಡು ದಿನಗಳವರೆಗೆ ಇಲ್ಲಿಯೇ ಇದ್ದು, ಅಡುಗೆ ಮಾಡಿಕೊಂಡು ದೇವರಿಗೆ ನೈವೇದ್ಯೆ ಮತ್ತು ಪೂಜೆಗಳನ್ನು ಮುಗಿಸಿ ಹೋಗುತ್ತಾರೆ. ಆದರೆ, ಭಕ್ತರಿಗೆ ಕುಡಿಯಲು ಮತ್ತು ಬಳಸಲು ನೀರಿನ ಸೌಲಭ್ಯ ಇರಲಿಲ್ಲ. ಬೆಟ್ಟದ ಮೇಲಿರುವ ದೇವರ ಪೂಜೆಗೆ ಕೆಳಗಿರುವ ಹೊಂಡದಿಂದ ನೀರು ಹೊತ್ತು ಹೋಗುವ ಪರಿಸ್ಥಿತಿ ಇತ್ತು. ಇದನ್ನು ಮನಗಂಡು ನನ್ನ ಸ್ವಂತ ಖರ್ಚಿನಲ್ಲಿ ಬೋರ್‌ವೆಲ್ ಕೊರೆಸಿ, ಮೋಟಾರ್ ಮತ್ತು ಪೈಪ್‌ಲೈನ್ ಅಳವಡಿಸಿದ್ದೇನೆ ಎಂದು ರಂಗಸ್ವಾಮಿ ಹೇಳಿದರು.

ದೇವಾಲಯದ ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಎಲ್.ಆರ್. ವೀರಭದ್ರಪ್ಪ, ಸೌಮ್ಯಾ ರಂಗಸ್ವಾಮಿ, ರಂಗನಾಯಕಿ ಡಾ.ಲಕ್ಷ್ಮೀ ನಾರಾಯಣಪ್ಪ, ದೇವಾಲಯ ಸಮಿತಿಯ ಅಧ್ಯಕ್ಷ ಸದಾಶಿವಪ್ಪ, ಚಂದ್ರಶೇಖರಪ್ಪ, ಲೋಕೇಶ್, ರಂಗನಾಥ, ಡಿ. ರಮೇಶ್, ಮೃತ್ಯುಂಜಯಪ್ಪ, ಟಿ. ಮಂಜುನಾಥ, ತಿಮ್ಮೇಶ್, ಚರಣರಾಜ್ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.