ಭಾನುವಾರ, ಜನವರಿ 19, 2020
27 °C
ಕೇಜ್ರಿವಾಲ್‌– ಅಣ್ಣಾ ವಾಗ್ವಾದ

ಲೋಕಪಾಲ ಅಂಗೀಕಾರ ಸಾಧ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ/ನವದೆಹಲಿ (ಪಿಟಿಐ­): ಭ್ರಷ್ಟಾ ಚಾರ ವಿರೋಧಿ ಲೋಕಪಾಲ ಮಸೂದೆ ರಾಜ್ಯಸಭೆ­ಯಲ್ಲಿ ಸೋಮ­ವಾರ ಅಂಗೀ­ಕಾರ­­ವಾಗುವ ಸಾಧ್ಯತೆ ದಟ್ಟವಾಗಿರು­ವಾಗಲೇ,  ಈ   ಮಸೂದೆಯ ಬಗ್ಗೆ ಅಣ್ಣಾ ಹಜಾರೆ ಮತ್ತು ಆಮ್‌ ಆದ್ಮಿ ಪಕ್ಷದ ಮುಖಂಡ ಅರವಿಂದ ಕೇಜ್ರಿ­ವಾಲ್‌ ನಡುವಿನ ವಾಗ್ವಾದ

ಮುಂದು­ವರಿದಿದೆ.ರಾಜ್ಯಸಭೆಯಲ್ಲಿ ಚರ್ಚೆ ಇಲ್ಲದೆಯೇ ಮಸೂದೆ ಅಂಗೀಕಾರಕ್ಕೆ ಬೆಂಬಲ ನೀಡುವುದಾಗಿ ಬಿಜೆಪಿ ಭರವಸೆ ನೀಡಿದೆ. ಹೀಗಾಗಿ ಸೋಮವಾರ ಮಸೂದೆ ಅಂಗೀ­ಕಾರ­ವಾಗಬಹುದು ಎಂಬ ವಿಶ್ವಾಸವನ್ನು ಕೇಂದ್ರ ಸರ್ಕಾರ ವ್ಯಕ್ತಪಡಿಸಿದೆ. ಸೋಮ­ವಾರ ಮಸೂದೆ ಅಂಗೀಕಾರವಾಗುವ ಸಾಧ್ಯತೆ ಹೆಚ್ಚಿದೆ ಎಂದು ಸಿಬ್ಬಂದಿ ಖಾತೆ ರಾಜ್ಯ ಸಚಿವ ವಿ. ನಾರಾಯಣಸ್ವಾಮಿ ಅವರೂ ಹೇಳಿದ್ದಾರೆ. ಎಸ್‌ಪಿ ವಿರೋಧ: ಯುಪಿಎಗೆ ಬಾಹ್ಯ ಬೆಂಬಲ ನೀಡುತ್ತಿರುವ ಮುಲಾಯಂ ಸಿಂಗ್‌ ನೇತೃತ್ವದ ಸಮಾಜವಾದಿ ಪಕ್ಷ ಮಸೂದೆಗೆ ತನ್ನ ವಿರೋಧವನ್ನು ಸ್ಪಷ್ಟ­ಪಡಿಸಿದೆ. ಮಸೂದೆ ಅಂಗೀಕಾರ ತಡೆ­ಯಲು ಯಾವ ಮಟ್ಟಕ್ಕೆ ಹೋಗಲೂ ಸಿದ್ಧ ಎಂದು ಎಸ್‌ಪಿ ಶನಿವಾರವೇ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಆದರೆ ಯುಪಿಎಯ ಮಿತ್ರ ಪಕ್ಷಗಳು ಮತ್ತು ಪ್ರತಿಪಕ್ಷ ಬಿಜೆಪಿ  ಮಸೂದೆಗೆ ಬೆಂಬಲ ವ್ಯಕ್ತಪಡಿಸಿವೆ.ಈ ಮಸೂದೆ ಸಿಬಿಐಗೆ ಸಂಪೂರ್ಣ ಸ್ವಾಯತ್ತತೆ ನೀಡುವುದಿಲ್ಲ ಎಂದು ಅರವಿಂದ ಕೇಜ್ರಿವಾಲ್‌ ಹೇಳಿದ್ದಾರೆ. ‘ಮಸೂದೆಯು ಸಿಬಿಐಯನ್ನು ಸ್ವಾಯತ್ತಗೊಳಿಸುವುದಿಲ್ಲ. ಸಿಬಿಐ ಸ್ವಾಯತ್ತಗೊಂಡರೆ 2ಜಿ ಅಥವಾ ಇತರ ಹಗರಣಗಳಲ್ಲಿ ಪ್ರಧಾನಿ ಕೂಡ ಜೈಲಿಗೆ ಹೋಗುವ ಸಾಧ್ಯತೆ ಇದೆ’ ಎಂದು ಕೇಜ್ರಿವಾಲ್‌ ಹೇಳಿದ್ದಾರೆ.ಬೇಸರವಾಗಿದೆ

ಮಸೂದೆ ಅಂಗೀಕಾರವಾದರೆ ನಿರಶನ ನಿಲ್ಲಿಸುವು ದಾಗಿ ಹೇಳಿರುವ ಹಜಾರೆ ನಿಲುವಿ ನಿಂದ   ಬೇಸರ ವಾಗಿದೆ. ಮಸೂದೆ ಭ್ರಷ್ಟಾಚಾರವನ್ನು ತಡೆಯುವುದಿಲ್ಲ. ಬದಲಿಗೆ ಅದು ಭ್ರಷ್ಟರನ್ನು ರಕ್ಷಿಸುತ್ತದೆ 

– ಅರವಿಂದ್‌ ಕೇಜ್ರಿವಾಲ್‌ಉಪವಾಸ ಮಾಡಲಿ

ನಾನು ಮಸೂದೆಯ ಅಂಶಗಳನ್ನು ಸರಿಯಾಗಿ ಓದಿಕೊಂಡಿದ್ದೇನೆ. ಮಸೂದೆಯಲ್ಲಿ ನ್ಯೂನತೆಗಳಿವೆ ಎಂದು ಕೇಜ್ರಿವಾಲ್‌ ಭಾವಿಸಿದರೆ ಅದನ್ನು ಸರಿಪಡಿಸಲು ಅವರು ಉಪವಾಸ ಮಾಡಲಿ

– ಅಣ್ಣಾ ಹಜಾರೆಇನ್ನಷ್ಟು ಸುದ್ದಿಗಳು...

*
ದುರ್ಬಲ ಲೋಕಪಾಲ ಮಸೂದೆ: ಕೇಜ್ರಿವಾಲ್‌ ಅತೃಪ್ತಿ*ದುರ್ಬಲವಲ್ಲ: ಕೇಜ್ರಿವಾಲ್‌ಗೆ ಹಜಾರೆ ತಿರುಗೇಟು

ಪ್ರತಿಕ್ರಿಯಿಸಿ (+)