ಬುಧವಾರ, ಏಪ್ರಿಲ್ 14, 2021
24 °C

ಲೋಕಪಾಲ ಕರಡು ರಚನಾ ಸಮಿತಿಯ ಮೊದಲ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ/ಐಎಎನ್ಎಸ್): 10 ಜನ ಸದಸ್ಯರಿರುವ ಲೋಕಪಾಲ ಕರಡು ರಚನಾ ಸಮಿತಿಯು ಶನಿವಾರ ಬೆಳಿಗ್ಗೆ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರ ಅಧ್ಯಕ್ಷತೆ ಹಾಗೂ ಶಾಂತಿ ಭೂಷಣ್ ಅವರ ಸಹ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಮೊದಲನೆಯ ಚರ್ಚೆಯನ್ನು ನಡೆಸಿತು.ಸಭೆಯಲ್ಲಿ ಹಣಕಾಸು ಸಚಿವರೂ ಸೇರಿದಂತೆ ಗೃಹಸಚಿವ ಪಿ.ಚಿದಂಬರಂ, ಕಾನೂನು ಸಚಿವ ವೀರಪ್ಪ ಮೊಯ್ಲಿ, ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ಹಾಗೂ ಸಲ್ಮಾನ್ ಖುರ್ಷಿದ್ , ಅಣ್ಣಾ ಹಜಾರೆ, ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಅರವಿಂದ್ ಖೇಜರಿವಾಲ್, ಕರ್ನಾಟಕ ಲೋಕಾಯಕ್ತ ಸಂತೋಷ್ ಹೆಗ್ಡೆ, ಹಾಗೂ ಪ್ರಶಾಂತ್ ಭೂಷಣ್ ಅವರು ಭಾಗವಹಿಸಿದ್ದರು.ಒಟ್ಟು 90 ನಿಮಿಷಗಳ ಕಾಲ ಸಭೆ ನಡೆಯಿತು. ನಾಗರಿಕ ಸಮಾಜದ ಸದಸ್ಯರು ಸಭೆಯ ಕಲಾಪಗಳನ್ನು ವಿಡಿಯೋ ಚಿತ್ರೀಕರಿಸಬೇಕೆಂದು ಆಗ್ರಹಿಸಿದರು. ಅದರೆ, ಸಭೆಯ ಕಲಾಪದ ಧ್ವನಿಮುದ್ರಿಕೆಯನ್ನಷ್ಟೆ ಮಾಡಲಾಯಿತು.ಇದೊಂದು ಐತಿಹಾಸಿಕ ಘಟನೆಯಾಗಿದ್ದು, ಅಭೂತಪೂರ್ವ ಸೌಹಾರ್ದ ವಾತಾವರಣದಲ್ಲಿ ಸಭೆ ನಡಯಿತಲ್ಲದೆ ಸದಸ್ಯರೆಲ್ಲರೂ ಪರಿಣಾಮಕಾರಿ ಮಸೂದೆಯನ್ನು ಮುಂಗಾರು ಅಧಿವೇಶನದಲ್ಲೇ ಸಂಸತ್ತಿನಲ್ಲಿ ಮಂಡಿಸಲು ಒಮ್ಮನಸ್ಸಿನಿಂದ ಒಪ್ಪಿಗೆ ಸೂಚಿಸಿದರು ಎಂದು ಸಭೆಯ ಬಳಿಕ ಕಪಿಲ್ ಸಿಬಲ್ ಅವರು ಸುದ್ದಿಗಾರರಿಗೆ ತಿಳಿಸಿದರು. ಮುಂದಿನ ಕರಡು ರಚನಾ ಸಮಿತಿ ಸಭೆಯನ್ನು ಮೇ 2 ರಂದು ನಡೆಸಲು ತೀರ್ಮಾನಿಸಲಾಗಿದೆ ಎಂದೂ ಅವರು  ತಿಳಿಸಿದರು ಅಲ್ಲದೆ ನಾಗರಿಕ ಸಮಾಜದ ಕಡೆಯ ಸದಸ್ಯರು ನೀಡಿದ ಕೆಲವು ಸಲಹೆಗಳು ಅತ್ಯಂತ ಮಹತ್ವಪೂರ್ಣವಾಗಿದೆ ಎಂದು ತಿಳಿಸಿದರು. ಸಭೆಯ ಕಲಾಪವನ್ನು ಧ್ವನಿಮುದ್ರಿಸಲಾಗಿದ್ದು, ಅದನ್ನು ಸಾರ್ವಜನಿಕಗೊಳಿಸಲು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.ಪ್ರಶಾಂತ್ ಭೂಷಣ್ ಅವರು ಸಭೆಯ ವಿವರಗಳನ್ನು ವೆಬ್ ಸೈಟ್ ಮೂಲಕ ಸಾರ್ವಜನಿಕಗೊಳಿಸಿ ದೇಶದ ಹಲವು ಪ್ರದೇಶಗಳಲ್ಲಿನ ನಾಗರಿಕರಿಂದ ಸಲಹೆಗಳನ್ನು ಪಡೆಯಲು ತೀರ್ಮಾನಿಸಲಾಯಿತು ಎಂದು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.