ಬುಧವಾರ, ಜೂನ್ 23, 2021
21 °C
ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ

ಲೋಕಸಭೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಶೀಘ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕೋಡಿ: ‘ಮುಂಬರುವ ಲೋಕಸಭೆ ಚುನಾವಣೆ ಅಭ್ಯರ್ಥಿಗಳ ಆಯ್ಕೆಗಾಗಿ ಕಳೆದ 6 ತಿಂಗಳಿನಿಂದ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಪ್ರದೇಶ ಕಾಂಗ್ರೆಸ್‌ ಚುನಾವಣೆ ಸಮಿತಿ, ನವದೆಹಲಿಯ ಸ್ಕ್ರೀನಿಂಗ್ ಕಮಿಟಿಗಳಲ್ಲಿ ಪರಾಮರ್ಶೆ ನಡೆದಿದೆ. ಮೊದನೇ ಹಂತದ ಚರ್ಚೆ ಪೂರ್ಣಗೊಂಡಿದ್ದು, ಮಾರ್ಚ್‌ 3 ಅಥವಾ 4 ರಂದು ರಾಜ್ಯದ ಎಲ್ಲ ಅಭ್ಯರ್ಥಿಗಳ  ಹೆಸರು ಪ್ರಕಟಿಸ ಲಾಗುವುದು’ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ  ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ‘ಕಾಂಗ್ರೆಸ್‌ ಅಭ್ಯರ್ಥಿ ಗಳ ಆಯ್ಕೆ ಕುರಿತು ಕಾರ್ಯ ಕರ್ತರಲ್ಲಿ ಗೊಂದಲ ಬೇಡ’ ಎಂದರು.

ಪಕ್ಷ ಪ್ರಸಕ್ತ ಚುನಾವಣೆಯಲ್ಲಿ ಹಳಬರಿಗೆ ಅಥವಾ ಹೊಸ ಮುಖಗಳಿಗೆ ಆದ್ಯತೆ ನೀಡಲಿದೆಯೇ? ಎಂಬ ಪ್ರಶ್ನೆಗೆ ‘ ಮಾರ್ಚ್‌ ಮೊದಲ ವಾರದಲ್ಲಿ ಚಿಕ್ಕೋಡಿ ಲೋಕಸಭೆ ಕ್ಷೇತ್ರ ಸೇರಿದಂತೆ ಎಲ್ಲ ಅಭ್ಯರ್ಥಿಗಳ ಹೆಸರು ಪ್ರಕಟವಾ ಗಲಿವೆ’ ಎಂದಷ್ಟೇ ಉತ್ತರಿಸಿದರು.

’ಚಿಕ್ಕೋಡಿ ವಿಧಾನ ಸಭೆ ಕ್ಷೇತ್ರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ₨120 ಕೋಟಿ ಅನುದಾನ ಒದಗಿಸಿದ್ದು, ಕಾಂಗ್ರೆಸ್‌ ಪಕ್ಷದವರೇ ಕ್ಷೇತ್ರದ ಲೋಕ ಸಭೆ ಸದಸ್ಯರಾಗಿ ಆಯ ್ಕೆಯಾದರೆ ಇನ್ನಷ್ಟು ಅಭಿವೃದ್ಧಿ ಕಾಮ ಗಾರಿ ಕೈಗೊಳ್ಳಲು ಸಾಧ್ಯವಿದೆ. ಕ್ಷೇತ್ರದ ಶಾಸಕ ಪ್ರಕಾಶ ಹುಕ್ಕೇರಿ ಸಚಿವರಾಗಿ ರಾಜ್ಯ ಸರ್ಕಾರದ ವಿವಿಧ ಯೋಜನೆ ಗಳಡಿ ಅನುದಾನ ಒದಗಿಸಲು ಯಶಸ್ವಿಯಾಗಿ ದ್ದಾರೆ’ ಎಂದು ಹುಕ್ಕೇರಿ ಅವರ ಕಾರ್ಯವೈಖರಿಗೆ ಜಿ.ಪರಮೇಶ್ವರ ಪ್ರಶಂಸೆ ವ್ಯಕ್ತಪಡಿಸಿದರು.

‘ಪ್ರಶ್ನೆಯೊಂದಕ್ಕೆ ಉತ್ತರಿಸಿದ ಡಾ.ಜಿ. ಪರಮೇಶ್ವರ್‌, ‘ಪ್ರತಿ ಲೋಕಸಭೆ ಚುನಾವಣೆ ಎದುರಾದಾಗಲೂ ತೃತೀಯ ರಂಗ ರಚನೆಯಾಗುವುದು ಸಾಮಾನ್ಯ. ದೇಶದ ಸಮಗ್ರ ಅಭಿವೃದ್ಧಿಗೆ ಸುಸ್ಥಿರ ಸರ್ಕಾರದ ಅವಶ್ಯಕತೆ ಇದೆ. ತೃತೀಯ ರಂಗ ರಚನೆಯಿಂದ ಕಾಂಗ್ರೆಸ್‌ ಮೇಲೆ ಪರಿಣಾಮ ಬೀರದು. ದೇಶದಲ್ಲಿ ಯುಪಿಎ–3 ಸರ್ಕಾರ ಆಡಳಿತಕ್ಕೆ ಬರ ಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ಮತ್ತು ಕೇಂದ್ರ ಸರ್ಕಾರ ಗಳು ಹಲವಾರು ಜನಪರ ಯೋಜನೆ ಗಳನ್ನು, ಐತಿಹಾಸಿಕ ಮಸೂದೆಗಳನ್ನು ಜಾರಿಗೆ ತಂದಿದ್ದು, ಅಭಿವೃದ್ಧಿಪರ ವಿಚಾರಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌ ಲೋಕಸಭೆ ಚುನಾ ವಣೆ ಯನ್ನು ಎದುರಿಸಲಿದೆ’ ಎಂದು ಹೇಳಿದರು.ಡಾ.ಜಿ.ಪರಮೇಶ್ವರ್‌ ರಾಜ್ಯದ ಉಪ ಮುಖ್ಯಮಂತ್ರಿಯಾಗಬೇಕು ಎಂದು ಅಭಿಮಾನಿಗಳ ಒತ್ತಡವಿದೆ ಎಂಬ ಪ್ರಶ್ನೆಗೆ ನೋ ಕಾಮೆಂಟ್ಸ್‌ ಎಂದಷ್ಟೆ ಪ್ರತಿಕ್ರಿಯಿಸಿದರು. ಸಚಿವ ಪ್ರಕಾಶ ಹುಕ್ಕೇರಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸತೀಶ ಕುಲಕರ್ಣಿ, ಮಹಾವೀರ ಮೋಹಿತೆ, ಪುರಸಭೆ ಅಧ್ಯಕ್ಷ ನರೇಂದ್ರ ನೇರ್ಲೆಕರ, ಉಪಾಧ್ಯಕ್ಷ ಗುಲಾಬ ಹುಸೇನ್ ಬಾಗವಾನ್, ಶಾಮ ರೇವಡೆ, ಎ.ಎಲ್‌. ಪಾಟೀಲ, ಲಕ್ಷ್ಮಣರಾವ್ ಚಿಂಗಳೆ  ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.