ಶುಕ್ರವಾರ, ಮೇ 27, 2022
28 °C

ಲೋಕಾಯುಕ್ತ ಬಲೆಗೆ ಬಿಇಒ ಕಚೇರಿ ಗುಮಾಸ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಲೋಕಾಯುಕ್ತ ಬಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಗುಮಾಸ್ತ ಗುರುವಾರ ಸಿಕ್ಕಿಬಿದ್ದಿದ್ದಾರೆ.ಕನ್ನಡ ಮಾಧ್ಯಮದಲ್ಲಿ ಉತ್ತೀರ್ಣರಾದ ಶಿಕ್ಷಕರಿಗೆಸರ್ಕಾರ ನೀಡುವ ಅನುದಾನದ ಕಡತ ಸಿದ್ಧಪಡಿಸಲು ಎಫ್‌ಡಿಎ ಬಾಲಕೃಷ್ಣ ಅವರು ನಿವೃತ್ತ ಶಿಕ್ಷಕಿ ಚಿಕ್ಕಮ ಗಳೂರು ನಗರದ ಶಾಂತಕುಮಾರಿ ಅವರಿಂದ ಮೂರು ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದರು.ಶಾಂತಕುಮಾರಿ ಅವರು ಕ್ಷೇತ್ರ ಶಿಕ್ಷ ಣಾಧಿಕಾರಿಗಳ ಕಚೇರಿಗೆ ಅರ್ಜಿ ನೀಡಿ ಸುಮಾರು ನಾಲ್ಕೈದು ತಿಂಗಳುಗಳಾಗಿದ್ದವು. ಕಡತ ಸಿದ್ಧಪಡಿಸಲು ಹಣಕ್ಕೆಒತ್ತಾಯಿಸಿದ್ದರಿಂದ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು.ಹಾಸನ ಲೋಕಾಯುಕ್ತ ಡಿವೈಎಸ್‌ಪಿ ರಾಮನಾಯಕ್ ಮತ್ತು ಇನ್ಸ್‌ಪೆಕ್ಟರ್ ಗುರುರಾಜು ಮತ್ತು ಸಿಬ್ಬಂದಿ ದಾಳಿ ನಡೆಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.