ಭಾನುವಾರ, ಜನವರಿ 19, 2020
29 °C

ಲೋಡ್‌ಶೆಡ್ಡಿಂಗ್‌ ಖಂಡಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಂಗಾರಪೇಟೆ:  ಅನಿಯಮಿತ ವಿದ್ಯುತ್‌ ಕಡಿತ ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಕಾರ್ಯ­ಕರ್ತರು ಶುಕ್ರವಾರ ಪಟ್ಟಣದ ಬೆಸ್ಕಾಂ ಕಚೇರಿ ಮುಂಭಾಗ ಧರಣಿ ನಡೆಸಿದರು. ಕಳೆದ ಕೆಲ ವರ್ಷಗಳಿಂದ ತಾಲ್ಲೂಕಿ­ನಲ್ಲಿ ಬರ ಆವರಿಸಿದೆ. ಬರದ ಛಾಯೆ­ಯಲ್ಲೇ ಬಿದ್ದ ಅಲ್ಪಸ್ವಲ್ಪ ಮಳೆಗೆ ಬೆಳೆ ಬೆಳೆಯಲಾಗಿದೆ.

ಆದರೆ ಯಾವುದೇ ಮುನ್ಸೂಚನೆ ಇಲ್ಲದೆ ಒಂದು ತಿಂಗಳಿಂದ ಬೆಸ್ಕಾಂ ಇಲಾಖೆ ವಿದ್ಯುತ್‌ ಕಡಿತ ಮಾಡುತ್ತಿದೆ. ಇದರಿಂದ ಬೆಳೆ ಒಣ­ಗಿದ್ದು, ಈಗಾಗಲೇ ಕಷ್ಟಕ್ಕೆ ಸಿಲುಕಿರುವ ರೈತರ ಸ್ಥಿತಿ ಮತ್ತಷ್ಟು ಜಟಿಲಗೊಂಡಿದೆ ಎಂದು ಪ್ರತಿಭಟನಾ ನಿರತರು ಆಪಾದಿಸಿದರು. ಗ್ರಾಮೀಣ ಪ್ರದೇಶದಲ್ಲಿ ನಿತ್ಯ ಎಂಟು ಗಂಟೆ ತ್ರಿಪೇಸ್‌, 12 ಗಂಟೆ ಸಿಂಗಲ್‌ ಪೇಸ್‌ ವಿದ್ಯುತ್‌ ನೀಡಬೇಕು ಎಂಬ ಸರ್ಕಾರದ ಆದೇಶವಿದೆ. ಆದರೆ ಕನಿಷ್ಠ 3 ಗಂಟೆ ಕೂಡ ವಿದ್ಯುತ್‌ ಪೂರೈಕೆ ಆಗುತ್ತಿಲ್ಲ. ಅಲ್ಲದೆ ವಿದ್ಯುತ್‌ ಕಣ್ಣಾ ಮುಚ್ಚಾಲೆಯಿಂದ ವಿದ್ಯಾರ್ಥಿಗಳಿಗೆ ಕೂಡ ತೊಂದರೆ ಆಗುತ್ತಿದೆ. ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.ಸಮಸ್ಯೆ ನಿವಾರಿಸದಿದ್ದರೆ ರಾಜ್ಯ­ದಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. ಸಂಘದ ರಾಜ್ಯ ಕಾರ್ಯದರ್ಶಿ ಅಬ್ಬಣಿ ಶಿವಪ್ಪ, ತಾಲ್ಲೂಕು ಘಟಕ ಅಧ್ಯಕ್ಷ ಟಿ.ಎನ್‌.ರಾಮೇಗೌಡ, ಮುನಿ­ಸ್ವಾಮಿ­ಗೌಡ, ಚಲಪತಿ, ಮೋಹನ್‌, ನಾರಾಯಣಸ್ವಾಮಿ, ಶಿವಕುಮಾರ್, ಎಂ.ಶೋಭಾ, ವೆಂಕಟಪ್ಪ, ಪ್ರಸನ್ನ, ಸುಬ್ರಮಣಿ, ವೆಂಕಟಸ್ವಾಮಿ ಇತರರು ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)