ಬೆಂಗಳೂರು: ಕಳೆದ ಮಾರ್ಚ್ 2ರಂದು ವಕೀಲರು, ಪೊಲೀಸರು ಹಾಗೂ ಮಾಧ್ಯಮದವರ ನಡುವೆ ನಡೆದಿರುವ ಜಟಾಪಟಿಗೆ ಸಂಬಂಧಿಸಿದಂತೆ ಹೈಕೋರ್ಟ್ನಲ್ಲಿ ದಾಖಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯಿಂದ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಗುರುವಾರ ಹಿಂದಕ್ಕೆ ಸರಿದರು.

ಮಾಧ್ಯಮ ಹಾಗೂ ಪೊಲೀಸರ ವಿರುದ್ಧ ವಕೀಲರು ದಾಖಲು ಮಾಡಿರುವ ಹತ್ತಾರು ಅರ್ಜಿಗಳ ವಿಚಾರಣೆಯನ್ನು ಸುಮಾರು ಒಂದು ತಿಂಗಳಿಂದ ನ್ಯಾ.ಸೇನ್ ನೇತೃತ್ವದ ವಿಭಾಗೀಯ ಪೀಠ ನಡೆಸುತ್ತಿತ್ತು. ವಿಚಾರಣೆ ಇನ್ನೇನು ಅಂತಿಮ ಹಂತಕ್ಕೆ ಬಂದಿತ್ತು. ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆ, ಬೇಡವೇ ಎಂಬ ಬಗ್ಗೆ ಗುರುವಾರ ತೀರ್ಮಾನ ಆಗಲಿದೆ ಎಂದೇ ಭಾವಿಸಲಾಗಿತ್ತು.

ಆದುದರಿಂದ ವಕೀಲರು, ಮಾಧ್ಯಮದವರು ಹಾಗೂ ಪೊಲೀಸರು ತೀರ್ಪಿಗಾಗಿ ಕಾತರರಾಗಿದ್ದರು. ಆದರೆ ನ್ಯಾ.ಸೇನ್ ಅವರು ತಾವು ಈ ಅರ್ಜಿ ವಿಚಾರಣೆಯಿಂದ ಹಿಂದಕ್ಕೆ ಸರಿಯುತ್ತಿರುವ ಬಗ್ಗೆ ಪ್ರಕಟಿಸುತ್ತಿದ್ದಂತೆ ಎಲ್ಲರೂ ಆಶ್ಚರ್ಯ ಚಕಿತರಾದರು.

ನ್ಯಾಯಮೂರ್ತಿಗಳು ಹೇಳಿದ್ದೇನು?: `ಘಟನೆ ನಡೆದ ದಿನ (ಮಾರ್ಚ್ 2) ಹಾಗೂ ನಂತರದ ದಿನಗಳಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿ ನಾನು ವೈಯಕ್ತಿಕವಾಗಿ ನನ್ನ ಕರ್ತವ್ಯ ನಿರ್ವಹಿಸಿದ್ದೇನೆ. ಘಟನೆ ದಿನ ಹಲವಾರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ. ಆದುದರಿಂದ ನನ್ನ ವೈಯಕ್ತಿಕ ಅಭಿಪ್ರಾಯಗಳು ತೀರ್ಪಿನ ಮೇಲೆ ಆಗಬಾರದು ಎಂಬ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಂಡಿದ್ದೇನೆ~ ಎಂದು ನ್ಯಾ. ಸೇನ್ತಿಳಿಸಿದ್ದಾರೆ.

`ಮಾರ್ಚ್ 2ರಂದು ವಿಷಯ ತಿಳಿದ ನಂತರ ಕೋರ್ಟ್ ಕಲಾಪ ಅರ್ಧಕ್ಕೆ ನಿಲ್ಲಿಸಿದ್ದೆ. ಗೃಹ ಸಚಿವ, ಕಾನೂನು ಸಚಿವ ಹಾಗೂ ಡಿಜಿಪಿಯವರ ಜೊತೆ ಅಂದು ಹಲವು ಸುತ್ತಿನ ಚರ್ಚೆ ನಡೆಸಿದ್ದೇನೆ. ಯಾವ ರೀತಿಯಲ್ಲಿ ಕಾರ್ಯ ಪ್ರವೃತ್ತರಾಗಬೇಕು ಎಂಬ ಬಗ್ಗೆ ಅವರಿಗೆ ಸೂಚನೆಗಳನ್ನು ನೀಡಿದ್ದೆ. ಬೆಂಗಳೂರು ವಕೀಲರ ಸಂಘದ ಪದಾಧಿಕಾರಿಗಳ ಜೊತೆಯಲ್ಲಿಯೂ ಚರ್ಚಿಸಿದ್ದೆ. ಆದುದರಿಂದ ಘಟನೆಗಳನ್ನು ಸಮೀಪದಿಂದ ನಾನು ಬಲ್ಲೆ.

ಇದು ತೀರ್ಪಿನ ಮೇಲೆ ಪ್ರಭಾವ ಬೀರಬಾರದು ಎನ್ನುವುದು ನನ್ನ ಅನಿಸಿಕೆ~ ಎಂದು ಅವರು ತಿಳಿಸಿದರು.
`ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಲು ನನಗೆ ಯಾರಿಂದಲೂ ಒತ್ತಾಸೆ ಬಂದಿಲ್ಲ ಎನ್ನುವುದನ್ನು ನಾನು ಸ್ಪಷ್ಟಪಡಿಸುತ್ತಿದ್ದೇನೆ~ ಎಂದೂ ನ್ಯಾ.ಸೇನ್ ತಿಳಿಸಿದ್ದಾರೆ. ವಕೀಲರು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಅವರು ಏ.16ಕ್ಕೆ ಮುಂದೂಡಿದರು. ಈ ಅರ್ಜಿಗಳು ಬೇರೆ ನ್ಯಾಯಮೂರ್ತಿಗಳ ಮುಂದೆ ಅಂದು ವಿಚಾರಣೆಗೆ ಬರಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.