ಸೋಮವಾರ, ಜೂನ್ 14, 2021
22 °C

ವಕೀಲರ ಮೇಲೆ ಹಲ್ಲೆ: ಸಿ.ಡಿ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಮಾಧ್ಯಮ ಪ್ರತಿನಿಧಿಗಳ ಮೇಲೆ ವಕೀಲರು ನಡೆಸಿದ ಹಲ್ಲೆ ಪ್ರಕರಣದಲ್ಲಿ ವಕೀಲರ ಮೇಲೂ ಪೊಲೀಸ್‌ರಿಂದ ದೈಹಿಕ ದೌರ್ಜನ್ಯಗಳು ನಡೆದಿದ್ದು. ಈ ಬಗ್ಗೆಯು ಮಾಧ್ಯಮಗಳು ಬೆಳಕು ಚೆಲ್ಲಿ, ಸಾರ್ವಜನಿಕರಿಗೆ ತಿಳಿಯಪಡಿಸಬೇಕು~ ಎಂದು ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ ಮನವಿ ಮಾಡಿದರು.`ವಕೀಲರ ಮೇಲೆ ನಡೆದ ಹಲ್ಲೆಯನ್ನು ಒಳಗೊಂಡ ಸಿ.ಡಿಯನ್ನು ಮಾಧ್ಯಮ ಪ್ರತಿನಿಧಿಗಳಿಗೆ ಪ್ರದರ್ಶಿಸುತ್ತಾ. ಈ ಪ್ರಕರಣದಲ್ಲಿ  ಮಹಿಳಾ ವಕೀಲರು ಸೇರಿದಂತೆ ಇತರೆ ವಕೀಲರ ಮೇಲೆ ಹಲ್ಲೆ ನಡೆದಿದ್ದು, ಈ ಬಗ್ಗೆಯು ಮಾಧ್ಯಮಗಳು ಪ್ರಚಾರ ನಡೆಸಬೇಕು~ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.`ಮಾಧ್ಯಮ ಮತ್ತು ವಕೀಲರ ನಡುವೆ ಸಂಘರ್ಷ ಮುಂದುವರಿಯುವುದು ಬೇಡ. ಪ್ರಸ್ತುತ ಸಂದರ್ಭದಲ್ಲಿ ಸಂಧಾನದ ಅಗತ್ಯವಿದ್ದು, ಈ ಸಮಸ್ಯೆಯನ್ನು ಇಲ್ಲೇ ಇರ್ತಥ್ಯಪಡಿಸಿಕೊಳ್ಳುವ ನಿಟ್ಟಿನಲ್ಲಿ ಎರಡು ವೃತ್ತಿಯಲ್ಲಿರುವ ಹಿರಿಯರು ಚಿಂತನೆ ನಡೆಸಬೇಕು~ ಎಂದು ಹೇಳಿದರು.`ಕೋಟ್ ಆವರಣದಲ್ಲಿ ಕರ್ತವ್ಯ ನಿರ್ವಹಿಸುವ ಮಾಧ್ಯಮ ಪ್ರತಿನಿಧಿಗಳಿಗೆ ಸೂಕ್ತ ಭದ್ರತೆ ಒದಗಿಸಲು ಮತ್ತು ಇಂತಹ ಘಟನೆಗಳು ಮರುಕಳಿಸದಂತೆ ವಕೀಲರ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಆದರೆ ಮಾಧ್ಯಮಗಳಲ್ಲಿ ವಕೀಲರ ಕುರಿತು ಪ್ರಸಾರವಾಗುತ್ತಿರುವ ಅವಹೇಳನಕಾರಿ ಪದ ಪ್ರಯೋಗವನ್ನು ಕೂಡಲೇ ನಿಲ್ಲಿಸಬೇಕು~ ಎಂದು ಅವರು ಒತ್ತಾಯಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.