ಮಂಗಳವಾರ, ಜೂನ್ 22, 2021
27 °C

ವಚನಗಳು ಸರ್ವಕಾಲಕ್ಕೂ ಪ್ರಸ್ತುತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರಿಯೂರು: ನುಡಿದಂತೆ ನಡೆದು ತೋರಿಸಿದ ವಚನಕಾರರಿಂದ ರಚಿಸಲ್ಪಟ್ಟ ವಚನಗಳು ಬದುಕಿನ ಅನುಭವಗಳನ್ನು ಬಿಚ್ಚಿಡುತ್ತಾ ಹೋಗುತ್ತವೆ. ಹೀಗಾಗಿ, ವಚನಗಳು ಎಲ್ಲಾ ಕಾಲಕ್ಕೂ ಪ್ರಸ್ತುತವಾಗಿವೆ ಎಂದು ಪುರಸಭಾಧ್ಯಕ್ಷೆ ಮಂಜುಳಾ ವೆಂಕಟೇಶ್ ಹೇಳಿದರು.

ನಗರದಲ್ಲಿ ಶುಕ್ರವಾರ ವಂದೇಮಾತರಂ ಜಾಗೃತಿ ವೇದಿಕೆ ವಿದ್ಯಾರ್ಥಿಘಟಕದ ವತಿಯಿಂದ  ಬಿ.ಇಡಿ, ಡಿ.ಇಡಿ,. ಪ್ರಶಿಕ್ಷಣಾರ್ಥಿಗಳಿಗೆ ಏರ್ಪಡಿಸಿದ್ದ ಜಿಲ್ಲಾಮಟ್ಟದ ವಚನ ಗಾಯನ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ರೇವಣಸಿದ್ದಪ್ಪ, ಸರ್ವರಿಗೂ ಸಮಪಾಲು-ಸಮಬಾಳು ತತ್ವವನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು, ಇತರರಿಗೂ ಅಳವಡಿಸಿಕೊಳ್ಳುವಂತೆ ಬೋಧಿಸಿದವರು ವಚನಕಾರರು. ಜನಸಾಮಾನ್ಯರ ಬದುಕನ್ನು ಹಸನುಗೊಳಿಸುವ ತುಡಿತವನ್ನು ವಚನಗಳಲ್ಲಿ ಕಾಣಬಹುದು ಎಂದು ಹೇಳಿದರು.

ತಾಲ್ಲೂಕು ಮಕ್ಕಳ ಸಾಹಿತ್ಯ ವೇದಿಕೆ ಅಧ್ಯಕ್ಷ ಎಸ್.ಜಿ. ರಂಗಸ್ವಾಮಿ ಸಕ್ಕರ ಮಾತನಾಡಿ, ಅಸಮಾನತೆ, ಶೋಷಣೆ ವಿರುದ್ಧದ ಹೋರಾಟ, ಸಾಮಾಜಿಕ ಕಾಳಜಿ, ಸಾಮಾಜಿಕ ಪ್ರಜ್ಞೆಯ ಜತೆಗೆ ಜನರಲ್ಲಿ ದಾಸೋಹ ಮತ್ತು ಕಾಯಕ ಪ್ರಜ್ಞೆಯನ್ನು ಬಿತ್ತಿದ ಕೀರ್ತಿ ಶರಣರಿಗೆ ಸಲ್ಲಬೇಕು. ಶರಣರ ವಚನಗಳು ಶ್ರೀಸಾಮಾನ್ಯರ ಬದುಕಿಗೆ ಹತ್ತಿರವಾಗಿದ್ದ ಕಾರಣಕ್ಕೆ ಇದುವರೆಗೂ ಮೌಲ್ಯ ಉಳಿಸಿಕೊಂಡಿವೆ ಎಂದು ಹೇಳಿದರು.

ಪುರಸಭೆ ಉಪಾಧ್ಯಕ್ಷೆ ಜ್ಯೋತಿಲಕ್ಷ್ಮೀ, ಟಿ. ಸಂಜಯ್, ವಿ. ಅರುಣ್‌ಕುಮಾರ್, ಪಿ. ಕೃಷ್ಣಮೂರ್ತಿ, ಎಂ. ಶರಣಪ್ಪ, ಎಂ.ಎಲ್. ಗಿರಿಧರ, ಎನ್. ಬಾಲು, ಸಿ. ಪರಮೇಶ್, ಎನ್. ಪಾಂಡು, ಮಸ್ಕಲ್‌ನಾಗರಾಜು, ಜಿ.ಆರ್. ರಮೇಶ್, ಬಿ. ಗಿರೀಶ್ ಹಾಜರಿದ್ದರು. ಇ.ಜಿ.ಎಸ್. ಪ್ರಸನ್ನ ಸ್ವಾಗತಿಸಿದರು. ಸಂತೋಷ್‌ಕುಮಾರ್ ವಂದಿಸಿದರು.

ಅಂಚೆ ವಿಮೆಗೆ ಸಲಹೆ

155 ವರ್ಷಗಳ ಇತಿಹಾಸವಿರುವ ಭಾರತೀಯ ಅಂಚೆ ಇಲಾಖೆ ಜಾರಿಗೊಳಿಸಿರುವ ಗ್ರಾಮೀಣ ಅಂಚೆ ವಿಮೆಯನ್ನು ಪಡೆಯುವ ಮೂಲಕ ಬದುಕಿಗೆ ಭದ್ರತೆ ಹೊಂದಬೇಕು ಎಂದು ಚಿತ್ರದುರ್ಗದ ಅಂಚೆ ಇಲಾಖೆಯ ಅಧೀಕ್ಷಕ ದಿನೇಶ್‌ಕರೆ ಕರೆ ನೀಡಿದರು.

ತಾಲ್ಲೂಕಿನ ಯರಬಳ್ಳಿ ಅಂಚೆ ಕಚೇರಿಯಲ್ಲಿ ಶನಿವಾರ `ಪಿಎಲ್‌ಐ ಮೇಳ-2012~ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಅಂಚೆ ವಿಮೆ ಹಳ್ಳಿಗರ ಆಶಾ ಜ್ಯೋತಿ ಎಂದರು.

ಗ್ರಾ.ಪಂ. ಸದಸ್ಯ ಮಂಜುನಾಥ್, ಚಂದ್ರಶೇಖರ್, ಜಯಣ್ಣ, ಉಮಾಪತಿ, ಚನ್ನಬಸಪ್ಪ, ಚನ್ನಬಸವಶಾಸ್ತ್ರಿ, ರಂಗಸ್ವಾಮಿ ಇತರರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.